IIT Kharagpur ಸಾಧನೆ: 60 ನಿಮಿಷದಲ್ಲೇ ಕೊರೊನಾ ಟೆಸ್ಟ್‌! ಅದೂ ಬರೀ 400 ರೂಪಾಯಿಗೆ

IIT Kharagpur ಸಾಧನೆ: 60 ನಿಮಿಷದಲ್ಲೇ ಕೊರೊನಾ ಟೆಸ್ಟ್‌! ಅದೂ ಬರೀ 400 ರೂಪಾಯಿಗೆ

ಖರಗ್‌ಪುರ: ಭಾರತದ ಪ್ರಖ್ಯಾತ ಐಐಟಿಗಳಲ್ಲೊಂದಾದ ಖರಗ್‌ಪುರ ಐಐಟಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತನ್ನ ಕೈ ಜೋಡಿಸಿದೆ. ಕೇವಲ ಒಂದು ಗಂಟೆಯಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ನ್ನು ಅದು ಅಭಿವೃದ್ಧಿಪಡಿಸಿದೆ. IIT ಖರಗ್‌ಪುರ್‌ ಸಾಧನೆ ಹೌದು ಖರಗ್‌ಪುರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ಧುಮುಕಿದೆ. ಎಲ್ಲೆಡೆ ಕೊರೊನಾ ಟೆಸ್ಟ್‌ ಗಾಗಿ ಜನ ಪರದಾಡುತ್ತಿರುವಾಗ ಅದರ ಸಮಸ್ಯೆಗೆ ಪರಿಹಾರವಾಗಿ ಐಐಟಿ ಸಂಶೋಧಕರು ದೇಶಿಯವಾಗಿ ಕೊರೊನಾ ಟೆಸ್ಚ್‌ ಮಾಡುವ ಱಪಿಡ್‌ ಟೆಸ್ಟಿಂಗ್‌ ಕಿಟ್‌ […]

Guru

| Edited By:

Jul 26, 2020 | 1:58 AM

ಖರಗ್‌ಪುರ: ಭಾರತದ ಪ್ರಖ್ಯಾತ ಐಐಟಿಗಳಲ್ಲೊಂದಾದ ಖರಗ್‌ಪುರ ಐಐಟಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತನ್ನ ಕೈ ಜೋಡಿಸಿದೆ. ಕೇವಲ ಒಂದು ಗಂಟೆಯಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ನ್ನು ಅದು ಅಭಿವೃದ್ಧಿಪಡಿಸಿದೆ.

IIT ಖರಗ್‌ಪುರ್‌ ಸಾಧನೆ ಹೌದು ಖರಗ್‌ಪುರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ಧುಮುಕಿದೆ. ಎಲ್ಲೆಡೆ ಕೊರೊನಾ ಟೆಸ್ಟ್‌ ಗಾಗಿ ಜನ ಪರದಾಡುತ್ತಿರುವಾಗ ಅದರ ಸಮಸ್ಯೆಗೆ ಪರಿಹಾರವಾಗಿ ಐಐಟಿ ಸಂಶೋಧಕರು ದೇಶಿಯವಾಗಿ ಕೊರೊನಾ ಟೆಸ್ಚ್‌ ಮಾಡುವ ಱಪಿಡ್‌ ಟೆಸ್ಟಿಂಗ್‌ ಕಿಟ್‌ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಲ್ಟ್ರಾ ಪೋರ್ಟೆಬಲ್‌ ಸಾಧನ ಹೊಂದಿರುವ ಈ ಟೆಸ್ಟಿಂಗ್‌ ಕಿಟ್‌ ಸ್ಮಾರ್ಟ್‌ ಫೋನ್‌ ತಂತ್ರಜ್ಞಾನ ಹೊಂದಿದೆ.

400ರೂಗೆ ಕೊರೊನಾ ಟೆಸ್ಟ್‌ ಟೆಸ್ಟ್‌ ಮಾಡಿದ ಕೇವಲ ಒಂದು ಗಂಟೆಯಲ್ಲಿ ಅಟೋಮ್ಯಾಟಿಕ್‌ ಆಗಿ ವರದಿಯನ್ನ ಸಂಬಂಧಿಸಿದವರಿಗೆ ಈ ಸಾಧನ ರವಾನಿಸುತ್ತದೆ. ಈ ಪೋರ್ಟೆಬಲ್‌ ಸಾಧನದ ಬೆಲೆ ಕೇವಲ 400 ರೂ. ಹೀಗಾಗಿ ಒಂದು ಶತಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇಷ್ಟೊಂದು ಕಡಿಮೆ ಮೊತ್ತದಲ್ಲಿ ಟೆಸ್ಟ್‌ ಮಾಡುವ ಸಾಧನ ಭಾರೀ ಸಹಾಯಕವಾಗಲಿದೆ ಎನ್ನಲಾಗ್ತಿದೆ.

ನೆಹರು ಕನಸಿನ ಕೂಸು ಇನ್ನು ಐಐಟಿ ಖರಗ್‌ಪುರದ ಬಗ್ಗೆ ಹೇಳುವುದಾದರೇ ಇದನ್ನು 1951ರಲ್ಲಿ ಸ್ಥಾಪಿಸಲಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ಆರಂಭದ ದಿನಗಳಲ್ಲಿ ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ದೆಸೆ ತೋರಿಸಲು ಅನುಕೂಲವಾಗಲೆಂದೇ ಅಂದಿನ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರು ದೇಶದ ಪ್ರಮುಖ ಭಾಗಗಳಲ್ಲಿ ಐಐಟಿ ಆರಂಭಿಸಿದ್ದರು. ಇವುಗಳಲ್ಲಿ ಖರಗ್‌ಪುರ ಐಐಟಿಯೂ ಒಂದು. ಹೀಗೆ ಸ್ಥಾಪಿತವಾದ ಈ ಐಐಟಿಗಳನ್ನು ನೆಹರು ಆಧುನಿಕ ಭಾರತದ ದೇವಾಲಯಗಳೆಂದು ಬಣ್ಣಿಸಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada