ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶದದಲ್ಲಿ AI ದುರ್ಬಳಕೆ; ಇಬ್ಬರು ನಾಯಕರ ಬೈಗುಳದ ಆಡಿಯೊ ವೈರಲ್

ಇಲ್ಲಿಯವರೆಗೆ ಆಡಿಯೊ ಕ್ಲೋನಿಂಗ್ ಅನ್ನು ವಂಚನೆಗಾಗಿ ಮಾತ್ರ ಬಳಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸೈಬರ್  ವಂಚಕರು ತಮ್ಮ ಸಂಬಂಧಿಕರನ್ನು ಅನುಕರಿಸುವ ಮೂಲಕ ಜನರಿಂದ ದುಡ್ಡು ಕೇಳುತ್ತಿದ್ದರು. ಸೈಬರ್ ಸೆಲ್‌ಗೆ ಇಂತಹ ಹಲವಾರು ದೂರುಗಳು ಬಂದಿವೆ. ಆದರೆ, ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಆಡಿಯೊ ಕ್ಲೋನಿಂಗ್ ಮಾಡುತ್ತಿರುವುದು ಇದೇ ಮೊದಲು.

ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶದದಲ್ಲಿ AI ದುರ್ಬಳಕೆ; ಇಬ್ಬರು ನಾಯಕರ ಬೈಗುಳದ ಆಡಿಯೊ ವೈರಲ್
ಪ್ರಾತಿನಿಧಿಕ ಚಿತ್ರImage Credit source: Wikimedia Commons
Follow us
ರಶ್ಮಿ ಕಲ್ಲಕಟ್ಟ
|

Updated on: Sep 16, 2023 | 8:41 PM

ಭೋಪಾಲ್ ಸೆಪ್ಟೆಂಬರ್ 16: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ (Madhya Pradesh Assembly Elections)ಪ್ರಚಾರದ ನಡುವೆಯೇ ಕೃತಕ ಬುದ್ಧಿಮತ್ತೆಯ (Artificial Intelligence) ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಜಬಲ್‌ಪುರದಲ್ಲಿ ಇತ್ತೀಚಿನ ಪ್ರಕರಣ ಬೆಳಕಿಗೆ ಬಂದಿದ್ದು, ಶಾಸಕ ಮತ್ತು ಮಾಜಿ ರಾಜ್ಯ ಸಚಿವರ ಬೈಗುಳ ಆಡಿಯೊವನ್ನು AI ಬಳಸಿ ಕ್ಲೋನ್ ಮಾಡಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂದು ನ್ಯೂಸ್ 9 ವರದಿ ಮಾಡಿದೆ.

ಆಡಿಯೊದಲ್ಲಿ, ಇಬ್ಬರು ನಾಯಕರು ಫೋನ್‌ನಲ್ಲಿ ಕಾರ್ಯಕರ್ತನೊಂದಿಗೆ ಮಾತನಾಡುವಾಗ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಆಡಿಯೋ ವೈರಲ್ ಆದ ನಂತರ ವಿಷಯ ಪೊಲೀಸರಿಗೆ ತಲುಪಿತ್ತು. ಈ ಆಡಿಯೊ ಬಗ್ಗೆ ತನಿಖೆಗೆ ನಡೆಸಬೇಕು ಎಂದು ಇಬ್ಬರು ನಾಯಕರು ಒತ್ತಾಯಿಸಿದ್ದಾರೆ. ಆದಾಗ್ಯೂ, ವೈರಲ್ ಆಗುತ್ತಿರುವ ಆಡಿಯೊದಲ್ಲಿ ಮಾತನಾಡುತ್ತಿರುವ ಮಾತುಗಳು ಮತ್ತು ಸಾಲುಗಳು ಬಹುತೇಕ ಒಂದೇ ಆಗಿದ್ದು, ಧ್ವನಿಯಲ್ಲಿ ವ್ಯತ್ಯಾಸವಿದೆ.

ಕಾಂಗ್ರೆಸ್ ಶಾಸಕ ವಿನಯ್ ಸಕ್ಸೇನಾ ಮತ್ತು ಉತ್ತರ ಮಧ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಶರದ್ ಜೈನ್ ಅವರ ದನಿಯಲ್ಲಿರುವ ಆಡಿಯೊ ವೈರಲ್ ಆಗಿದೆ ಎರಡೂ ಆಡಿಯೊ ಕ್ಲಿಪ್‌ಗಳನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪಕ್ಷದ ನಾಯಕರು ಮತ್ತು ಸಚಿವರು ಪಕ್ಷದ ಕಾರ್ಯಕರ್ತರೊಂದಿಗೆ ಹೇಗೆ ಮತ್ತು ಯಾವ ಸ್ವರದಲ್ಲಿ ಮಾತನಾಡುತ್ತಾರೆ ಎಂಬುದನ್ನು ಕೇಳಿ ಎಂಬ ಬರಹದೊಂದಿದೆ ಈ ಆಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದು ನಮ್ಮ ದನಿಯಲ್ಲ ಎಂದ ನಾಯಕರು

ವೈರಲ್ ಆದ ಆಡಿಯೊ ಕ್ಲಿಪ್‌ನಲ್ಲಿರುವುದು ನನ್ನ ಧ್ವನಿಯಲ್ಲ ಎಂದು ಕಾಂಗ್ರೆಸ್ ಶಾಸಕ ವಿನಯ್ ಸಕ್ಸೇನಾ ಹೇಳಿದ್ದಾರೆ. ಇದು ಮಾನಹಾನಿ ಮಾಡುವ ಪ್ರಯತ್ನ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸಕ್ಸೇನಾ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ರಾಜ್ಯ ಸಚಿವ ಶರದ್ ಜೈನ್ ಕೂಡ ಆಡಿಯೊದಲ್ಲಿರುವ ದನಿ ನನ್ನದಲ್ಲ. ಇದು ರಾಜಕೀಯ ಪೈಪೋಟಿ ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎಗೆ ಗೆಲುವು: ಅಮಿತ್ ಶಾ

ಮೊದಲ ಬಾರಿ ರಾಜಕಾರಣಿಗಳು ಟಾರ್ಗೆಟ್

ಇಲ್ಲಿಯವರೆಗೆ ಆಡಿಯೊ ಕ್ಲೋನಿಂಗ್ ಅನ್ನು ವಂಚನೆಗಾಗಿ ಮಾತ್ರ ಬಳಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸೈಬರ್  ವಂಚಕರು ತಮ್ಮ ಸಂಬಂಧಿಕರನ್ನು ಅನುಕರಿಸುವ ಮೂಲಕ ಜನರಿಂದ ದುಡ್ಡು ಕೇಳುತ್ತಿದ್ದರು. ಸೈಬರ್ ಸೆಲ್‌ಗೆ ಇಂತಹ ಹಲವಾರು ದೂರುಗಳು ಬಂದಿವೆ. ಆದರೆ, ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಆಡಿಯೊ ಕ್ಲೋನಿಂಗ್ ಮಾಡುತ್ತಿರುವುದು ಇದೇ ಮೊದಲು. ವೈರಲ್ ಆದ ಆಡಿಯೋ ಬಗ್ಗೆ ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಜ್ಞರ ಅಭಿಪ್ರಾಯವೇನು?

ಯಾವುದೇ ಆಡಿಯೊ ಅಥವಾ ವಿಡಿಯೋವನ್ನು ಸುಲಭವಾಗಿ ಕ್ಲೋನ್ ಮಾಡಬಹುದು ಎಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಜ್ಞರು ಹೇಳಿದ್ದಾರೆ. ಇದಕ್ಕಾಗಿ ಆಡಿಯೊ ಮಾದರಿಯನ್ನು ಬಳಸಿಕೊಂಡು ಯಾವುದೇ ವ್ಯಕ್ತಿಯ ಧ್ವನಿಯನ್ನು ಕ್ರಿಯೇಟ್ ಮಾಡಬಹುದು. ಕೆಲವು ಸಾಫ್ಟ್‌ವೇರ್ ಮತ್ತು ಟೂಲ್‌ಗಳ ಮೂಲಕ ಇದನ್ನು ಸುಲಭವಾಗಿ ಮಾಡಬಹುದ. ಸೈಬರ್ ಸೆಲ್ ಕೂಡ ಅಂತಹ ತಂತ್ರಜ್ಞಾನವನ್ನು ಹೊಂದಿದ್ದು, ಅದರ ಮೂಲಕ ಅಂತಹ ಆಡಿಯೊ ಮತ್ತು ವಿಡಿಯೊಗಳನ್ನು ಪರಿಶೀಲಿಸುವ ಮೂಲಕ ಸತ್ಯವನ್ನು ಕಂಡುಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ.

ಅಂತಹ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇರುವ ಒಂದೇ ಒಂದು ಮಾರ್ಗವೆಂದರೆ ತಕ್ಷಣವೇ ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸುವುದು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ