Yashobhoomi: ತಮ್ಮ ಜನ್ಮದಿನದಂದೇ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ಅಂದರೆ ನಾಳೆ ದ್ವಾರಕಾದಲ್ಲಿ ನಿರ್ಮಿಸಿರುವ ‘ಯಶೋಭೂಮಿ’ ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (ಐಐಸಿಸಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ.
ದೆಹಲಿ, ಸೆಪ್ಟೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ಅಂದರೆ ನಾಳೆ ದ್ವಾರಕಾದಲ್ಲಿ ನಿರ್ಮಿಸಿರುವ ‘ಯಶೋಭೂಮಿ’ (Yashobhoomi) ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (ಐಐಸಿಸಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ಯಶೋಭೂಮಿಯು ವಿಶ್ವದ ಅತಿದೊಡ್ಡ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಾಲಯಗಳನ್ನು ನಡೆಸಬಹುದಾದ ಸೌಲಭ್ಯಗಳನ್ನು ಒಳಗೊಂಡಿದೆ. ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಎಂದೂ ಕರೆಯಲ್ಪಡುವ ಯಶೋಭೂಮಿಯು ಒಟ್ಟು 8.9 ಲಕ್ಷ ಚದರ ಮೀಟರ್ ಪ್ರದೇಶ ಹೊಂದಿದೆ.
ಯಶೋಭೂಮಿನ ಕೆಲ ಪ್ರಮುಖ ಅಂಶಗಳು
- ಸುಮಾರು 5.400 ಕೋಟಿ ರೂ. ವೆಚ್ಚದಲ್ಲಿ ಯಶೋಭೂಮಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಅತ್ಯಂತ ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.
- 73 ಸಾವಿರ ಚದರ ಮೀಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಶನ್ ಸೆಂಟರ್, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 11 ಸಾವಿರ ಪ್ರತಿನಿಧಿಗಳು ಒಟ್ಟಿಗೆ ಸೇರಬಹುದಾದ 13 ಸಭೆ ಕೊಠಡಿಗಳು, 15 ಕನ್ವೆನ್ಶನ್ ಕೊಠಡಿಗಳನ್ನು ಒಳಗೊಂಡಿದೆ.
ಎಎನ್ಐ ಟ್ವೀಟ್
#WATCH | Visuals of ‘YashoBhoomi’ that Prime Minister Narendra Modi will dedicate to the nation at Dwarka on 17th September in Delhi. pic.twitter.com/j5D86ruHAv
— ANI (@ANI) September 16, 2023
- ಸುಮಾರು 6 ಸಾವಿರ ಅತಿಥಿಗಳು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಆಸನ ಸಾಮರ್ಥ್ಯವನ್ನು ಹೊಂದಿದೆ. ವಿಶಿಷ್ಟವಾದ ಛಾವಣಿಯನ್ನು ಹೊಂದಿರುವ ಭವ್ಯವಾದ ಬಾಲ್ ರೂಮ್ ಸುಮಾರು 2,500 ಅತಿಥಿಗಳಿಗೆ ಆತಿಥ್ಯ ವಹಿಸಬಹುದು. ಇದು 500 ಜನರು ಕುಳಿತುಕೊಳ್ಳಬಹುದಾದ ವಿಸ್ತೃತ ತೆರೆದ ಪ್ರದೇಶವನ್ನು ಸಹ ಹೊಂದಿದೆ. 8 ಮಹಡಿಗಳಲ್ಲಿ 13 ಮೀಟಿಂಗ್ ಕೊಠಡಿಗಳಿವೆ.
- ಯಶೋಭೂಮಿ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣಗಳಲ್ಲಿ ಒಂದು. 1.07 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಪ್ರದರ್ಶನ ಸಭಾಂಗಣಗಳನ್ನು ಪ್ರದರ್ಶನ, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಳ್ಳಲಾಗುತ್ತದೆ. ಫೋಯರ್ ಮಾಧ್ಯಮ ಕೊಠಡಿಗಳು, ವಿವಿಐಪಿ ಲಾಂಜ್‌ಗಳು, ಕ್ಲೋಕ್ ಸೌಲಭ್ಯಗಳು, ಸಂದರ್ಶಕರ ಮಾಹಿತಿ ಕೇಂದ್ರ ಸಹ ಹೊಂದಿದೆ.
- ಅದೇ ದಿನ ಹೊಸ ಮೆಟ್ರೋ ಸ್ಟೇಷನ್ ‘ಯಶೋಭೂಮಿ ದ್ವಾರಕಾ ಸೆಕ್ಟರ್ 25’ ಉದ್ಘಾಟನೆಯ ನಂತರ ಯಶೋಭೂಮಿ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.
- ಯಶೋಭೂಮಿಯು ಹೈಟೆಕ್ ಭದ್ರತಾ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ. 3 ಸಾವಿರಕ್ಕೂ ಹೆಚ್ಚು ಕಾರ್ ಪಾರ್ಕಿಂಗ್, 100 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Sat, 16 September 23