ಅಫ್ಘಾನಿಸ್ತಾನದಿಂದ ಹುಡುಗಿಯೊಬ್ಬಳು ಕಳಿಸಿದ್ದ ಕಾಬೂಲ್ ನದಿಯ ನೀರಿನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶ್ರೀ ರಾಮಜನ್ಮಭೂಮಿಯಲ್ಲಿ ಜಲಾಭಿಷೇಕ ಮತ್ತು ಪೂಜೆ ನೆರವೇರಿಸಿದ್ದಾರೆ. ಇಂಥದ್ದೊಂದು ವಿಶೇಷ ಘಟನೆ ಇಂದು ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಬಾಲಕಿ ಕಳಿಸಿದ್ದ ಕಾಬೂಲ್ ನದಿ ನೀರನ್ನು ಗಂಗಾಜಲದೊಂದಿಗೆ ಮಿಶ್ರಣ ಮಾಡಿ, ಮಂದಿರ ನಿರ್ಮಾಣದ ಜಾಗಕ್ಕೆ ಜಲಾಭಿಷೇಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಾಬೂಲ್ ನದಿಯ ನೀರನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದಳು. ಅದನ್ನು ಅಯೋಧ್ಯೆ ಶ್ರೀರಾಮ ಜನ್ಮಭೂಮಿಗೆ ಸಮರ್ಪಿಸಬೇಕು ಎಂಬುದು ಆಕೆಯ ಮನವಿಯಾಗಿತ್ತು. ಅದರಂತೆ ನಡೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹಾಗೇ ಅಯೋಧ್ಯೆಯಲ್ಲಿ ನವೆಂಬರ್ 1ರಂದು ನಡೆಯಲಿರುವ ಅದ್ದೂರಿ ದೀಪೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಆದರೂ ಈ ಮಧ್ಯೆ ಅಲ್ಲಿನ ಕೆಲವರು ಭಾರತ ಮತ್ತು ಇಲ್ಲಿನ ದೇವಸ್ಥಾನದ ಬಗ್ಗೆ ಪವಿತ್ರ ಭಾವನೆ ಹೊಂದಿದ್ದಾರೆ. ಅವರ ಭಾವನೆಗೆ ಬೆಲೆ ಕೊಡುವುದು ತುಂಬ ಮುಖ್ಯ. ಇಂದು ದೀಪೋತ್ಸವ ಸಿದ್ಧತೆ ಪರಿಶೀಲನೆ ಇದ್ದರೂ ಕೂಡ, ನನ್ನ ಮೊದಲ ಆದ್ಯತೆ, ಬಾಲಕಿ ಕಳಿಸಿದ ಕಾಬೂಲ್ ನದಿ ನೀರನ್ನು ಶ್ರೀರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಸಮರ್ಪಿಸುವುದೇ ಆಗಿತ್ತು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ನವೆಂಬರ್ 1ರಿಂದ 5ರವರೆಗೆ ದೀಪೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಸುಮಾರು 9 ಲಕ್ಷ ಹಣತೆಗಳು ಬೆಳಗಲಿವೆ ಎಂದು ಯೋಗಿ ಆದಿತ್ಯನಾಥ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಂದರೆ ಕೇಂದ್ರ ಮತ್ತು ರಾಜ್ಯ ವಸತಿ ಯೋಜನೆಗಳ ಅನುಕೂಲವನ್ನು ಸುಮಾರು 9 ಲಕ್ಷ ಫಲಾನುಭವಿಗಳು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ 9 ಲಕ್ಷ ಮಣ್ಣಿನ ದೀಪಗಳು ಬೆಳಗಲಿವೆ ಎಂದಿದ್ದಾರೆ.
लखनऊ स्थित सरकारी आवास पर पत्रकार बंधुओं के साथ वार्ता… https://t.co/Hc5XoXSl8r
— Yogi Adityanath (@myogiadityanath) October 31, 2021
ಇದನ್ನೂ ಓದಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ ಮೇಲೆ ಪ್ರಧಾನಿ ಮೋದಿ ಕಣ್ಣು; ನವೆಂಬರ್ 3ರಂದು ಪರಿಶೀಲನಾ ಸಭೆ
ಅಡೆನ್ನಲ್ಲಿ ಮತ್ತೆ ಸ್ಫೋಟ, 6 ಮಂದಿ ಸಾವು; ಈ ಬಾರಿ ಏರ್ಪೋರ್ಟ್ನಲ್ಲಿ ನಡೆದ ದುರಂತ