ಮೊದಲೇ ಕೊರೊನಾ ಸಂಕಷ್ಟ, ಅದರ ಮಧ್ಯೆ ಅಡುಗೆ ಅನಿಲಕ್ಕೂ ಕಂಟಕ ಎದುರಾಯ್ತಾ?

  • Publish Date - 2:52 pm, Mon, 29 June 20 Edited By: sadhu srinath
ಮೊದಲೇ ಕೊರೊನಾ ಸಂಕಷ್ಟ, ಅದರ ಮಧ್ಯೆ ಅಡುಗೆ ಅನಿಲಕ್ಕೂ ಕಂಟಕ ಎದುರಾಯ್ತಾ?

ದೆಹಲಿ: ಕೊರೊನಾ ದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಇದರ ನಡುವೆ ಈಗ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಅಡುಗೆ ಮಾಡಲು ಅನಿಲವಿಲ್ಲದ ಹೆಣ್ಣುಮಕ್ಕಳು ಪರದಾಡುವಂತಹ ಪರಿಸ್ಥಿತಿಯನ್ನು ಎದುರಾಗಿದೆ.

ಕೊರೊನಾದಿಂದಾಗಿ ಒಂದು ಹೊತ್ತಿನ ಊಟ ಸಹ ಸಿಗುವುದು ಕಷ್ಟವಾಗಿದೆ. ಜೊತೆಗೆ ಅಡುಗೆ ಅನಿಲ ಸರಬರಾಜು ಕೊರತೆಯಿಂದ ಮನೆಯಲ್ಲಿರುವ ಅಲ್ಪ ಸ್ವಲ್ಪ ಬೇಳೆಯನ್ನು ಬೇಯಿಸಲಾಗುತ್ತಿಲ್ಲ. ಹಾಗೂ ಎಲ್​ಪಿಜಿ ಗ್ಯಾಸ್ ಬೆಲೆ ಸಹ ಏರಿಕೆಯಾಗಿದೆ. ಮುಂದೊಮ್ಮೆ ಅಡುಗೆ ಅನಿಲಕ್ಕೂ ಕಂಟಕ ಎದುರಾಗುವ ಭೀತಿ ಉಂಟಾಗಿದೆ.

ಅಲ್ಲದೆ ದೇಶದಲ್ಲಿ ಇಂಧನ ಬೆಲೆ ಸಹ ಏರಿಕೆಯಾಗುತ್ತಿದೆ. ಆದರೆ ಜಮ್ಮು ಕಾಶ್ಮಿರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ನಿರ್ದೇಶಕ ಇದನ್ನು ತಳ್ಳಿ ಹಾಕಿದ್ದಾರೆ. ನಮ್ಮಲ್ಲಿ ಸಾಕಷ್ಟು ಎಲ್‌ಪಿಜಿ ಸಿಲಿಂಡರ್‌ಗಳಿವೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.