Ghost Train: ನಿಂತಿದ್ದ ರೈಲು ಲೋಕೊ ಪೈಲಟ್ ಇಲ್ಲದೆ ಏಕಾಏಕಿ ಹೊರಟೇ ಬಿಡ್ತು, ವೇಗ ನೋಡಿ ಬೆಚ್ಚಿಬಿದ್ದ ಜನ

ಜಮ್ಮು ಮತ್ತು ಕಾಶ್ಮೀರದ ಕಥುವಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲು ಏಕಾಏಕಿ ಚಲಿಸಿದ ಘಟನೆ ನಡೆದಿದೆ. ಲೋಕೊ ಪೈಲಟ್ ಇಲ್ಲದೆಯೇ ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲು ಸಂಚರಿಸಿತ್ತು ಆದರೆ ಇಳಿಜಾರು ಇದ್ದುದೇ ಕಾರಣ ಎಂದು ಹೇಳಲಾಗಿದೆ.

Ghost Train: ನಿಂತಿದ್ದ ರೈಲು ಲೋಕೊ ಪೈಲಟ್ ಇಲ್ಲದೆ ಏಕಾಏಕಿ ಹೊರಟೇ ಬಿಡ್ತು, ವೇಗ ನೋಡಿ ಬೆಚ್ಚಿಬಿದ್ದ ಜನ
ರೈಲು

Updated on: Feb 25, 2024 | 12:36 PM

ಜಮ್ಮು ಮತ್ತು ಕಾಶ್ಮೀರ(Jammu And Kashmir)ರದ ಕಥುವಾ ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ಲೋಕೊ ಪೈಲಟ್(Loco Pilot)​ ಇಲ್ಲದೆ ಹೊರಟೇಬಿಟ್ಟಿತ್ತು. ರೈಲ್ವೆ ನಿಲ್ದಾಣದಲ್ಲಿದ್ದ ಜನರು ಈ ರೈಲನ್ನು ನೋಡಿ ಒಮ್ಮೆ ಬೆಚ್ಚಿಬಿದ್ದಿದ್ದಾರೆ ಏಕೆಂದರೆ ಅದರ ವೇಗ ಗಂಟೆಗೆ 100 ಕಿ.ಮೀನಷ್ಟಿತ್ತು. ವೇಗ ನೋಡಿ ಈ ರೈಲಿನಲ್ಲಿ ದೆವ್ವವೇನಾದರೂ ಇದೆಯೇ ಎಂದು ಒಮ್ಮೆ ಜನರು ಭಯಗೊಂಡರು.  ಅದೃಷ್ಟಕ್ಕೆ ಅದು ಸರಕು ಸಾಗಣೆ ರೈಲಾಗಿದ್ದ ಹಿನ್ನೆಲೆಯಲ್ಲಿ ಅಷ್ಟೊಂದು ಜನರು ರೈಲಿನಲ್ಲಿರಲಿಲ್ಲ, ರೈಲ್ವೆ ಅಧಿಕಾರಿಗಳ ಪ್ರಯತ್ನದಿಂದಾಗಿ ಪಂಜಾಬ್​ನ ಮುಕೇರಿಯನ್ ರೈಲು ನಿಲ್ದಾಣ(Railway Station)ದಲ್ಲಿ ರೈಲನ್ನು ನಿಲ್ಲಿಸಲಾಯಿತು.

ಲೋಕೊ ಪೈಲಟ್​ ಇಲ್ಲದೆ ಓಡುತ್ತಿರುವ ರೈಲಿನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ರೈಲಿನ ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರೈಲ್ವೆ ಇನ್ನೂ ಬಿಡುಗಡೆ ಮಾಡಿಲ್ಲ. ಕಥುವಾ ನಿಲ್ದಾಣದಲ್ಲಿ ನಿಲುಗಡೆಯಲ್ಲಿದ್ದ ಸರಕು ರೈಲು ಹಠಾತ್ತನೆ ಪಠಾಣ್‌ಕೋಟ್ ಕಡೆಗೆ ಇಳಿಜಾರಾದ ಕಾರಣ ಚಾಲಕ ಇಲ್ಲದೆ ಓಡಲು ಪ್ರಾರಂಭಿಸಿತು. ಮುಕೇರಿಯನ್ ಪಂಜಾಬ್‌ನ ಉಚ್ಚಿ ಬಸ್ಸಿ ಬಳಿ ರೈಲನ್ನು ನಿಲ್ಲಿಸಲಾಗಿದೆ. ಈ ವಿಷಯದ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ ವಿಡಿಯೋ

ಭಾನುವಾರ ಬೆಳಗ್ಗೆ 7.10ರ ಸುಮಾರಿಗೆ ಈ ಘಟನೆ ನಡೆದಿದೆ. ಲೋಕೊ ಪೈಲಟ್​ ಜಮ್ಮುವಿನ ಕಥುವಾದಲ್ಲಿ ಗೂಡ್ಸ್​ ರೈಲು ಸಂಖ್ಯೆ 14806 ಆರ್ ಅನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹ್ಯಾಂಡ್‌ಬ್ರೇಕ್‌ ಹಾಕದೆ ರೈಲಿನಿಂದ ಇಳಿದು ಟೀ ಕುಡಿಯಲು ತೆರಳಿದ್ದರು. ಏತನ್ಮಧ್ಯೆ, ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ವೇಗವನ್ನು ಪಡೆದ ನಂತರ ಓಡಲು ಪ್ರಾರಂಭಿಸಿತು. ಆದರೆ, ರೈಲು ಜಾಲದಲ್ಲಿ ಇಳಿಜಾರಿನ ಕಾರಣ ರೈಲು ಚಲಿಸಲು ಪ್ರಾರಂಭಿಸಿತ್ತು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ರೈಲಿನಲ್ಲಿ ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸದಂತೆ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಮನವಿ

ಲೊಕೊ ಪೈಲಟ್ ಅಥವಾ ಇತರ ಯಾವುದೇ ರೈಲ್ವೇ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಘಟನೆಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಈ ವಿಷಯದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:33 pm, Sun, 25 February 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us