ತಂದೆ ಜೊತೆ ಕೂಲಿಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಕೊಲೆ.. ಆಂಧ್ರದಲ್ಲಿ ಪೈಶಾಚಿಕ‌ ಕೃತ್ಯ

|

Updated on: Apr 23, 2021 | 10:41 AM

ತಂದೆಯ ಜೊತೆ ಕೂಲಿ ಕೆಲಸ ಮಾಡಲು ಬಂದಿದ್ದ ಅಪ್ರಾಪ್ತ ಯುವತಿಯ ಮೇಲೆ ಕಾಮುಖರು ಅತ್ಯಾಚಾರ ಎಸಗಿ ಪೆಟ್ರೋಲ್‌ ಸುರಿದು ಹತ್ಯೆ ಮಾಡಿದ್ದಾರೆ. ಮೃತ ಯುವತಿ ತೆಲಂಗಾಣದ ನಾರಾಯಣ ಪೇಟೆಯವಳು.

ತಂದೆ ಜೊತೆ ಕೂಲಿಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಕೊಲೆ.. ಆಂಧ್ರದಲ್ಲಿ ಪೈಶಾಚಿಕ‌ ಕೃತ್ಯ
ಸಂಗ್ರಹ ಚಿತ್ರ
Follow us on

ಹೈದರಾಬಾದ್: ಯುವತಿ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಪೈಶಾಚಿಕ‌ ಕೃತ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಯಾಗಂಟಿಪಲ್ಲಿ ಬಳಿ ನಡೆದಿದೆ. ಸ್ಥಳಕ್ಕೆ ಕರ್ನೂಲ್ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಲೇರು-ನಗರಿನ ಪ್ರಾಜೆಕ್ಟ್ ಸಂಬಂಧ ತಂದೆಯ ಜೊತೆ ಕೂಲಿ ಕೆಲಸ ಮಾಡಲು ಬಂದಿದ್ದ ಅಪ್ರಾಪ್ತ ಯುವತಿಯ ಮೇಲೆ ಕಾಮುಖರು ಅತ್ಯಾಚಾರ ಎಸಗಿ ಪೆಟ್ರೋಲ್‌ ಸುರಿದು ಹತ್ಯೆ ಮಾಡಿದ್ದಾರೆ. ಮೃತ ಯುವತಿ ತೆಲಂಗಾಣದ ನಾರಾಯಣ ಪೇಟೆಯವಳು. ಕಳೆದ‌ ಕೆಲ‌ ದಿನಗಳಿಂದ ಕೂಲಿ‌ ಕೆಲಸಕ್ಕೆಂದು ತಂದೆಯೊಂದಿಗೆ‌ ಬಂದಿದ್ದಳು. ಮಗಳ‌ ಮೇಲಾದ ದೌರ್ಜನ್ಯದಿಂದ ತಂದೆ (ರಾಮಯ್ಯ) ಕಣ್ಣೀರಿಟ್ಟಿದ್ದಾರೆ.

ಸ್ಥಳಕ್ಕೆ‌ ಭೇಟಿ‌ ನೀಡಿದ ಕರ್ನೂಲ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು‌ ತನಿಖೆಗೆ ಮುಂದಾಗಿದ್ದಾರೆ. ಇನ್ನು ಯುವತಿಯೊಂದಿಗೆ ಸಲಿಗೆಯಿಂದ ಇದ್ದ, ಕರ್ನೂಲ‌ನ ಪ್ರಾಜೆಕ್ಟನಲ್ಲಿಯೇ ಕೆಲಸ ಮಾಡುತ್ತದ್ದ ತೆಲಂಗಾಣ ಮೂಲದ ಓರ್ವ ಯುವಕನ ಬಗ್ಗೆ ಮೃತ ಯುವತಿಯ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಯುವಕನ ವಿಚಾರಣೆ‌ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದಯಮಾಡಿ ರೇಪ್ ಅನ್ನೋ ಶಬ್ದ ಬಳಸಬೇಡಿ.. ನಿಮಗೆ ಶೋಭೆ ತರಲ್ಲ -ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ