ಗೋವಾದಲ್ಲಿ ಮನೆಯ ತಾರಸಿ​ ಮೇಲೆ ಗಾಂಜಾ ಬೆಳೆದಿದ್ದ ವಿದೇಶಿ ಪ್ರಜೆಯ ಬಂಧನ

|

Updated on: Apr 12, 2024 | 8:35 AM

ಮನೆಯ ತಾರಸಿಯಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುರುವಾರ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದೆ. ಆತ ಗೋವಾದಲ್ಲಿರುವ ತನ್ನ ನಿವಾಸದಲ್ಲಿ ಗಾಂಜಾ ಬೆಳೆದಿದ್ದಕ್ಕಾಗಿ ಬಂಧಿಸಲಾಗಿದೆ, ಎನ್‌ಸಿಬಿಯ ತಂಡವೊಂದು ಮನೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಸುಳಿವು ಪಡೆದಿತ್ತು, ನಂತರ ಅವರು ಉತ್ತರ ಗೋವಾದ ಸೊಕೊರೊದಲ್ಲಿರುವ ಬ್ರಿಟಿಷ್ ಪ್ರಜೆ ಜೇಸನ್ ಅವರ ಮನೆಯ ಮೇಲೆ ದಾಳಿ ನಡೆಸಿದರು.

ಗೋವಾದಲ್ಲಿ ಮನೆಯ ತಾರಸಿ​ ಮೇಲೆ ಗಾಂಜಾ ಬೆಳೆದಿದ್ದ ವಿದೇಶಿ ಪ್ರಜೆಯ ಬಂಧನ
ಗಾಂಜಾ
Follow us on

ಮನೆಯ ತಾರಸಿಯಲ್ಲಿ ಗಾಂಜಾ(Ganja) ಬೆಳೆದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುರುವಾರ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದೆ. ಆತ ಗೋವಾದಲ್ಲಿರುವ ತನ್ನ ನಿವಾಸದಲ್ಲಿ ಗಾಂಜಾ ಬೆಳೆದಿದ್ದಕ್ಕಾಗಿ ಬಂಧಿಸಲಾಗಿದೆ, ಎನ್‌ಸಿಬಿಯ ತಂಡವೊಂದು ಮನೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಸುಳಿವು ಪಡೆದಿತ್ತು, ನಂತರ ಅವರು ಉತ್ತರ ಗೋವಾದ ಸೊಕೊರೊದಲ್ಲಿರುವ ಬ್ರಿಟಿಷ್ ಪ್ರಜೆ ಜೇಸನ್ ಅವರ ಮನೆಯ ಮೇಲೆ ದಾಳಿ ನಡೆಸಿದರು.

ಶೋಧದ ವೇಳೆ ಮನೆಯಲ್ಲಿ ಹೊಸದಾಗಿ ಬೆಳೆದ 33 ಗಾಂಜಾ ಗಿಡಗಳು, 10 ಗ್ರಾಂ ಗಾಂಜಾ ಹಾಗೂ 40 ಸಾವಿರ ರೂ. ಗಾಂಜಾ ಗಿಡಗಳನ್ನು ಹೂವಿನ ಕುಂಡಗಳಲ್ಲಿ ಟೆರೇಸ್‌ನಲ್ಲಿ ಇತರ ಅಲಂಕಾರಿಕ ಸಸ್ಯಗಳೊಂದಿಗೆ ಬೆಳೆಸಿರುವುದು ಕಂಡುಬಂತು.

ಈ ಹಿಂದೆ 107 ಎಕ್ಸ್‌ಟಾಸಿ ಮಾತ್ರೆಗಳು, 40 ಗ್ರಾಂ ಎಂಡಿಎಂಎ ಪೌಡರ್ ಮತ್ತು 55 ಗ್ರಾಂ ಚರಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಸನ್ ಅವರನ್ನು ನವೆಂಬರ್ 28, 2022 ರಂದು ಎನ್‌ಸಿಬಿ ಬಂಧಿಸಿತ್ತು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ: ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿದಂತೆ ಮೂವರ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸಿದ ಸಿಸಿಬಿ ಪೊಲೀಸ್, 6kg ಗಾಂಜಾ ವಶ
ಜಿಲ್ಲೆಯಲ್ಲಿ ಸಿಸಿಬಿ ಪೊಲೀಸರು (CCB Police) ಕಾರ್ಯಾಚರಣೆ ನಡೆಸಿ ಗಾಂಜಾ (Ganja) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕುಡುಪು ಪೆದಮಲೆ ಗ್ರಾಮದ ನಿವಾಸಿ ನಿಶಾಂತ್ ಶೆಟ್ಟಿ ಬಂಧಿತ ಆರೋಪಿ. ಈತನಿಂದ 1.50 ಲಕ್ಷ ಮೌಲ್ಯದ 6 ಕೆ.ಜಿ ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಆರೋಪಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ತಂದು ಸಣ್ಣ ಸಣ್ಣ ಪ್ಯಾಕೆಟ್ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ.

ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಗೂಡ್ಸ್ ಟೆಂಪೋದಲ್ಲಿ ಗಾಂಜಾ ಸಾಗಿಸುವಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 9.11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಈಗಾಗಲೇ ಹಲ್ಲೆ, ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಪ್ರಕರಣಗಳಿರುವುದು ಪತ್ತೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ