ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್​ ಹೈಕೋರ್ಟ್ ಆದೇಶ

ಜಲ್ಲಿಕಟ್ಟುವಿನಂಥ ಕ್ರೀಡೆಗಳಲ್ಲಿ ವಿದೇಶಿ ತಳಿಯ ಎತ್ತುಗಳನ್ನು ಬಳಸುತ್ತಿರುವುದರಿಂದ ಸ್ಥಳೀಯ, ದೇಶೀಯ ತಳಿ ಹೋರಿಗಳನ್ನು ಸಾಕುತ್ತಿರುವ ರೈತರಿಗೆ ನಷ್ಟವಾಗುತ್ತಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.

ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್​ ಹೈಕೋರ್ಟ್ ಆದೇಶ
ಜಲ್ಲಿಕಟ್ಟು ಆಟದ ಚಿತ್ರ
Follow us
TV9 Web
| Updated By: Lakshmi Hegde

Updated on:Sep 02, 2021 | 3:14 PM

ತಮಿಳುನಾಡಿನ ಜಲ್ಲಿಕಟ್ಟು (Jallikattu) ಕ್ರೀಡೆಯಲ್ಲಿ ಕೇವಲ ಸ್ಥಳೀಯ (ದೇಶೀಯ) ತಳಿ (Native Breed)ಯ ಎತ್ತುಗಳ ಪಾಲ್ಗೊಳ್ಳುವಿಕೆ ಮಾತ್ರ ಇರಬೇಕು. ಅದರ ಹೊರತಾಗಿ ವಿದೇಶಿ ಹೈಬ್ರೀಡ್​ ತಳಿಗಳಾದ ಬೋಸ್​ ತೋರಸ್ (Bos Taurus)​ ಅಥವಾ ಬೋಸ್ ಇಂಡಿಕಸ್​ (Bos Indicus) ಎತ್ತು, ಹೋರಿಗಳು ಭಾಗವಹಿಸದಂತೆ ನೋಡಿಕೊಳ್ಳಿ ಎಂದು ಮದ್ರಾಸ್​ ಹೈಕೋರ್ಟ್​ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಇಂದು ನಿರ್ದೇಶನ ನೀಡಿದೆ. ಈ ಮೂಲಕ ತಮಿಳುನಾಡಿನಲ್ಲಿ ಸಂಕ್ರಾಂತಿ ಸಮಯದಲ್ಲಿ ನಡೆಯುವ ಸಾಂಪ್ರದಾಯಿಕ, ವಿಶ್ವವಿಖ್ಯಾತ ಮತ್ತು ಅಪಾಯಕಾರಿ ಜಲ್ಲಿಕಟ್ಟು ಆಟದಲ್ಲಿ ವಿದೇಶಿ ತಳಿ ಎತ್ತುಗಳು ಪಾಲ್ಗೊಳ್ಳುವುದನ್ನು ನಿಷೇಧಿಸಿದೆ.

ತಮಿಳುನಾಡಿನ ಸಾಂಪ್ರದಾಯಿಕ ಆಟಗಳಾದ ಜಲ್ಲಿಕಟ್ಟು, ಮಂಜುವಿರಟ್ಟು, ಊರ್ಮಡು, ವಡಮಡು, ವಡಮಂಜಿವಿರಟ್ಟುಗಳಲ್ಲೆಲ್ಲ ಸ್ಥಳೀಯ ತಳಿಯ ಗೂಳಿ, ಎತ್ತುಗಳಿಗೇ ಪ್ರಾತಿನಿಧ್ಯ ಸಿಗಬೇಕು. ವಿದೇಶಿ ತಳಿ ಎತ್ತುಗಳನ್ನು ಈ ಕ್ರೀಡೆಗಳಲ್ಲಿ ಬಳಸಬಾರದು ಎಂದು ಒತ್ತಾಯಿಸಿ, ಚೆನ್ನೈನ ಇ.ಸೇಶನ್​ (71) ಅವರು ಮದ್ರಾಸ್​ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಎನ್​.ಕಿರುಬಾಕರನ್​ ಮತ್ತು ಪಿ.ವೆಲ್ಮುರುಗನ್​ ಅವರು ಇಂದು ಈ ಆದೇಶ ಹೊರಡಿಸಿದ್ದಾರೆ. ಆಟದಲ್ಲಿ ವಿದೇಶಿ ತಳಿಯ ಎತ್ತುಗಳನ್ನು ಬಳಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ತಮಿಳುನಾಡು ಸರ್ಕಾರಕ್ಕೆ ನೀಡಿ, ಆದೇಶ ಹೊರಡಿಸಿದ್ದಾರೆ.

ಜಲ್ಲಿಕಟ್ಟುವಿನಂಥ ಕ್ರೀಡೆಗಳಲ್ಲಿ ವಿದೇಶಿ ತಳಿಯ ಎತ್ತುಗಳನ್ನು ಬಳಸುತ್ತಿರುವುದರಿಂದ ಸ್ಥಳೀಯ, ದೇಶೀಯ ತಳಿ ಹೋರಿಗಳನ್ನು ಸಾಕುತ್ತಿರುವ ರೈತರಿಗೆ ನಷ್ಟವಾಗುತ್ತಿದೆ. ಅದಕ್ಕೂ ಮಿಗಿಲಾಗಿ ನಮ್ಮ ಸ್ಥಳೀಯ ಪ್ರಬೇಧಗಳಿಗೆ ಆದ್ಯತೆ ಸಿಗದೆ ಇರುವುದು ವಿಷಾದನೀಯವಾಗಿದೆ ಎಂದು ಅರ್ಜಿದಾರ ಸೇಶನ್​ ಬೇಸರವ್ಯಕ್ತಿಪಡಿಸಿದ್ದರು. ಅರ್ಜಿದಾರರ ಆಶಯವನ್ನು ಅರ್ಥ ಮಾಡಿಕೊಂಡು, ಮನ್ನಣೆ ನೀಡಿದ ಉಚ್ಛ ನ್ಯಾಯಾಲಯ, ಇನ್ನು ಮುಂದೆ ಆಟಕ್ಕೂ ಮೊದಲು ಅದರಲ್ಲಿ ಭಾಗವಹಿಸುತ್ತಿರುವ ಎತ್ತುಗಳ ತಳಿಯನ್ನು ದೃಢಪಡಿಸಬೇಕು ಎಂದು ಹೇಳಿದೆ.

ಕೋರ್ಟ್​ನಿಂದ ಎಚ್ಚರಿಕೆ ಜಲ್ಲಿಕಟ್ಟುವಿನಲ್ಲಿ ತಮ್ಮ ಎತ್ತುಗಳನ್ನು ಬಳಸುವ ಮಾಲೀಕರು ಅದರ ತಳಿಯ ಬಗ್ಗೆ ಪಶುವೈದ್ಯರಿಂದ ಪ್ರಮಾಣಪತ್ರ ಪಡೆಯಬೇಕು. ಈ ಸಮಯದಲ್ಲಿ ಯಾವುದೇ ಪಶುವೈದ್ಯ ಏನಾದರೂ ಆಮಿಷಕ್ಕೆ ಒಳಗಾಗಿ ವಿದೇಶಿ ಹೈಬ್ರೀಡ್​ ತಳಿಗಳ ಎತ್ತುಗಳಿಗೆ ಸ್ಥಳೀಯ ತಳಿಯ ಎತ್ತುಗಳೆಂದು ಸುಳ್ಳು ಪ್ರಮಾಣ ಪತ್ರ ನೀಡಿದ್ದು, ಕೋರ್ಟ್​ ಗಮನಕ್ಕೆ ಬಂದರೆ ಅದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಲಾಗುವುದು. ಹಾಗೇ ಅಂಥವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.

ವಿವಾದದ ಕ್ರೀಡೆ ಜಲ್ಲಿಕಟ್ಟು ಜಲ್ಲಿಕಟ್ಟು ವಿಶ್ವವಿಖ್ಯಾತ ಕ್ರೀಡೆಯಾದರೂ ಅದು ಅಪಾಯಕಾರಿ. ಈ ಆಟದಲ್ಲಿ ಸಾವುನೋವುಗಳೂ ಉಂಟಾಗಿವೆ. ಅಷ್ಟೇ ಅಲ್ಲ, ಪ್ರಾಣಿ ಹಿಂಸೆಯಾಗುತ್ತದೆ ಎಂದೂ ಪ್ರಾಣಿದಯಾ ಸಂಘಗಳ ಆರೋಪವಿದೆ. ಇದೆಲ್ಲ ಕಾರಣಕ್ಕೆ 2014ರಲ್ಲಿ ಸುಪ್ರೀಂಕೋರ್ಟ್ ಈ ಕ್ರೀಡೆಯನ್ನು ನಿಷೇಧಿಸಿತ್ತು. ಆದರೆ ತಮಿಳುನಾಡಿನಲ್ಲಿ ನಿಷೇಧದ ವಿರೋಧವಾಗಿ ಬಹುದೊಡ್ಡ ಹೋರಾಟ ನಡೆದ ಪರಿಣಾಮ ಮತ್ತೆ 2017ರಿಂದ ಕ್ರೀಡೆ ನಡೆದುಕೊಂಡುಬಂದಿದೆ.

ಇದನ್ನೂ ಓದಿ: Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

Mysuru University: ಸೆಪ್ಟೆಂಬರ್ 3ರಿಂದ ಆರಂಭವಾಗಿದ್ದ ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

(Madras High Court bans use of foreign breeds in Jallikattu Bull Festival)

Published On - 2:49 pm, Thu, 2 September 21

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ