450 ಹಾಸಿಗೆಗಳ ಸರ್ಕಾರಿ ಕೊವಿಡ್ ಆಸ್ಪತ್ರೆ ಸಿದ್ಧವಾಯ್ತು, ಎಲ್ಲಿ?

450 ಹಾಸಿಗೆಗಳ ಸರ್ಕಾರಿ ಕೊವಿಡ್ ಆಸ್ಪತ್ರೆ ಸಿದ್ಧವಾಯ್ತು, ಎಲ್ಲಿ?

ದೆಹಲಿ: ದೇಶದಲ್ಲಿ ಕೊರೊನಾ ದಿನೇ ದಿನೇ ತನ್ನ ಕಬಂಧಬಾಹು ಚಾಚಿದ್ದು ಯಾರಿಗೂ ನಿಯಂತ್ರಣಕ್ಕೆ ಸಿಗದಷ್ಟು ವ್ಯಾಪಕವಾಗಿ ಹಬ್ಬುತ್ತಿದೆ. ದೇಶದ ಪ್ರತಿಯೊಂದು ರಾಜ್ಯವೂ ಕೊರೊನಾಕ್ಕೆ ತುತ್ತಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಕೂಡ ಇದರ ಹೊರತಾಗಿಲ್ಲ. ದೆಹಲಿಯಲ್ಲಿ ಸಾವಿರಾರು ಜನ ಸೋಂಕಿಗೆ ತುತ್ತಾಗಿದ್ದು, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕಾಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯ ಬುರಾರಿಯಲ್ಲಿ 450 ಹಾಸಿಗೆಗಳ ವ್ಯವಸ್ಥೆ ಇರುವ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆಯನ್ನು ಇಂದು ವಿಡಿಯೋ […]

sadhu srinath

| Edited By:

Jul 26, 2020 | 1:47 AM

ದೆಹಲಿ: ದೇಶದಲ್ಲಿ ಕೊರೊನಾ ದಿನೇ ದಿನೇ ತನ್ನ ಕಬಂಧಬಾಹು ಚಾಚಿದ್ದು ಯಾರಿಗೂ ನಿಯಂತ್ರಣಕ್ಕೆ ಸಿಗದಷ್ಟು ವ್ಯಾಪಕವಾಗಿ ಹಬ್ಬುತ್ತಿದೆ. ದೇಶದ ಪ್ರತಿಯೊಂದು ರಾಜ್ಯವೂ ಕೊರೊನಾಕ್ಕೆ ತುತ್ತಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಕೂಡ ಇದರ ಹೊರತಾಗಿಲ್ಲ.

ದೆಹಲಿಯಲ್ಲಿ ಸಾವಿರಾರು ಜನ ಸೋಂಕಿಗೆ ತುತ್ತಾಗಿದ್ದು, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕಾಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯ ಬುರಾರಿಯಲ್ಲಿ 450 ಹಾಸಿಗೆಗಳ ವ್ಯವಸ್ಥೆ ಇರುವ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆಯನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಉದ್ಘಾಟನೆ ಮಾಡಿದರು.

Follow us on

Related Stories

Most Read Stories

Click on your DTH Provider to Add TV9 Kannada