AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡೆನ್​ನಲ್ಲಿ ಮತ್ತೆ ಸ್ಫೋಟ, 6 ಮಂದಿ ಸಾವು; ಈ ಬಾರಿ ಏರ್​​ಪೋರ್ಟ್​​ನಲ್ಲಿ ನಡೆದ ದುರಂತ

ಈ ತಿಂಗಳ ಪ್ರಾರಂಭದಲ್ಲಿ ಅಡೆನ್​ ನಗರದಲ್ಲಿ ಇಲ್ಲಿನ ಗವರ್ನರ್​​​ ಕಾರನ್ನು ಗುರಿಯಾಗಿಸಿಕೊಂಡು ಬಾಂಬ್​ ದಾಳಿ ನಡೆದಿತ್ತು. ಆಗಲೂ ಕೂಡ ಆರು ಮಂದಿ ಮೃತಪಟ್ಟಿದ್ದರು.

ಅಡೆನ್​ನಲ್ಲಿ ಮತ್ತೆ ಸ್ಫೋಟ, 6 ಮಂದಿ ಸಾವು; ಈ ಬಾರಿ ಏರ್​​ಪೋರ್ಟ್​​ನಲ್ಲಿ ನಡೆದ ದುರಂತ
ಅಡೆನ್​ ಏರ್​ಪೋರ್ಟ್​ ಬಳಿ ಸ್ಫೋಟ
TV9 Web
| Edited By: |

Updated on: Oct 31, 2021 | 4:42 PM

Share

ಯೆಮೆನ್​​ನ ದಕ್ಷಿಣ ಬಂದರು ನಗರ ಅಡೆನ್​​ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸ್ಫೋಟವುಂಟಾಗಿ ಆರು ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಇದು ಬಾಂಬ್​ /ಇನ್ಯಾವುದೇ ಸ್ಫೋಟಕಗಳಿಂದ ದಾಳಿ ನಡೆಸಿದ್ದಾ? ಅಥವಾ ಸ್ಥಳೀಯವಾಗಿ ಯಾವುದಾದೂ ವಸ್ತು ಪ್ರಬಲ ಸ್ಫೋಟವಾಯಿತಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.  

ಏರ್​ಪೋರ್ಟ್​ ಗೇಟ್​ ಬಳಿ ಒಂದು ಸಣ್ಣ ಟ್ರಕ್​​ ಪೆಟ್ರೋಲಿಯಂ ಉತ್ಪನ್ನಗಳನ್ನು ಒಯ್ಯುತ್ತಿತ್ತು. ಇದೇ ಟ್ರಕ್​​ನಲ್ಲಿ ಸ್ಫೋಟವುಂಟಾಗಿದೆ. ಸ್ಥಳದಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಅದೆಷ್ಟರ ಮಟ್ಟಿಗೆ ಪ್ರಬಲವಾಗಿತ್ತು ಎಂದರೆ ಆ ಶಬ್ದ ನಗರಾದ್ಯಂತ ಕೇಳಿದೆ. ಹತ್ತಿರದ ಮನೆಗಳ ಬಾಗಿಲು, ಕಿಟಕಿಗಳೆಲ್ಲ ಒಡೆದುಹೋಗಿವೆ.  ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಯೆಮೆನ್​ ಸರ್ಕಾರದ ತಾತ್ಕಾಲಿಕ ನೆಲೆ ಇದೇ ಅಡೆನ್​ ನಗರ. ಆದರೆ ಕಳೆದ 7 ವರ್ಷಗಳಿಂದಲೂ ಇಲ್ಲಿ ಹೌತಿ ಪ್ರತ್ಯೇಕತಾ ಗುಂಪಿನ ದಾಳಿ ನಡೆಯುತ್ತಲೇ ಇದೆ. ಅದರೊಂದಿಗೆ ಈಗ ಒಂದು ವರ್ಷದಿಂದ ಅಡೆನ್​​ನಲ್ಲಿಯೇ ಸರ್ಕಾರ ಮತ್ತು ದಕ್ಷಿಣ ಪ್ರತ್ಯೇಕತಾ ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿದೆ.

ಈ ತಿಂಗಳ ಪ್ರಾರಂಭದಲ್ಲಿ ಅಡೆನ್​ ನಗರದಲ್ಲಿ ಇಲ್ಲಿನ ಗವರ್ನರ್​​​ ಕಾರನ್ನು ಗುರಿಯಾಗಿಸಿಕೊಂಡು ಬಾಂಬ್​ ದಾಳಿ ನಡೆದಿತ್ತು. ಆಗಲೂ ಕೂಡ ಆರು ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಅದೃಷ್ಟವಶಾತ್ ಗವರ್ನರ್​ ಅಪಾಯದಿಂದ ಪಾರಾಗಿದ್ದರು. 2020ರ ಡಿಸೆಂಬರ್​​ನಲ್ಲಿ ಅಡೆನ್​ ಏರ್​ಪೋರ್ಟ್​​ನಲ್ಲಿ ನಡೆದ ಬಾಂಬ್​ ದಾಳಿಯಿಂದ ಸುಮಾರು 22 ಮಂದಿ ಮೃತಪಟ್ಟಿದ್ದರು. ಆ ದಾಳಿಯ ಹೊಣೆಯನ್ನು ಹೌತಿ ಗುಂಪು ಹೊತ್ತುಕೊಂಡಿತ್ತು. ಹಾಗೇ ಕ್ಷಿಪಣಿ ಪ್ರಯೋಗಿಸಿ ದಾಳಿ ಮಾಡಿದ್ದಾಗಿಯೂ ಹೇಳಿತ್ತು.

ಇದನ್ನೂ ಓದಿ: ಬಿಜೆಪಿ ಸೇರಿ ದೊಡ್ಡ ದೊಡ್ಡ ತಪ್ಪು ಮಾಡಿದೆ ಎನ್ನುತ್ತ ಮರಳಿ ಟಿಎಂಸಿಗೆ ಬಂದ ರಾಜೀವ್ ಬ್ಯಾನರ್ಜಿ

ತಾಯಿ ಬಗ್ಗೆ ಮಹಾನ್​ ಕನಸು ಕಂಡಿದ್ದ ಪುನೀತ್; ಕೊನೆಗೂ ಅದು ಈಡೇರಲೇ ಇಲ್ಲ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ