Top News: ಶೀಘ್ರದಲ್ಲೇ ಸರ್ಕಾರಿ ನೌಕರರಿಗಾಗಿ ಲೋಕಲ್ ಟ್ರೇನ್ ಸಂಚಾರ ಆರಂಭ! ಎಲ್ಲಿ?

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಸಹ ಕೆಲ ಅಗತ್ಯ ಸೇವೆ ನೀಡುವವರು ಕರ್ತವ್ಯಕ್ಕೆ ಹಾಜರಾಗಲೇಬೇಕಿದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಂದದ ಬಳಿಕ ಸದ್ಯದಲ್ಲೇ ಸರ್ಕಾರಿ ನೌಕರರಿಗಾಗಿ ಮುಂಬೈನಲ್ಲಿ ಲೋಕಲ್ ಟ್ರೇನ್ ಸಂಚಾರ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಿಬ್ಬಂದಿ, ಸಾರಿಗೆ , ಸ್ಥಳೀಯ ಪಂಚಾಯಿತಿ ಹಾಗೂ ಪೊಲೀಸ್ ಸಿಬ್ಬಂದಿ ಲೋಕಲ್ ಟ್ರೇನ್​ನಲ್ಲಿ ಓಡಾಡಬಹುದಾಗಿದೆ. ದೇಶವೇ ಕೊರೊನಾ ಕೋಶ ಭಾರತ ದಿನೇ ದಿನೆ ಕೊರೊನಾ ಹಾಟ್​ಸ್ಪಾಟ್ ಆಗ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ […]

Top News: ಶೀಘ್ರದಲ್ಲೇ ಸರ್ಕಾರಿ ನೌಕರರಿಗಾಗಿ ಲೋಕಲ್ ಟ್ರೇನ್ ಸಂಚಾರ ಆರಂಭ! ಎಲ್ಲಿ?
Updated By:

Updated on: Jun 29, 2020 | 5:09 PM

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಸಹ ಕೆಲ ಅಗತ್ಯ ಸೇವೆ ನೀಡುವವರು ಕರ್ತವ್ಯಕ್ಕೆ ಹಾಜರಾಗಲೇಬೇಕಿದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಂದದ ಬಳಿಕ ಸದ್ಯದಲ್ಲೇ ಸರ್ಕಾರಿ ನೌಕರರಿಗಾಗಿ ಮುಂಬೈನಲ್ಲಿ ಲೋಕಲ್ ಟ್ರೇನ್ ಸಂಚಾರ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಿಬ್ಬಂದಿ, ಸಾರಿಗೆ , ಸ್ಥಳೀಯ ಪಂಚಾಯಿತಿ ಹಾಗೂ ಪೊಲೀಸ್ ಸಿಬ್ಬಂದಿ ಲೋಕಲ್ ಟ್ರೇನ್​ನಲ್ಲಿ ಓಡಾಡಬಹುದಾಗಿದೆ.

ದೇಶವೇ ಕೊರೊನಾ ಕೋಶ
ಭಾರತ ದಿನೇ ದಿನೆ ಕೊರೊನಾ ಹಾಟ್​ಸ್ಪಾಟ್ ಆಗ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ 49 ಸಾವಿರದ 197ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದಾಗಿ 16,487 ಜನರು ಬಲಿಯಾಗಿದ್ದಾರೆ. ಕ್ರೂರಿ ವೈರಸ್​ನಿಂದ 3,21,774 ಜನರು ಗುಣಮುಖರಾಗಿದ್ರೆ, ಪ್ರಸ್ತುತ 2 ಲಕ್ಷದ 10 ಸಾವಿರದ 936 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8,944 ಜನರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ತೆಲಂಗಾಣದಲ್ಲಿ ಕೊರೊನಾ ಕೇಕೆ!
ತೆಲುಗು ರಾಜ್ಯಗಳಲ್ಲಿ ಕೊರೊನಾ ಎಲ್ಲೆ ಮೀರಿ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ತೆಲಂಗಾಣದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲೇ ಸೋಂಕಿತರ ಸಂಖ್ಯೆ 983ಕ್ಕೆ ಏರಿಕೆಯಾಗಿದ್ರೆ, ಹೈದರಾಬಾದ್​ನಲ್ಲಿ ಸೋಂಕಿತರ ಸಂಖ್ಯೆ 11 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಹೈದರಾಬಾದ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 816 ಕೊರೊನಾ ಸೋಂಕಿತರಿದ್ದು, ಮೃತರ ಸಂಖ್ಯೆ 248ಕ್ಕೇರಿದೆ. ರಾಜ್ಯದಲ್ಲಿ 14,419ಸೋಂಕಿತರು ಪತ್ತೆಯಾಗಿದ್ದಾರೆ.

BSF ಸಿಬ್ಬಂದಿಗೆ ಕೊರೊನಾಘಾತ
ಕ್ರೂರಿ ಕೊರೊನಾ ವೈರಸ್ ತಡೆಗೆ ಪ್ರಾಣದ ಹಂಗು ತೊರೆದು ಕೊರೊನಾ ವಾರಿಯರ್ಸ್ ಅಖಾಡದಲ್ಲಿದ್ದಾರೆ. ಆದ್ರೆ, ಇವರಿಗೂ ವೈರಸ್ ಅಟ್ಯಾಕ್ ಮಾಡ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲೇ 21ಕ್ಕು ಹೆಚ್ಚು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ವಾರಿಯರ್ಸ್​ಗೇ ಸೋಂಕು ಹಬ್ಬುತ್ತಿರೋದು ಇವರ ಸಂಪರ್ಕದಲ್ಲಿದ್ದವರಲ್ಲೂ ಟೆನ್ಷನ್ ಶುರು ಮಾಡಿದೆ. ಪ್ರಸ್ತುತ 305 ಗಡಿ ಭದ್ರತಾ ಸಿಬ್ಬಂದಿ ಸೋಂಕಿನಿಂದ ನರಳಾಡುತ್ತಿದ್ದಾರೆ.

‘ಮಹಾ’ ಸಾವಿನ ಸುಳಿ
ಮಹಾರಾಷ್ಟ್ರ ಭಾರತದ ಕೊರೊನಾ ಹಾಟ್​ಸ್ಪಾಟ್ ಆಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1ಲಕ್ಷದ 64 ಸಾವಿರಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿನಿಂದಾಗಿ 7,273 ಜನರು ಬಲಿಯಾಗಿದ್ರೆ, 84 ಸಾವಿರ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಮುಂಬೈ ಮಹಾನಗರದಲ್ಲೇ ಸೋಂಕಿತರು ಏರಿಕೆಯಾಗ್ತಿರೋದು ಮಹಾರಾಷ್ಟ್ರ ಜನತೆಯನ್ನ ಕಂಗೆಡುವಂತೆ ಮಾಡಿದೆ.

ಇಂಧನ ಮತ್ತಷ್ಟು ಹೊರೆ
ಕಳೆದ 23 ದಿನಗಳಿಂದ ಭಾರತದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದು ದಿನ ಇಂಧನ ಬೆಲೆ ಏರಿಕೆಯಾಗಿರಲಿಲ್ಲ ಅಂತಾ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ರು. ಆದ್ರೀವತ್ತು ಮತ್ತೆ ಪೆಟ್ರೋಲ್ ಪ್ರತಿ ಲೀಟರ್​ಗೆ 5 ಪೈಸೆ ಹೆಚ್ಚಳವಾದ್ರೆ, ಡೀಸೆಲ್ ಪ್ರತಿ ಲೀಟರ್​ಗೆ 13 ಪೈಸೆಯಷ್ಟು ಏರಿಕೆಯಾದಂತಾಗಿದೆ. ಕೊರೊನಾ ಲಾಕ್​ಡೌನ್​ನಿಂದ ಕಂಗೆಟ್ಟು ಈಗಷ್ಟೇ ಕೆಲಸಕ್ಕೆ ತೆರಳುತ್ತಿದ್ದವರಿಗೆ ತೈಲ ಬೆಲೆ ದುಬಾರಿ ಯಾಗ್ತಿರೋದು ಕಂಗೆಡುವಂತೆ ಮಾಡಿದೆ.

68 ಕೈದಿಗಳಿಗೆ ಪಾಸಿಟಿವ್!
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ನಗರಗಳನ್ನ ಬಿಟ್ಟು, ಜೈಲಿಗಳಿಗೂ ಸೇರಿದೆ. ಅಕೋಲಾ ಜೈಲಿನಲ್ಲಿದ್ದ ಸುಮಾರು 68 ಕೈದಿಗಳಿಗೆ ಸೋಂಕು ತಗುಲಿದೆ. ಜೈಲಿನ ಒಳಭಾಗದಲ್ಲೇ ಐಸೋಲೇಷನ್ ವಾರ್ಡ್​ ಗಳನ್ನ ನಿರ್ಮಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ತಿರೋದಾಗಿ ಅಲೋಕಾ ಡೆಪ್ಯೂಟಿ ಕಲೆಕ್ಟರ್ ಸಂಜಯ್ ಖಾಡ್ಸೆ ಹೇಳಿದ್ದಾರೆ.

ಕೈದಿಗಳಿಗೂ ಕೊರೊನಾಘಾತ!
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80 ಸಾವಿರದ ಗಡಿ ದಾಟಿದ್ದು, ಎರಡೂವರೆ ಸಾವಿರ ಜನರನ್ನ ಬಲಿ ಪಡೆದುಕೊಂಡಿದೆ. ಆತಂಕದ ವಿಚಾರ ಅಂದ್ರೆ, ದೆಹಲಿಯ ಮಂಡೋಲಿ ಜೈಲಿಗೂ ಕೊರೊನಾ ಹೊಕ್ಕಿದ್ದು, ಕೈದಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದ. ಸದ್ಯ ಜೈಲಿನಲ್ಲಿರುವ ಐವರು ಕೈದಿಗಳಿಗೆ ಸೋಂಕು ದೃಢವಾಗಿದೆ. ಹೀಗಾಗಿ, ಕೈದಿಗಳ ಜೊತೆ ಸಂಪರ್ಕದಲ್ಲಿದ್ದ ಇತರೆ ಕೈದಿಗಳು ಮತ್ತು ಜೈಲು ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.

ಜುಲೈ 1ರಿಂದ ಚಾರ್‌ ಧಾಮ್ ಯಾತ್ರೆ
ಕೊರೊನಾ ಸೋಂಕಿನ ಭೀತಿಯಿಂದ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ, ಜುಲೈ 1 ರಿಂದ ಆರಂಭಗೊಳ್ತಿದೆ. ಆರಂಭದಲ್ಲಿ ಕೇವಲ ಉತ್ತರಾಖಂಡ್‌ ರಾಜ್ಯದವರಿಗಷ್ಟೇ ಅವಕಾಶ ನೀಡಲಾಗ್ತಿದ್ದು, ಹೊರ ರಾಜ್ಯದವರಿಗೆ ಸದ್ಯಕ್ಕೆ ಯಾತ್ರೆಗೆ ಅವಕಾಶವಿರಲ್ಲ. ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ಈ 4 ಕ್ಷೇತ್ರಗಳ ದರ್ಶನವನ್ನೇ ಚಾರ್‌ ಧಾಮ್ ಯಾತ್ರೆ ಅಂತಾ ಕರೆಯಲಾಗುತ್ತೆ.

Published On - 5:09 pm, Mon, 29 June 20