Vande Sadharan: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬರಲಿವೆ ವಂದೇ ಸಾಧಾರಣ್​ ರೈಲುಗಳು: ಅಕ್ಟೋಬರ್​ನಲ್ಲಿ ಸ್ಲೀಪರ್​​ ಆವೃತ್ತಿ ಪ್ರಾರಂಭ

|

Updated on: Sep 16, 2023 | 8:58 PM

ಆರ್ಥಿಕವಾಗಿ ಹಿಂದುಳಿದವರು ಈ ರೈಲ್ವೇನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ವಂದೇ ಸಾಧಾರಣ್​ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಈ ವರ್ಷದ ಅಕ್ಟೋಬರ್​ನಲ್ಲಿ 'ವಂದೇ ಸಾಧರಣ್ ಎಕ್ಸ್​​ಪ್ರೆಸ್’ಎಂಬ ಹೆಸರಿನ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸಲಿದೆ.

Vande Sadharan: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬರಲಿವೆ ವಂದೇ ಸಾಧಾರಣ್​ ರೈಲುಗಳು: ಅಕ್ಟೋಬರ್​ನಲ್ಲಿ ಸ್ಲೀಪರ್​​ ಆವೃತ್ತಿ ಪ್ರಾರಂಭ
ವಂದೇ ಸಾಧಾರಣ್​ ರೈಲು
Follow us on

ಚೆನ್ನೈ, ಸೆಪ್ಟೆಂಬರ್​ 16: ‘ವಂದೇ ಭಾರತ್​​ ಎಕ್ಸ್​​ಪ್ರೆಸ್’​​ (Vande Bharat Express) ಈಗಾಗಲೇ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದೆ. ವಂದೇ ಭಾರತ್​ನಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಪ್ರಯಾಣಿಕರಿಗೆ ಹುಚ್ಚು ಆರಾಮದಾಯಕವಾಗಿದೆ. ಆದರೆ ಹೆಚ್ಚಿನ ದರಗಳಿಂದಾಗಿ ಆರ್ಥಿಕವಾಗಿ ಹಿಂದುಳಿದವರು ಈ ರೈಲ್ವೇನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ವಂದೇ ಸಾಧಾರಣ್​ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಈ ವರ್ಷದ ಅಕ್ಟೋಬರ್​ನಲ್ಲಿ ‘ವಂದೇ ಸಾಧರಣ್ ಎಕ್ಸ್​​ಪ್ರೆಸ್’ (Vande Sadharan) ಎಂಬ ಹೆಸರಿನ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸಲಿದೆ.

ಒಟ್ಟು 22 ಕೋಚ್​ಗಳು

‘ವಂದೇ ಸಾಧರಣ್ ಎಕ್ಸ್​​ಪ್ರೆಸ್’ ರೈಲ್ವೇ 22 ಕೋಚ್‌ಗಳನ್ನು ಹೊಂದಿದ್ದು, ಎರಡೂ ಭಾಗಗಳಲ್ಲಿ 2 WAP-5 ಇಂಜಿನ್‌ಗಳನ್ನು ಹೊಂದಿದೆ. ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುವ ರೈಲು ವಂದೇ ಭಾರತ್ ತರಹದ ಕ್ಲಾಸಿ ಇಂಟೀರಿಯರ್ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಸ್ವಯಂಚಾಲಿತ ಬಾಗಿಲುಗಳು ಮತ್ತು ಎಸಿ ಹೊಂದಿರುವುದಿಲ್ಲ.

ಇದನ್ನೂ ಓದಿ: Vande Bharat Express; ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಶೀಘ್ರ ಚಾಲನೆ

ಈ ಕುರಿತಾಗಿ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಬಿ.ಜಿ ಮಲ್ಯ ಮಾತನಾಡಿ, ಈ  ವರ್ಷದಲ್ಲಿ ನಾವು ವಂದೇ ಭಾರತ್​ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸುತ್ತೇವೆ. ಅದೇ ರೀತಿಯಾಗಿ ಈ ವರ್ಷದಿಂದಲೇ ವಂದೇ ಮೆಟ್ರೋವನ್ನು ಸಹ ಪ್ರಾರಂಭಿಸುತ್ತೇವೆ. ಆರ್ಥಿಕವಾಗಿ ಹಿಂದೂಳಿದ ಪ್ರಯಾಣಿಕರಿಗಾಗಿ ಈ ರೈಲನ್ನು ಪ್ರಾರಂಭಿಸುತ್ತೇವೆ, ಇದನ್ನು ನಾನ್-ಎಸಿ ಪುಶ್-ಪುಲ್ ರೈಲು ಎಂದು ಕರೆಯಲಾಗುತ್ತದೆ. ಇದು 22 ಕೋಚ್‌ಗಳು ಮತ್ತು ಲೊಕೊಮೊಟಿವ್ ಅನ್ನು ಹೊಂದಿರುತ್ತದೆ. ಅಕ್ಟೋಬರ್ 31 ರಂದು ಈ ರೈಲುಗಳನ್ನು ಓಡಾಟ ನಡೆಸಲಿವೆ ಎಂದರು.

ಇದನ್ನೂ ಓದಿ: ಹೈದರಾಬಾದ್‌ಗೆ 3 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಭಾಗ್ಯ, ಇದು ಬೆಂಗಳೂರಿಗೂ ವರದಾನ

ಚೆನ್ನೈನ ಅವಡಿಯಲ್ಲಿರುವ ಭಾರತೀಯ ರೈಲ್ವೇ ಒಡೆತನದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಎಕ್ಸ್‌ಪ್ರೆಸ್ ರೈಲುಗಳ ರೇಕ್‌ಗಳ ಜೊತೆಗೆ ವಂದೇ ಭಾರತ್ ರೈಲುಗಳನ್ನು ಸಹ ತಯಾರಿಸುತ್ತದೆ. ವಂದೇ ಭಾರತ್ ಸ್ಲೀಪರ್ ರೈಲು 16 ಕೋಚ್‌ಗಳನ್ನು ಹೊಂದಿರುತ್ತದೆ. 11 ಮೂರು-ಶ್ರೇಣಿ, ನಾಲ್ಕು ದ್ವಿ-ಶ್ರೇಣಿ ಮತ್ತು ಒಂದು ಪ್ರಥಮ ದರ್ಜೆ ರೈಲುಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.