PM Modi and RSS Vakil Saheb: ತುರ್ತುಪರಿಸ್ಥಿತಿ ವೇಳೆ ಮೋದಿ ಮಾರ್ಗದರ್ಶಕರಾದ ‘ವಕೀಲ್ ಸಾಬ್’ ಲಕ್ಷ್ಮಣರಾವ್ ಜೊತೆಗಿನ ಅವಿನಾಭಾವ ಸಂಬಂಧದ ಚಿತ್ರಣ ಹೀಗಿದೆ

1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದರು. ಇದು ಸರ್ಕಾರದ ವಿರೋಧಿಗಳು ಮತ್ತು ಟೀಕಾಕಾರರ ಸರ್ಕಾರಿ ವಿಚಾರಣೆ ಮತ್ತು ಜೈಲು ಶಿಕ್ಷೆಗೆ ಮೂಲವಾಯಿತು. ಈ ಅವಧಿಯಲ್ಲಿ ನಿಷೇಧಕ್ಕೊಳಗಾದ ಗುಂಪುಗಳಲ್ಲಿ ಆರ್‌ಎಸ್‌ಎಸ್ ಕೂಡ ಒಂದು. ಈ ಸಮಯದಲ್ಲಿ ಮೋದಿ ತಮ್ಮ ಔಪಚಾರಿಕ ಅಧ್ಯಯನವನ್ನು ಪರಿಪೂರ್ಣಗೊಳಿಸಲು ತಮ್ಮ ಮಾರ್ಗದರ್ಶಕರಾದ ಇನಾಮದಾರ್ ಅವರನ್ನು ಕೋರಿದರು.

PM Modi and RSS Vakil Saheb: ತುರ್ತುಪರಿಸ್ಥಿತಿ ವೇಳೆ ಮೋದಿ ಮಾರ್ಗದರ್ಶಕರಾದ ‘ವಕೀಲ್ ಸಾಬ್’ ಲಕ್ಷ್ಮಣರಾವ್ ಜೊತೆಗಿನ ಅವಿನಾಭಾವ ಸಂಬಂಧದ ಚಿತ್ರಣ ಹೀಗಿದೆ
ನರೇಂದ್ರ ಮೋದಿ ಮಾರ್ಗದರ್ಶಕರಾದ 'ವಕೀಲ್ ಸಾಬ್' ಲಕ್ಷ್ಮಣರಾವ್  ಅವಿನಾಭಾವ ಸಂಬಂಧದ ಚಿತ್ರಣ
Follow us
|

Updated on:Sep 17, 2023 | 2:14 AM

ಶಾಂತ ಪಟ್ಟಣವಾದ ವಡ್ನಗರದಲ್ಲಿ, 17 ಸೆಪ್ಟೆಂಬರ್ 1950 ರಂದು, ಚಹಾ ಮಾರಾಟಗಾರ ಮತ್ತು ಅವರ ಪತ್ನಿ ತಮ್ಮ ಮೂರನೇ ಮಗನಿಗೆ ಜನ್ಮ ನೀಡಿದ್ದರು. ಆದರೆ ಅಂದು ಜನಿಸಿದ ನರೇಂದ್ರ ದಾಮೋದರದಾಸ್ ಮೋದಿ (Narendra Damodardas Modi) ಅವರು ಗುಜರಾತ್‌ನ ದೀರ್ಘಾವಧಿಯ ಮುಖ್ಯಮಂತ್ರಿಯಾಗುತ್ತಾರೆ ಎಂದೂ, ಅಂತಿಮವಾಗಿ ಭಾರತದ 14 ನೇ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ಆ ದಂಪತಿ- ದಾಮೋದರದಾಸ್ ಮುಲ್ಚಂದ್ ಮತ್ತು ಅವರ ಪತ್ನಿ ಹೀರಾಬೆನ್ ಅವರಿಗೆ ತಿಳಿದಿರಲಿಲ್ಲ. ತಮ್ಮ ಬಾಲ್ಯದಲ್ಲಿ ಮೋದಿ ಆಗಾಗ್ಗೆ ತಮ್ಮ ತಂದೆಯ ಟೀ ಸ್ಟಾಲ್‌ ಕೆಲಸಗಳನ್ನು ಮಾಡುತ್ತಿದ್ದರು. ನರೇಂದ್ರ ಅವರು ತಮ್ಮ ಕೆಲವು ಗೆಳೆಯರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸಿದ್ದ ಗುಂಪು ಸಮಾವೇಶಗಳಲ್ಲಿ ಭಾಗವಹಿಸತೊಡಗಿದರು. ಸ್ನೇಹಿತರ ಸಮೂಹದೊಂದಿಗೆ ಗುರುತಿಸಿಕೊಂಡು ಶಾಲಾ ಅವಧಿಯ ನಂತರ ಸಣ್ಣಪುಟ್ಟ ಸಭೆಗಳನ್ನು ನಡೆಸತೊಡಗಿದರು. ಮುಂದೆ ಇದೇ ನರೇಂದ್ರ ಮೋದಿಯ ರಾಜಕೀಯ ಭವಿಷ್ಯದ ಬೆಳವಣಿಗೆಯಲ್ಲಿ ನಿರ್ಣಾಯಕವಾಗಿ ವಿಕಸನಗೊಂಡಿತು (Lakshmanrao Inamdar -RSS Advocate Sir who mentored Modi). ಅಂದಹಾಗೆ ಇಂದು ಸೆಪ್ಟೆಂಬರ್​ 17 ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನ.

ಆರ್‌ಎಸ್‌ಎಸ್ ಸ್ವಯಂಸೇವಕರಾಗಿ, ನರೇಂದ್ರ ಅವರು ಸಂಸ್ಥೆಯ ತಳಮಟ್ಟದ ಚಟುವಟಿಕೆಗಳಲ್ಲಿ ಭಾಗವಹಿಸಿದರು; ಮತ್ತು ಅವರು ನಿಯಮಿತವಾಗಿ ಸಂಸ್ಥೆಯ ದಿನಂಪ್ರತಿಯ ಸಭೆಗಳಿಗೆ ಹಾಜರಾಗುತ್ತಿದ್ದರು. ಅದೇ ವೇಳೆಯಲ್ಲಿ ಶಾಲೆ ಮತ್ತು ಟೀ ಸ್ಟಾಲ್‌ನಲ್ಲಿನ ದೈನಂದಿನ ಜಂಜಾಟದಿಂದ ತಪ್ಪಿಸಿಕೊಳ್ಳಲು ನರೇಂದ್ರ ಕ್ಷಿಪ್ರವಾಗಿ ವಿಕಸನಗೊಳ್ಳತೊಡಗಿದ. RSS ತರಬೇತಿಯು ಎರಡು ಭಾಗಗಳನ್ನು ಒಳಗೊಂಡಿತ್ತು: ಒಂದು ದೈಹಿಕ ಸಾಮರ್ಥ್ಯದ ಮೇಲೆ ಮತ್ತು ಇನ್ನೊಂದು ವೈಯಕ್ತಿಕವಾಗಿ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿತ್ತು. ಈ ತರಬೇತಿಯು ಮೋದಿಯವರ ಜೀವನದುದ್ದಕ್ಕೂ ದೀರ್ಘಾವಧಿಯ ಪ್ರಭಾವವನ್ನು ಬೀರಿತು. ಇದು ನರೇಂದ್ರನಿಗೆ ಉನ್ನತ ಸ್ತರವನ್ನು ಒದಗಿಸಿತು, ಜೊತೆಗೆ ದೃಢಸಂಕಲ್ಪದಿಂದ ಮುಂದುವರಿಸುವ ಶಕ್ತಿಯನ್ನು ನೀಡಿತು.

ಮೋದಿಯವರ ಹಿರಿಯ ಸಹೋದರ ಸೋಂಬಾಯಿ ಮೋದಿ ಪ್ರಕಾರ ನರೇಂದ್ರ ಯಾವಾಗಲೂ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದರು. ಮನೆಯಲ್ಲಿ ಮತ್ತು ಶಾಲೆಯಲ್ಲಿ ನಾವು ದಿನಚರಿಯಾಗಿ ಮಾಡುವುದಕ್ಕಿಂತ ಹೆಚ್ಚಿನದನ್ನು ಬಯಸಿದ್ದ. ಮತ್ತು ಆರ್‌ಎಸ್‌ಎಸ್ ಶಾಖೆ ಅವನಿಗೆ ಅಂತಹ ವೇದಿಕೆಯನ್ನು ಒದಗಿಸಿತು. ಆರ್‌ಎಸ್‌ಎಸ್‌ಗೆ ಸಮರ್ಪಿಸಿಕೊಳ್ಳುವ ಮೂಲಕ ಅವರ ಸಂಪೂರ್ಣ ಜೀವನ ರೂಪಿತಗೊಂಡಿತು. ಅದು ಕೇವಲ ರಾಜಕೀಯವಾಗಿ ಮಾತ್ರವಲ್ಲ, ವೈಯಕ್ತಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಸಾಗಿತು. ಭಾರತದಲ್ಲಿ ಬಲಪಂಥೀಯ ರಾಷ್ಟ್ರೀಯತಾವಾದಿ ನಿರೂಪಣೆಯನ್ನು ಉತ್ತೇಜಿಸುವ ತಳಮಟ್ಟದ ಸಂಘಟನೆಯಾಗಿ, ಆರ್‌ಎಸ್‌ಎಸ್ ಭವಿಷ್ಯದಲ್ಲಿ ಮೋದಿಯ ಬ್ರಾಂಡ್ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಆರ್‌ಎಸ್‌ಎಸ್ ಮೋದಿ ಭವಿಷ್ಯವನ್ನು ರೂಪಿಸತೊಡಗಿತ್ತು. ಸಕ್ರಿಯ ರಾಜಕೀಯಕ್ಕೆ ಪ್ರವೇಶ ಪಡೆಯಲು ಅದು ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸಿತು. ಮೋದಿಯವರು ಆರೆಸ್ಸೆಸ್ ಮೂಲಕ ಮುಂದೆ ತಮ್ಮ ರಾಜಕೀಯ ಮಾರ್ಗದರ್ಶಕರಾದ ಲಕ್ಷ್ಮಣರಾವ್ ಇನಾಮದಾರ್ ಅವರನ್ನು ಭೇಟಿಯಾದರು. ರಾಜಕೀಯ ಜೀವನಚರಿತ್ರೆಕಾರ ಕಿಂಗ್‌ಶುಕ್ ನಾಗ್ ಪ್ರಕಾರ, ಮೋದಿಯನ್ನು ಆರ್‌ಎಸ್‌ಎಸ್ ವಲಯಗಳಲ್ಲಿ ಇನಾಮದಾರ್‌ರ ಮಾನಸ ಪುತ್ರ ಅಥವಾ ಸೈದ್ಧಾಂತಿಕ ಪುತ್ರ ಎಂದು ಪರಿಗಣಿತರಾದರು. ಮೋದಿಯವರ ಪ್ರಕಾರ ತಾನು ವಿದ್ಯಾರ್ಥಿ ಕೆಡೆಟ್ ಆಗಿದ್ದಾಗ ಇನಾಮದಾರ್‌ರ ಜೊತೆಗಿನ ಬಾಂಧವ್ಯ ವೃದ್ಧಿಸತೊಡಗಿತು. ಇನಾಮದಾರ್ ಆರ್‌ಎಸ್‌ಎಸ್‌ನ ಕಟ್ಟಾ ಸದಸ್ಯರಾಗಿದ್ದರು, ಅವರು ಆರ್‌ಎಸ್‌ಎಸ್ ಶಾಖೆಗಳನ್ನು ಸ್ಥಾಪಿಸಲು ಗುಜರಾತ್‌ನಲ್ಲಿ ವ್ಯಾಪಕವಾಗಿ ಸಂಚರಿಸಿದರು. ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಪ್ರೀತಿಯಿಂದ ಇನಾಮದಾರ್‌ರನ್ನು ‘ವಕೀಲ್ ಸಾಹೇಬ್’ ಅಥವಾ ‘ಅಡ್ವೊಕೇಟ್ ಸರ್’ (Vakil Saheb or Advocate Sir) ಎಂದು ಜನ ಕರೆಯುತ್ತಿದ್ದರು.

ಮುಂದೆ ಮೋದಿ ಅವರು ಇನಾಮದಾರ್ ಅವರ ಜೀವನಚರಿತ್ರೆಯನ್ನು ಬರೆದರು. ತಮ್ಮ ಗುರುವಿಗೆ ಕೃತಜ್ಞತೆಯ ಸೂಚಕವಾಗಿ ಅದಕ್ಕೆ ಜ್ಯೋತಿ ಪಂಜ್ ಎಂಬ ಶೀರ್ಷಿಕೆಯನ್ನಿಟ್ಟರು. ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಹತ್ಯೆಯ ನಂತರ ತನ್ನ ಗೆಳೆಯರ ಪರವಾಗಿ ನ್ಯಾಯಾಲಯದ ಸವಾಲುಗಳ ವಿರುದ್ಧ ಹೋರಾಡಲು ಇನಾಮದಾರ್ ಹೇಗೆ ಪಟ್ಟುಬಿಡದೆ ಕೆಲಸ ಮಾಡಿದರು ಎಂಬುದನ್ನು ನೆನಪಿಸಿಕೊಂಡ ಮೋದಿ ಪುಸ್ತಕದಲ್ಲಿ ಇನಾಮದಾರ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನಾಮದಾರ್ ಅವರು ಮೋದಿಯವರ ರಾಜಕೀಯ ಜಗತ್ತಿನ ದೃಷ್ಟಿಕೋನವನ್ನು ರೂಪಿಸುವುದಲ್ಲದೆ, ಅವರನ್ನು ಸಕ್ರಿಯ ರಾಜಕಾರಣದ ಜೀವನದಲ್ಲಿ ತೊಡಗಿಸಿಕೊಳ್ಲುವಂತೆ ಪ್ರೇರೇಪಿಸಿದ ವ್ಯಕ್ತಿಯೂ ಆಗಿದ್ದರು.

ಇದನ್ನೂ ಓದಿ: PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು

ಮೋದಿ ಅವರನ್ನು ಸಕ್ರಿಯ ತಳಮಟ್ಟದ ರಾಜಕೀಯಕ್ಕೆ ಪರಿಚಯಿಸಲ್ಪಟ್ಟಾಗ ಅವರು ತಮ್ಮ ವಾಕ್ಚಾತುರ್ಯ ಮತ್ತು ಸಾರ್ವಜನಿಕ ಸಂವಹನ ಸಾಮರ್ಥ್ಯವನ್ನು ಓರೆಗೆ ಹಚ್ಚುತ್ತಿದ್ದರು. ಮೋದಿಯನ್ನು ರಾಜಕಾರಣಿ ಎಂದು ನಿರ್ಣಯಿಸುವಾಗ ಈ ಅಂಶಗಳು ಗಮನಾರ್ಹವಾಗುತ್ತದೆ. ಬಾಲ್ಯದಲ್ಲಿ, ಅವರು ಶಾಲೆಯ ನಾಟಕಗಳು ಮತ್ತು ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವವರಾಗಿದ್ದರು, ಇದು ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿತು, ಅಂತಿಮವಾಗಿ ಇಂದಿನ ವಿಶ್ವ ಮೋಡಿಗಾರನಂತಹ ವ್ಯಕ್ತಿಯನ್ನಾಗಿ ಪರಿವರ್ತಿಸಿತು. ಅವರು ತಮ್ಮ ವಾಕ್ಚಾತುರ್ಯದ ಮೂಲಕ ಜನರನ್ನು ಸಜ್ಜುಗೊಳಿಸುವ ಕಲೆಯನ್ನು ಸಿದ್ಧಿಸಿಕೊಂಡಿದ್ದರು.

ನರೇಂದ್ರ ಘಾಂಚಿ ಜಾತಿಗೆ (Ghanchi caste) ಸೇರಿದವನಾಗಿದ್ದು, ಆ ಜಾತಿಯಲ್ಲಿ ಮಕ್ಕಳನ್ನು ಹೆಚ್ಚಾಗಿ ಮೂರು ಹಂತಗಳ ಮೂಲಕ ಮದುವೆ ಮಾಡಿಸುತ್ತಾರೆ. ಮೊದಲ ಹಂತದಲ್ಲಿ ಸೂಕ್ತ ವಧುವಿನ ಹುಡುಕಾಟ ನಡೆಯುತ್ತದೆ; ಎರಡನೇ ಹಂತದಲ್ಲಿ ಅಂದರೆ 13 ನೇ ವಯಸ್ಸಿನಲ್ಲಿ ಔಪಚಾರಿಕ ವಿವಾಹ ಪ್ರಕ್ರಿಯೆ ಒಳಗೊಂಡಿರುತ್ತದೆ; ಮತ್ತು ಮೂರನೆಯ ಕಾಲಘಟ್ಟದಲ್ಲಿ ನವ ದಂಪತಿ ತಮ್ಮ 16 ಅಥವಾ 17 ನೇ ವಯಸ್ಸಿನಲ್ಲಿ ತಿರುಗಾಡುವುದು ಒಳಗೊಂಡಿರುತ್ತದೆ.

ಘಾಂಚಿ ಜಾತಿ ಸಂಪ್ರದಾಯದಂತೆ ಮೋದಿ ತಮ್ಮ ಆರನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಸುಮಾರು 13ನೇ ವಯಸ್ಸಲ್ಲಿ ಜಶೋದಾಬೆನ್ ಅವರನ್ನು ವಿವಾಹವಾದರು. ಆದರೆ ಎರಡನೇ ಹಂತದ ನಂತರ, ಮೋದಿ ಮದುವೆ ಕಲ್ಪನೆಯ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದರು. ಆದ್ದರಿಂದ, 1967 ರಲ್ಲಿ ತನ್ನ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ನಂತರ ಮತ್ತು ತನ್ನ ಸಂಗಾತಿಯೊಂದಿಗೆ (ಜಶೋದಾಬೆನ್) ಮನೆಯಿಂದ ಹೊರಹೋಗುವುದಕ್ಕೂ ಮೊದಲು, ಮೋದಿ ಮನೆ-ಮಡದಿಯನ್ನು ತೊರೆದು ಈಶಾನ್ಯ ಭಾರತದಲ್ಲಿ ವಿವಿಧ ಮಠಗಳು (ದೇವಾಲಯಗಳು ಅಥವಾ ಮಠಗಳು) ಮತ್ತು ಆಶ್ರಮಗಳ ಸುತ್ತ ಅಲೆದಾಡಿದರು. ಈ ಸಮಯದಲ್ಲಿ ಅವರು ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಆಧರಿಸಿದ ಕಲಿಕೆಯ ಕೇಂದ್ರಗಳಲ್ಲಿ ಹೆಚ್ಚಿನ ಜ್ಞಾನವನ್ನು ಹುಡುಕಲು ಸಂಚರಿಸಿದರು. ಆದರೆ ಈ ಅಲೆದಾಟ ತನ್ನ ಜೀವನಕ್ಕೆ ಸರಿಹೊಂದುವುದಿಲ್ಲ ಎಂದು ಮೋದಿಗೆ ಅದಾಗಲೇ ಅರಿವಿಗೆ ಬರತೊಡಗಿತು. ಹಾಗಾಗಿ 1970 ರಲ್ಲಿ ಅವರು ಚಿಕ್ಕಪ್ಪನ ಕ್ಯಾಂಟೀನ್​ನಲ್ಲಿ ಕೆಲಸ ಮಾಡಲು ಅಹಮದಾಬಾದ್​​ಗೆ ತೆರಳುವ ಮೊದಲು, ಸ್ವಲ್ಪ ಅವಧಿಗೆ ತಮ್ಮ ಸ್ವಂತ ಮನೆಗೆ ಮರಳಿದ್ದರು.

ಆದಾಗ್ಯೂ, ತಮ್ಮ ವೈಯಕ್ತಿಕ ಜೀವನದಲ್ಲಿ ಈ ಬದಲಾವಣೆಗಳ ಉದ್ದಕ್ಕೂ, ಮೋದಿ ಯಾವಾಗಲೂ ಆರ್‌ಎಸ್‌ಎಸ್ ಮತ್ತು ಅದರ ಬೋಧನೆಗಳನ್ನು ತಮ್ಮ ಮನಸ್ಸಿನಲ್ಲಿ ಆಳವಾಗಿ ಕೂಡಿಸಿಕೊಂಡಿದ್ದರು. ಅಹಮದಾಬಾದ್‌ನಲ್ಲಿ ಮೋದಿ RSS ಸದಸ್ಯರು ಮತ್ತು ಇನಾಮದಾರ್ ಅವರೊಂದಿಗೆ ಮರುಸಂಪರ್ಕ ಹೊಂದಿದರು. ತಮ್ಮ ಗುರು ಇನಾಮದಾರರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಿರ್ದಿಷ್ಟವಾಗಿ 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಅವರು ರಾಜಕೀಯವಾಗಿ ಸಕ್ರಿಯರಾದರು. ಪೂರ್ವ ಪಾಕಿಸ್ತಾನದ ಮೇಲೆ ಪಾಕಿಸ್ತಾನದ ದಮನಕಾರಿ ನೀತಿಯ ವಿರುದ್ಧದ ಪ್ರತಿಭಟನೆಗಳಲ್ಲಿ ಮೋದಿ ಭಾಗವಹಿಸಿದರು. ಮತ್ತು ನಂತರ ಸರ್ಕಾರ-ವಿರೋಧಿ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಪರಿಣಾಮವಾಗಿ ಅವರನ್ನು ಬಂಧಿಸಲಾಗಿತ್ತು ಎಂಬ ವರದಿಗಳೂ ಇವೆ. ಮೊದಿ ಸಕ್ರಿಯವಾಗಿ ಭಾಗವಹಿಸುವಿಕೆಯು ಆರ್‌ಎಸ್‌ಎಸ್ ಸದಸ್ಯರ ಗಮನವನ್ನು ಸೆಳೆಯಿತು ಮತ್ತು ಅವರು ಸಂಘಟನೆಯೊಳಗೆ ಪ್ರಾಮುಖ್ಯತೆಯನ್ನು ಗಳಿಸಿದರು.

1972 ರಲ್ಲಿ, ಮೋದಿ ತಮ್ಮ ಚಿಕ್ಕಪ್ಪನ ಮನೆಯನ್ನು ತೊರೆದರು. ಅಹಮದಾಬಾದ್‌ನಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಾದ ಹೆಡ್ಗೆವಾರ್ ಭವನದಲ್ಲಿ ವಾಸಿಸುವ ಮೂಲಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಸದಸ್ಯ ಅಥವಾ ಪ್ರಚಾರಕ್ (ಪ್ರವರ್ತಕ) ಆದರು. ನಾಗಪುರದಲ್ಲಿ ಪ್ರಚಾರಕರಿಗಾಗಿರುವ ಅಧಿಕಾರಿಮಟ್ಟದ ತರಬೇತಿ ಕೋರ್ಸ್ ಮುಗಿಸಿದರು. ನಂತರ ಅವರು RSS ನಲ್ಲಿ ತಮ್ಮ ಬೆಳವಣಿಗೆಯನ್ನು ಗುರುತಿಸಿಕೊಂಡರು. ಇಂತಹ ಪ್ರಚಾರಕರನ್ನು ಆರ್‌ಎಸ್‌ಎಸ್‌ನ ಜೀವಾಳ ಎಂದು ಬಿಂಬಿಸಲಾಗುತ್ತದೆ. ಇಂತಹವರು ಸಂಘಟನೆಯ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಮೋದಿಯವರ ಸಂಘಟನಾ ಪ್ರತಿಭೆಯನ್ನು ಗೌರವಿಸುವ ಮ್ಯಾನೇಜ್‌ಮೆಂಟ್ ಶಾಲೆಯಂತೆ ಆರ್‌ಎಸ್‌ಎಸ್‌ನ ಪಾತ್ರವು ಅವರ ಸಂಘದಲ್ಲಿ ಮತ್ತು ಅವರನ್ನು ನಿಯೋಜಿಸಿದ ಬಿಜೆಪಿಯಲ್ಲಿ ಅವರ ಕ್ಷಿಪ್ರ ಪ್ರಗತಿಯ ದೃಷ್ಟಿಯಿಂದ ಮುಖ್ಯವಾಗಿದೆ.

ಜೂನ್ 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಇದು ಸರ್ಕಾರದ ವಿರೋಧಿಗಳು ಮತ್ತು ಟೀಕಾಕಾರರ ಸರ್ಕಾರಿ ವಿಚಾರಣೆ ಮತ್ತು ಜೈಲು ಶಿಕ್ಷೆಗೆ ಮೂಲವಾಯಿತು. ಈ ಅವಧಿಯಲ್ಲಿ ನಿಷೇಧಕ್ಕೊಳಗಾದ ಗುಂಪುಗಳಲ್ಲಿ ಆರ್‌ಎಸ್‌ಎಸ್ ಕೂಡ ಒಂದು. ಈ ಸಮಯದಲ್ಲಿ ಮೋದಿ ಅವರು ತಮ್ಮ ಔಪಚಾರಿಕ ಅಧ್ಯಯನವನ್ನು ಪರಿಪೂರ್ಣಗೊಳಿಸಲು ತಮ್ಮ ಮಾರ್ಗದರ್ಶಕರಾದ ಇನಾಮದಾರ್ ಅವರನ್ನು ಕೋರಿದರು. ಮತ್ತು ಅವರು ದೆಹಲಿ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದರು. ಕೆಲವು ವರದಿಗಳ ಪ್ರಕಾರ ಅವರು 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಓಪನ್ ಲರ್ನಿಂಗ್ ಶಾಲೆಯಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಈ ಅವಧಿಯಲ್ಲಿ ಅವರು ಆರ್‌ಎಸ್‌ಎಸ್‌ಗೆ ನಿರ್ಣಾಯಕ ಆಸ್ತಿಯಾದರು ಎಂಬುದು ಪ್ರಶ್ನಾತೀತ. ಅವರು RSS ನ ವಿದ್ಯಾರ್ಥಿ ವಿಭಾಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಅಥವಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾದರು. ಅವರ ಕ್ರಿಯಾಶೀಲತೆಯು ನಂತರ ಅವರಿಗೆ ABVP ಯ ಗುಜರಾತ್ ಅಧ್ಯಾಯದ ನಾಯಕನ ಸ್ಥಾನವನ್ನು ತಂದುಕೊಟ್ಟಿತು, ಅವರು ಗುಜರಾತ್ ವಿಶ್ವವಿದ್ಯಾಲಯದಲ್ಲಿ (1983 ರಲ್ಲಿ) ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡಿದರು. ಮೋದಿಯವರ ಈ ಎರಡೂ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಮುಂದೆ ಅವರ ರಾಜಕೀಯ ವಿರೋಧಿಗಳು ಚರ್ಚಾಸ್ಪದ ಎಂದು ಜರಿದರು.

ಲಕ್ಷ್ಮಣರಾವ್ ಇನಾಮದಾರ್ ಜೀವನ ಚರಿತ್ರೆ ಹೀಗಿದೆ:

ಸ್ವರ್ಗೀಯ ಲಕ್ಷ್ಮಣರಾವ್ ಇನಾಮದಾರ್ ಅವರು ಸೆಪ್ಟೆಂಬರ್ 21, 1917 ರಂದು ಋಷಿ ಪಂಚಮಿಯ ದಿನದಂದು ಜನಿಸಿದರು. ಅವರು ಏಳು ಸಹೋದರರನ್ನು ಹೊಂದಿದ್ದರು, ಅವರಲ್ಲಿ ಮೂರನೆಯವರೇ ಇನಾಮದಾರ್. ಅವರಿಗೆ ಇಬ್ಬರು ಸಹೋದರಿಯರು ಇದ್ದರು. ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯವರು. ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ದೇಶದ ತ್ವರಿತ, ಸುಸ್ಥಿರ ಮತ್ತು ಸಮಾನ ಬೆಳವಣಿಗೆಗಾಗಿ ಮೌಲ್ಯಾಧಾರಿತ ಮತ್ತು ನೈತಿಕ ಸಹಕಾರ ಚಳುವಳಿಯನ್ನು ಅವರು ಸಾಕ್ಷೀಕರಿಸಿದರು. 1978 ರಲ್ಲಿ ‘ಸಹಕಾರ ಭಾರತಿ’ಯ ರಚನೆಯಲ್ಲಿ ಅವರು ಪ್ರಮುಖ ಪ್ರೇರಕ ಶಕ್ತಿಯಾಗಿದ್ದರು.

ವಕೀಲ್ ಸಾಹೇಬ್ ಎಂದು ಜನಪ್ರಿಯರಾದ ಲಕ್ಷ್ಮಣರಾವ್ ಇನಾಮದಾರ್ ಅವರು ಗುಜರಾತ್‌ನಲ್ಲಿ ಆರ್‌ಎಸ್‌ಎಸ್‌ನ ಆರಂಭಿಕ ಪ್ರಚಾರಕರಲ್ಲಿ ಒಬ್ಬರು. ಆರ್‌ಎಸ್‌ಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲ ಸ್ವಯಂಸೇವಕರನ್ನಾಗಿ ಸೇರ್ಪಡೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನರೇಂದ್ರ ಮೋದಿಯವರ ವೃತ್ತಿಜೀವನವನ್ನು ರೂಪಿಸಿದ ಮತ್ತು ವಿಶೇಷ ಬಾಂಧವ್ಯವನ್ನು ಹಂಚಿಕೊಂಡ ಕೀರ್ತಿ ವಕೀಲ್ ಸಾಹೇಬ್ ಅವರಿಗೆ ಸಲ್ಲುತ್ತದೆ. 2013 ರಲ್ಲಿ ಮೋದಿಯವರ ಜೀವನ ಚರಿತ್ರೆಯ ಲೇಖಕ ನಿಲಂಜನ್ ಮುಖೋಪಾಧ್ಯಾಯ ಹೇಳುವಂತೆ ಜೀವಂತ ಅಥವಾ ಸತ್ತವರಲ್ಲಿ ಯಾರಿಗೇ ಆಗಲಿ ಮೋದಿ ಈ ರೀತಿಯ ಗೌರವ ಸಲ್ಲಿಸಿದ್ದನ್ನು ಕಂಡಿಲ್ಲ.

ಲಕ್ಷ್ಮಣರಾವ್ ಇನಾಮದಾರ್ ಅವರು ತಮ್ಮ 67 ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾದರು. ತಮ್ಮ ಜೀವನದ ಕೊನೆಯ 5 ವರ್ಷಗಳಲ್ಲಿ, ಅವರು ವಿವಿಧ ಭಾಗಗಳಲ್ಲಿ ಸಹಕಾರಿ ಚಳುವಳಿಯ ಪರಿಚಯಕ್ಕಾಗಿ ದೇಶಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿದರು ಮತ್ತು ಸಹಕಾರ ಭಾರತಿಯ ಬೀಜಗಳನ್ನು ಬಿತ್ತಿದರು, ಅದು ಈಗ ಎಲ್ಲಾ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ, 400 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಸಹಕಾರಿಗಳು ಮತ್ತು ಸಹಕಾರ ಸಂಸ್ಥೆಗಳ ಬೃಹತ್​ ಜಾಲದೊಂದಿಗೆ ಅಖಿಲ ಭಾರತ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ, 20,000 ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಸಹಕಾರ ಭಾರತಿ (Sahakar Bharati) ಯೊಂದಿಗೆ ಸಂಪರ್ಕ ಹೊಂದಿವೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 am, Sun, 17 September 23

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ