
ಭೋಪಾಲ್: ಏನ್ ಹುಡ್ಗೀರೋ.. ಅದ್ಯಾಕೆ ಹಿಂಗಾಡ್ತಾರೋ. . Selfie Selfie ಅಂತಾ ಪ್ರಾಣ ಬಿಡ್ತಾರೋ ಅಂತಾ ಈಗಿನ ಕಾಲದ ಪಡ್ಡೆ ಹುಡುಗರು ಹಾಡ್ತಾರೆ. ಅಂತೆಯೇ, ಸೆಲ್ಫಿ ಕ್ಲಿಕ್ಕಿಸಲು ನದಿಯ ಮಧ್ಯಕ್ಕೆ ಹೋದ ಯುವತಿಯರಿಬ್ಬರೂ ಕೊನೆಗೆ ಅಲ್ಲೇ ಸಿಲುಕಿಕೊಂಡ ಘಟನೆ ಮಧ್ಯ ಪ್ರದೇಶದ ಛಿಂದವಾಡ ಜಿಲ್ಲೆಯಲ್ಲಿ ನಡೆದಿದೆ.
ಕೊನೆಗೆ ದಾರಿ ತೋಚದ ಯುವತಿಯರ ತಂಡವು ಪೊಲೀಸರು ಮತ್ತು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸ್ಥಳೀಯರು ಯುವತಿಯರನ್ನ ರಕ್ಷಿಸುವಲ್ಲಿ ಯಶಸ್ವಿಯಾದರು. ಅದಕ್ಕೇ ನೋಡಿ ಹೇಳೋದು.. ಸೆಲ್ಫಿ ಕ್ಲಿಕ್ಕಿಸೋ ಹುಚ್ಚೇ ಗಮ್ಮತ್ತು. ಆದರೆ, ನದಿಯ ಅಳತೆ ಮೀರಿದರೆ ತಂದೊಡ್ಡುತ್ತೆ ಆಪತ್ತು.
Published On - 12:10 pm, Sat, 25 July 20