ಸುದ್ದಿಗಳಿಗೆ ಕೋಮು ಸ್ಪರ್ಶ ಕೊಡುವ ವೆಬ್​ಪೋರ್ಟಲ್, ಸೋಷಿಯಲ್​ ಮೀಡಿಯಾಗಳ ವಿರುದ್ಧ ಸಿಜೆಐ ಎನ್​.ವಿ.ರಮಣ ಅಸಮಾಧಾನ

| Updated By: Lakshmi Hegde

Updated on: Sep 02, 2021 | 4:20 PM

ಟ್ವಿಟರ್​, ಫೇಸ್​ಬುಕ್​ ಅಥವಾ ಯೂಟ್ಯೂಬ್​ ಇರಲಿ. ನಾವು ಏನೇ ಕೇಳಿದರೂ ಅದಕ್ಕೆ ಅವರು ಪ್ರತಿಕ್ರಿಯೆ, ಸ್ಪಂದನೆ ನೀಡುವುದಿಲ್ಲ. ಕೆಲವು ವಿಷಯಗಳನ್ನು ಎಷ್ಟು ಕೆಟ್ಟದಾಗಿ ಬೇಕಾದರೂ ಬಿಂಬಿಸುತ್ತಾರೆ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಬೇಸರ ವ್ಯ

ಸುದ್ದಿಗಳಿಗೆ ಕೋಮು ಸ್ಪರ್ಶ ಕೊಡುವ ವೆಬ್​ಪೋರ್ಟಲ್,  ಸೋಷಿಯಲ್​ ಮೀಡಿಯಾಗಳ ವಿರುದ್ಧ ಸಿಜೆಐ ಎನ್​.ವಿ.ರಮಣ ಅಸಮಾಧಾನ
ನ್ಯಾಯಮೂರ್ತಿ ರಮಣ
Follow us on

ಕೆಲವು ಆನ್​​ಲೈನ್​  ಸುದ್ದಿಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ಒಂದಷ್ಟು ಸುದ್ದಿಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇಂಥ ಪ್ರವೃತ್ತಿ ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ  (CJI N V Ramana)ಹೇಳಿದರು. ಹಾಗೇ, ವೆಬ್​ ಪೋರ್ಟಲ್​ಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರಭಾವಶಾಲಿ ಜನರ ಮಾತುಗಳನ್ನಷ್ಟೇ ಕೇಳುತ್ತವೆ. ಯಾವುದೇ ಸಂಸ್ಥೆ ಅಥವಾ ಸಾಮಾನ್ಯ ಜನರ ಬಗ್ಗೆ ಅವುಗಳ ಗಮನವಿಲ್ಲ ಎಂದೂ ವಿಷಾದ ವ್ಯಕ್ತಪಡಿಸಿದರು.

ಕೊರೊನಾ ಪ್ರಾರಂಭದ ದಿನಗಳಲ್ಲಿ ದೆಹಲಿಯ ನಿಜಾಮುದ್ದೀನ್​ ಮರ್ಕಜ್​​ನಲ್ಲಿ ತಬ್ಲಿಘಿ ಜಮಾತ್​ ಸಮಾವೇಶ ನಡೆದಿತ್ತು. ಆ ಸಮಾವೇಶ ಕೊರೊನಾ ಸೋಂಕಿನ ಸೂಪರ್​ಸ್ಪ್ರೆಡರ್​ ಆಗಿ ಬದಲಾಗಿತ್ತು. ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಭಾಗಿಯಾಗಿದ್ದರು. ನಂತರ ತಮ್ಮತಮ್ಮ ವಾಸಸ್ಥಳಕ್ಕೆ ತೆರಳಿದ್ದರು. ಅದು ಕೊರೊನಾ ಮಿತಿಮೀರಲು ಪ್ರಮುಖ ಕಾರಣವಾಗಿತ್ತು. ಆದರೆ ಅಂದು ಈ ಬಗ್ಗೆ ವರದಿ ಮಾಡುವ ಭರದಲ್ಲಿ ಹಲವು ಮಾಧ್ಯಮಗಳು ಸುದ್ದಿಗೆ ಕೋಮು ಸ್ಪರ್ಶ ನೀಡಿವೆ. ಅಂಥ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲವರು ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಎನ್​. ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​, ಫೇಸ್​ಬುಕ್​ ಅಥವಾ ಯೂಟ್ಯೂಬ್​ ಇರಲಿ. ನಾವು ಏನೇ ಕೇಳಿದರೂ ಅದಕ್ಕೆ ಅವರು ಪ್ರತಿಕ್ರಿಯೆ, ಸ್ಪಂದನೆ ನೀಡುವುದಿಲ್ಲ. ಕೆಲವು ವಿಷಯಗಳನ್ನು ಎಷ್ಟು ಕೆಟ್ಟದಾಗಿ ಬೇಕಾದರೂ ಬಿಂಬಿಸುತ್ತಾರೆ. ಅದನ್ನು ಪ್ರಶ್ನೆ ಮಾಡಿದರೆ ಉತ್ತರವೂ ಸಿಗುವುದಿಲ್ಲ. ಅಂಥ ಸೋಷಿಯಲ್​ ಮೀಡಿಯಾ ಮತ್ತು ವೆಬ್​ಪೋರ್ಟಲ್​ಗಳು ಪ್ರಭಾವಿಗಳ ಬಗ್ಗೆ ಮಾತ್ರ ಗಮನಕೊಡುತ್ತವೆ ಹೊರತು..ನಮ್ಮಂಥ ನ್ಯಾಯಾಧೀಶರು, ಸಾಮಾನ್ಯ ಜನರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀವು ಯೂಟ್ಯೂಬ್​ಗೆ ಹೋಗಿ ನೋಡಿ..ಅಲ್ಲಿ ಒಂದೇ ನಿಮಿಷದಲ್ಲಿ ಎಷ್ಟೆಷ್ಟೋ ವಿಚಾರಗಳನ್ನು ತೋರಿಸುತ್ತಾರೆ. ಅದು ಎಷ್ಟು ಫೇಕ್​ ಎಂಬುದು ನಿಮಗೆ ಗೊತ್ತಾಗುತ್ತದೆ. ಇನ್ನು ವೆಬ್​ಪೋರ್ಟಲ್​ಗಳಿಗೂ ಯಾರೂ ಕಡಿವಾಣ ಹಾಕುವವರಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಅದೆಷ್ಟೋ ಸುದ್ದಿಗಳನ್ನು ಸುಖಾಸುಮ್ಮನೆ ಕೋಮು ಆಯಾಮದಲ್ಲಿ ಪ್ರಕಟಿಸುತ್ತವೆ. ಇದು ದೇಶಕ್ಕೆ ಕೆಟ್ಟಹೆಸರು ತರುತ್ತದೆ ಎಂದು ಸಿಜೆಐ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್​ ಹೈಕೋರ್ಟ್ ಆದೇಶ

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

Published On - 4:07 pm, Thu, 2 September 21