ಥೈಲ್ಯಾಂಡ್​​ನಿಂದ ಗಡಿಪಾರಾದ ಗೋವಾ ನೈಟ್‌ಕ್ಲಬ್ ಮಾಲೀಕರಾದ ಲೂತ್ರಾ ಸಹೋದರರ ಬಂಧನ

ಡಿಸೆಂಬರ್ 6ರಂದು ಗೋವಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯ ನಂತರ ಥೈಲ್ಯಾಂಡ್‌ಗೆ ಪಲಾಯನ ಮಾಡಿದ ಸೌರಭ್ ಮತ್ತು ಗೌರವ್ ಲೂತ್ರಾ ಅವರ ಬಂಧನದೊಂದಿಗೆ ಅಂತಾರಾಷ್ಟ್ರೀಯ ಹುಡುಕಾಟ ಕೊನೆಗೊಂಡಿದೆ. ಲೂತ್ರಾ ಸಹೋದರರನ್ನು ಇಂದು ಮಧ್ಯಾಹ್ನ ದೆಹಲಿಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಉತ್ತರ ಗೋವಾ ಕ್ಲಬ್ - ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಅವರು ದೇಶದಿಂದ ಪಲಾಯನ ಮಾಡಿದ ನಂತರ ಅವರ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಯಿತು.

ಥೈಲ್ಯಾಂಡ್​​ನಿಂದ ಗಡಿಪಾರಾದ ಗೋವಾ ನೈಟ್‌ಕ್ಲಬ್ ಮಾಲೀಕರಾದ ಲೂತ್ರಾ ಸಹೋದರರ ಬಂಧನ
Luthra Brothers

Updated on: Dec 16, 2025 | 4:30 PM

ನವದೆಹಲಿ, ಡಿಸೆಂಬರ್ 16: ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಲೂತ್ರಾ ಸಹೋದರರಾದ (Luthra Brothers) ಗೌರವ್ ಮತ್ತು ಸೌರಭ್ ಅವರನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಲಾಗಿದೆ. ಇಂದು ಅವರನ್ನು ದೆಹಲಿಗೆ ಕರೆತರಲಾಯಿತು. ಗೋವಾದ ನೈಟ್​​ಕ್ಲಬ್​ನಲ್ಲಿ ಬೆಂಕಿ ಅವಘಡ ಉಂಟಾದ ನಂತರ ಅವರಿಬ್ಬರೂ ಭಾರತ ಬಿಟ್ಟು ಥೈಲ್ಯಾಂಡ್​​ಗೆ ಪರಾರಿಯಾಗಿದ್ದರು. ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಗೋವಾ ಪೊಲೀಸರು ಆ ಇಬ್ಬರು ಸಹೋದರರನ್ನು ಬಂಧಿಸಿದರು.

ಥೈಲ್ಯಾಂಡ್‌ನಿಂದ ವಿಮಾನ ಹತ್ತಿದ ನಂತರ ಲೂತ್ರಾ ಸಹೋದರರು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ವಿಚಾರಣೆಗಾಗಿ ಗೋವಾ ರಾಜ್ಯಕ್ಕೆ ಕರೆತಂದ ನಂತರ ಅವರನ್ನು ಡಿಸೆಂಬರ್ 17ರಂದು ಮಾಪುಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಗೋವಾ ನೈಟ್‌ಕ್ಲಬ್​​ ಬೆಂಕಿ ದುರಂತದಲ್ಲಿ 25 ಜನ ಸಾವು; ಮಾಲೀಕರು ಥೈಲ್ಯಾಂಡ್​​ಗೆ ಪರಾರಿ

ಈ ತಿಂಗಳ ಆರಂಭದಲ್ಲಿ ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಜನದಟ್ಟಣೆಯ ಕಾರ್ಯಕ್ರಮದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. 25 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ನೈಟ್ ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳು, ಪರವಾನಗಿ ಷರತ್ತುಗಳು ಮತ್ತು ಇತರ ಶಾಸನಬದ್ಧ ಅವಶ್ಯಕತೆಗಳ ಉಲ್ಲಂಘನೆಯ ಆರೋಪದ ಮೇಲೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us