ಪಣಜಿ: ಕೊರೊನಾ ಹಾವಳಿಯ ನಡುವೆಯೇ ಗೋವಾ ಮೈಕೊಡವಿ ಎದ್ದಿದೆ. ಕೊರೊನಾ ಅಂತಾ ಮನೆಯೊಳಗೆ ಕುಳಿತ್ರೆ ಹೊಟ್ಟೆಗೇನು ಮಾಡೋದು ಅಂತಾ ತನ್ನ ಪ್ರಮುಖ ಆದಾಯವಾದ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದೆ.
ಹೌದು, ಗೋವಾ ಸರ್ಕಾರ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆದಿದೆ. ಇದಕ್ಕಾಗಿ 250 ಹೋಟೆಲ್‌ಗಳ ಆರಂಭಕ್ಕೆ ಅನುಮತಿ ನೀಡಿದೆ. ಆದ್ರೆ ಹೀಗೆ ಪ್ರವಾಸಕ್ಕೆ ಬರುವವರಿಗೇನೋ ಸ್ವಾಗತ, ಆದ್ರೆ ಒಂದೇ ಒಂದು ಕಂಡಿಷನ್ ಇರುತ್ತೆ.
ಹಿಂಗಾದ್ರೆ.. ಬನ್ನಿ ಇಲ್ಲಾಂದ್ರೆ ನಿಮ್ಮಿಷ್ಟ!
ಅದು ಗೋವಾ ಪ್ರವಾಸಕ್ಕೆ ಬರುವವರು ಇದಕ್ಕೂ ಮುನ್ನ 48 ಗಂಟೆಯೊಳಗೆ ಕೋವಿಡ್-19 ಟೆಸ್ಟ್ ಮಾಡಿಸಿಕೊಂಡಿರಬೇಕು. ಅಥವಾ ಗೋವಾದೊಳಗೆ ಎಂಟರ್ ಆದ ತಕ್ಷಣವೇ ಟೆಸ್ಟ್ ಮಾಡಿಸಿಕೊಂಡು ರಿಸಲ್ಟ್ ಬರೋವರೆಗೆ ಕ್ವಾರಂಟೈನ್‌ನಲ್ಲಿರಬೇಕು. ಹಂಗಿದ್ರೆ ಬನ್ನಿ ಇಲ್ಲಾಂದ್ರೆ ನಿಮ್ಮಿಷ್ಟ ಅಂತಿದೆ.
Published On - 5:20 pm, Thu, 2 July 20