ಹಿಜ್ಬುಲ್​​ ಮುಜಾಹಿದ್ದೀನ್​​ ಮುಖ್ಯ ಕಮಾಂಡರ್​​ ಶೌಕತ್‌ ಅಹ್ಮದ್ ಶೇಖ್​​ನ್ನು ಭಯೋತ್ಪಾದಕನೆಂದು ಘೋಷಿಸಿದ ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Oct 04, 2022 | 6:39 PM

ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಿಜ್ಬುಲ್​​ ಮುಜಾಹಿದ್ದೀನ್​​ ಮುಖ್ಯ ಕಮಾಂಡರ್​​ ಶೌಕತ್‌ ಅಹ್ಮದ್ ಶೇಖ್​​ನ್ನು ಭಯೋತ್ಪಾದಕನೆಂದು ಕೇಂದ್ರ ಸರ್ಕಾರ ಘೋಷಿಸಿದೆ

ಹಿಜ್ಬುಲ್​​ ಮುಜಾಹಿದ್ದೀನ್​​ ಮುಖ್ಯ ಕಮಾಂಡರ್​​ ಶೌಕತ್‌ ಅಹ್ಮದ್ ಶೇಖ್​​ನ್ನು ಭಯೋತ್ಪಾದಕನೆಂದು ಘೋಷಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ಹಿಜ್ಬುಲ್‌ ಮುಜಾಹಿದ್ದೀನ್‌ (Hizbul Mujahideen) ಮುಖ್ಯ ಕಮಾಂಡರ್‌ ಶೌಕತ್‌ ಅಹ್ಮದ್ ಶೇಖ್​​ನ್ನು (Showkat Ahmed Sheikh) ಭಯೋತ್ಪಾದಕನೆಂದು  ಕೇಂದ್ರ ಸರ್ಕಾರ ಘೋಷಿಸಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ಶೇಖ್ ಭಾಗಿಯಾಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಆರೋಪದ ಮೇಲೆ ಭಾರತ ಸರ್ಕಾರವು 1967 ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್‌ ಮುಜಾಹಿದ್ದೀನ್‌ನ ಮುಖ್ಯ  ಕಮಾಂಡರ್ ಶೌಕತ್‌ ಅಹ್ಮದ್ ಶೇಖ್​​ನ್ನು  ಭಯೋತ್ಪಾದಕ ಎಂದು ಘೋಷಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

 

ಶೌಕತ್ ಅಹ್ಮದ್ ಶೇಖ್ 1970 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಗನಿ ಹಮಾಮ್ ಪ್ರದೇಶದಲ್ಲಿ ಜನಿಸಿದ್ದಾನೆ . ಗುಲಾಂ ನಬಿ ಶೇಖ್ ಅವರ ಪುತ್ರ ಶೌಕತ್ ಅಲಿಯಾಸ್ ಶೋಕತ್ ಮೋಚಿ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ.  ಉತ್ತರ ಕಾಶ್ಮೀರದಲ್ಲಿ ಆತನ ಆಳವಾದ ಸಹಚರರ ಜಾಲದಿಂದಾಗಿ ಒಳನುಸುಳುವಿಕೆ ಮತ್ತು ಭಯೋತ್ಪಾದಕರ ನೇಮಕಾತಿ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಆತ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಯುಎಪಿಎಯ ಸೆಕ್ಷನ್ 35 ರ ಉಪ-ವಿಭಾಗ (1) ರ ಷರತ್ತು (ಎ) ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಅಧಿಸೂಚನೆಯನ್ನು ಹೊರಡಿಸಿದೆ.

ಶೌಕತ್ ಅಹ್ಮದ್ ಶೇಖ್ ಅಲಿಯಾಸ್ ಶೌಕತ್ ಮೋಚಿ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಕೇಂದ್ರ ಸರ್ಕಾರ ನಂಬುತ್ತದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ಆತನನ್ನು ಭಯೋತ್ಪಾದಕ ಎಂದು ಘೋಷಿಸಿದೆ .

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 (1967 ರ 37) ಅನ್ನು ವ್ಯಕ್ತಿಗಳು ಮತ್ತು ಸಂಘಗಳ ಕೆಲವು ಕಾನೂನುಬಾಹಿರ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸಲು ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.  ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 35 ರ ಉಪ-ವಿಭಾಗ (1) ರ ಷರತ್ತು (ಎ) ಕಾಯಿದೆಯ ನಾಲ್ಕನೇ ಶೆಡ್ಯೂಲ್‌ನಲ್ಲಿರುವ ವ್ಯಕ್ತಿಯ ಹೆಸರನ್ನು ಸೂಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಮೊದಲ ಶೆಡ್ಯೂಲ್  ಅಡಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಪಟ್ಟಿ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

Published On - 5:21 pm, Tue, 4 October 22