Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’: ಪ್ರಧಾನಿ ಮೋದಿ ಜನ್ಮದಿನದಂದು ವಿಶೇಷ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವನ್ನು ಸೇವಾ ಮತ್ತು ಜನ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ನಾಗರಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’ ಎಂಬ ವಿಶೇಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ. 

‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’: ಪ್ರಧಾನಿ ಮೋದಿ ಜನ್ಮದಿನದಂದು ವಿಶೇಷ ಅಭಿಯಾನ
ಸೇವಾ ಭಾವ
Follow us
ಗಂಗಾಧರ​ ಬ. ಸಾಬೋಜಿ
|

Updated on: Sep 16, 2023 | 10:46 PM

ದೆಹಲಿ, ಸೆಪ್ಟೆಂಬರ್​ 16: ಸೆ. 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ 73ನೇ ಜನ್ಮದಿನವನ್ನು ಆಚರಿಸಲು ಸಚಿವಾಲಯವು ವಿಶೇಷ ಕಾರ್ಯಗಳನ್ನು ಆಯೋಜಿಸಿದೆ. ಜೊತೆಗೆ ಭಾರತೀಯ ಜನತಾ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ತಮ್ಮ ಜನ್ಮದಿನವನ್ನು ಸೇವಾ ಮತ್ತು ಜನ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ನಾಗರಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’ (Express your Seva Bhav) ಎಂಬ ವಿಶೇಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ.

ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ‘ಸೇವೆಯ ಉಡುಗೊರೆ’ ಆಗಿ ತಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಬಹುದಾಗಿ. ಅದು ನಮೋ ಆ್ಯಪ್ ಬಳಕೆದಾರರಾಗಿರಬಹುದು, ಕಾರ್ಯಕರ್ತರಾಗಿರಬಹುದು ಅಥವಾ ಇತರೆ ಯಾರುಬೇಕಾದರು ಆಗಿರಬಹುದು.

ಇದನ್ನೂ ಓದಿ: Yashobhoomi: ತಮ್ಮ ಜನ್ಮದಿನದಂದೇ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್​ ಸೆಂಟರ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಈ ಉಡುಗೊರೆ ಭಾರತೀಯರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವವನ್ನು ಹುಟ್ಟುಹಾಕುವುದಲ್ಲದೆ, ರಾಷ್ಟ್ರದ ಸೇವೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ನಾಯಕರನ್ನು ಸ್ಮರಿಸಲು ಇದಕ್ಕಿಂತ ಉತ್ತಮವಾದ ದಿನವಿಲ್ಲ.

ನಮೋ ಆಪ್‌ನ ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಬಳಸಿಕೊಂಡು ಪ್ರತಿಜ್ಞೆ ಮತ್ತು ಸೇವೆಯನ್ನು ದಾಖಲು ಮಾಡಲಾಗುತ್ತದೆ. ಇದು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಹೊಸ ಭಾರತದ ಸಂಕಲ್ಪವನ್ನು ಬಲಪಡಿಸುವಲ್ಲಿ ಬಹಳ ದೂರ ಕೊಂಡ್ಯೊಯಲಿದೆ.

ಇದನ್ನೂ ಓದಿ: PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು

ನಿಮ್ಮ ಸೇವಾ ಭಾವ ಅಭಿಯಾನದ ಮೂಲಕ ಸೇವಾ ಚಟುವಟಿಕೆಗಳ ಫೋಟೋಗಳನ್ನು ಅಪ್ ಲೋಡ್ ಮಾಡಬಹುದು. 9 ವಿಭಿನ್ನ ಸೇವಾ ಚಟುವಟಿಕೆಗಳಿವೆ. ಸೇವಾ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಪಡೆದ ಬ್ಯಾಡ್ಜ್ ಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರೊಂದಿಗೆ ಇತರರನ್ನು ಪ್ರೇರೆಪಿಸಬಹುದಾಗಿದೆ.

9 ವಿಭಿನ್ನ ಸೇವಾ ಚಟುವಟಿಕೆ ಹೀಗಿವೆ

  • ಆತ್ಮನಿರ್ಭರ್
  • ರಕ್ತದಾನ
  • ಮಳೆ ನೀರು ಸಂಗ್ರಹ
  • ಲೀಡಿಂಗ್ ಡಿಜಿಟಲ್ ಇಂಡಿಯಾ
  • ಏಕ್ ಭಾರತ್ ಶ್ರೇಷ್ಠ ಭಾರತ್
  • ಲೈಫ್: ಪ್ರೊ-ಪ್ಲಾನೆಟ್ ಪೀಪಲ್
  • ಸ್ವಚ್ಛ ಭಾರತ
  • ಟಿಬಿ ಮುಕ್ತ ಭಾರತ
  • ಒಕಲ್​ ಫಾರ್​​ ಲೋಕಲ್

ನಮೋ ಆ್ಯಪ್ ಎಂದು ಜನಪ್ರಸಿದ್ಧಿ ಪಡೆದಿರುವ ನರೇಂದ್ರ ಮೋದಿ ಅಪ್ಲಿಕೇಶನ್, ಮಾಹಿತಿ ಮತ್ತು ಸಾಧನೆಗಳ ಸಮಗ್ರ ಭಂಡಾರವಾಗಿದೆ. ಬೆರಳ ತುದಿಯಲ್ಲೇ ಎಲ್ಲವೂ ಸಾಧ್ಯವಿರುವ ಈ ಡಿಜಿಟಲ್ ಯುಗದಲ್ಲಿ, ನಮೋ ಅಪ್ಲಿಕೇಶನ್, ನಿಮ್ಮ ಸ್ಮಾರ್ಟ್ ಸಾಧನದ ಮೂಲಕ ನೇರವಾಗಿ ನಿಮಗೆ ತಲುಪಿಸುತ್ತಿದೆ.

ನಮೋ ಆ್ಯಪ್​​, ರಾಷ್ಟ್ರೀಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸಂಬಂಧಿಸಿದಂತೆ ಜನರನ್ನು ಸಂಪರ್ಕಿಸುವ ಪ್ರಮುಖ ವೇದಿಕೆಗಳಲ್ಲಿ ಒಂದಾಗಿದೆ. ಆ ಮೂಲಕ ಜನರು ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಭಾಗವಾಗಿದ್ದಾರೆ.

ರಾಷ್ಟ್ರೀಯ ಸುದ್ದಿಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!