AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾ ನೈಟ್‌ಕ್ಲಬ್​​ ಬೆಂಕಿ ದುರಂತದಲ್ಲಿ 25 ಜನ ಸಾವು; ಮಾಲೀಕರು ಥೈಲ್ಯಾಂಡ್​​ಗೆ ಪರಾರಿ

ಗೋವಾದ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 25 ಜನರು ಸಾವನ್ನಪ್ಪಿದ್ದರು. 6 ಮಂದಿ ಗಾಯಗೊಂಡಿದ್ದರು. ಬೆಂಕಿ ದುರಂತದ ನಂತರ ನೈಟ್ ಕ್ಲಬ್ ಮಾಲೀಕರು ಥೈಲ್ಯಾಂಡ್​​​ನ ಫುಕೆಟ್‌ಗೆ ಪಲಾಯನ ಮಾಡಿದ್ದಾರೆ. ನೈಟ್‌ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಅವರಿಗಾಗಿ ಗೋವಾ ಪೊಲೀಸರು ಅಂತಾರಾಷ್ಟ್ರೀಯ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.

ಗೋವಾ ನೈಟ್‌ಕ್ಲಬ್​​ ಬೆಂಕಿ ದುರಂತದಲ್ಲಿ 25 ಜನ ಸಾವು; ಮಾಲೀಕರು ಥೈಲ್ಯಾಂಡ್​​ಗೆ ಪರಾರಿ
Goa Nightclub Owners
ಸುಷ್ಮಾ ಚಕ್ರೆ
|

Updated on: Dec 08, 2025 | 10:49 PM

Share

ಪಣಜಿ, ಡಿಸೆಂಬರ್ 8: ಗೋವಾದ ನೈಟ್​ಕ್ಲಬ್​​ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ (Fire Accident) 25 ಜನರು ಸಾವನ್ನಪ್ಪಿದ್ದಾರೆ, 6 ಮಂದಿ ಗಾಯಗೊಂಡಿದ್ದಾರೆ. ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯ ಕೆಲವೇ ಗಂಟೆಗಳ ನಂತರ ಅದರ ಮಾಲೀಕರಾದ ಇಬ್ಬರೂ ಸಹೋದರರು ಥೈಲ್ಯಾಂಡ್​​​ನ ಫುಕೆಟ್‌ಗೆ ಪರಾರಿಯಾಗಿದ್ದಾರೆ. ನೈಟ್‌ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾಗಾಗಿ ಅಂತಾರಾಷ್ಟ್ರೀಯ (ಇಂಟರ್​​ಪೋಲ್) ಹುಡುಕಾಟವನ್ನು ಪ್ರಾರಂಭಿಸಿದ್ದೇವೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಬೆಂಕಿ ದುರಂತದ ನಂತರ ಆ ಸಹೋದರರ ನಿವಾಸಗಳ ಮೇಲೆ ದಾಳಿ ಮಾಡಲು ದೆಹಲಿಗೆ ತಂಡವನ್ನು ಕಳುಹಿಸಲಾಗಿದೆ.

“ಸೌರಭ್ ಮತ್ತು ಗೌರವ್ ಲುತ್ರಾ ಇಬ್ಬರನ್ನೂ ಆದಷ್ಟು ಬೇಗ ಬಂಧಿಸಲು ಗೋವಾ ಪೊಲೀಸರು ಸಿಬಿಐನ ಇಂಟರ್‌ಪೋಲ್ ವಿಭಾಗದೊಂದಿಗೆ ಸಮನ್ವಯ ಸಾಧಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಗಂಡ ವಿದೇಶದಲ್ಲಿ, ಪತ್ನಿ ಪ್ರಿಯಕರನ ತೋಳಿನಲ್ಲಿ, ಇಬ್ಬರಿಗೂ ಮದುವೆ ಮಾಡಿಸಿದ ಅತ್ತೆ-ಮಾವ

ಪಣಜಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ, ಗೋವಾ ಪೊಲೀಸರು ಅವರ ನಿವಾಸದಲ್ಲಿ ನೋಟಿಸ್ ಹಾಕಿದ್ದರು. ಡಿಸೆಂಬರ್ 7 ರಂದು ಗೋವಾ ಪೊಲೀಸರ ಕೋರಿಕೆಯ ಮೇರೆಗೆ ಇಬ್ಬರೂ ಮಾಲೀಕರು ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ಸುತ್ತೋಲೆ (LOC) ಹೊರಡಿಸಲಾಗಿತ್ತು. ಆದರೆ, ಅವರು ಅಷ್ಟರಲ್ಲೇ ದೇಶ ಬಿಟ್ಟು ಪರಾರಿಯಾಗಿದ್ದರು.

ಇದನ್ನೂ ಓದಿ: Video: ಗೋವಾದ ನೈಟ್​ಕ್ಲಬ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ಹೇಗೆ? ಇಲ್ಲಿದೆ ಕಾರಣ

ಆರೋಪಿ ಗೌರವ್ ಮತ್ತು ಸೌರಭ್ ಲೂತ್ರಾ ಅವರ ವಿಳಾಸಗಳ ಮೇಲೆ ದಾಳಿ ನಡೆಸಲು ಗೋವಾ ಪೊಲೀಸರು ತಕ್ಷಣ ದೆಹಲಿಗೆ ತಂಡವನ್ನು ಕಳುಹಿಸಿದ್ದಾರೆ. ಈಗಾಗಲೇ 25 ಮಂದಿ ಮೃತರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು
ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು
ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್​ ದೂರು: ಆರೋಪವೇನು?
ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್​ ದೂರು: ಆರೋಪವೇನು?
KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ಹಲವರು ಗಂಭೀರ
KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ಹಲವರು ಗಂಭೀರ
ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?