ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan Mantri Ujjwala Yojana) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ (Central Government) ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡ್ (LPG Gas Cylinder) ಮೇಲೆ ನೀಡುವ 200 ರೂ. ಸಬ್ಸಿಡಿಯನ್ನು 2023-24ನೇ ಸಾಲಿಗೂ ವಿಸ್ತರಿಸಿದೆ. ಉಜ್ವಲ ಯೋಜನೆ ಅಡಿ 9.59 ಫಲಾನುಭವಿಗಳು ವರ್ಷಕ್ಕೆ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ನಲ್ಲಿ 200 ರೂ. ಸಬ್ಸಿಡಿ ಪಡೆಯುತ್ತಾರೆ. ಇನ್ನು ಫಲಾನುಭವಿಗಳಿಗೆ ಸರ್ಕಾರ ವರ್ಷಕ್ಕೆ 12 ಸಿಲಿಂಡರ್ಗಳನ್ನು ತುಂಬಲು ಅನುಮತಿ ನೀಡಿದೆ. ಅಂದರೆ ಒಂದು ವರ್ಷದಲ್ಲಿ 12 ಅಡುಗೆ ಅನಿಲ ಸಿಲಿಂಡರ್ಗಳ ಮೇಲೆ ಪ್ರತಿ ಸಿಲಿಂಡರ್ಗೆ 200 ರೂ. ಸಬ್ಸಿಡಿ ನೀಡಿದಂತಾಗುತ್ತದೆ.
ಕೇಂದ್ರ ಸರ್ಕಾರ ಈ ಯೋಜನೆಗೆ 2022-23ನೇ ಸಾಲಿನಲ್ಲಿ 6,100 ಕೋಟಿ ರೂ. ವ್ಯಯಿಸಿತ್ತು. 2023-24ನೇ ಸಾಲಿನಲ್ಲಿ ಸುಮಾರು 1 ಸಾವಿರ ಕೋಟಿಗಳಷ್ಟು ಹೆಚ್ಚಾಗಲಿದ್ದು, 7,680 ಕೋಟಿ ಈ ಯೋಜನೆಗೆ ಮೀಸಲಿರಿಸಿದೆ. ಇದರಿಂದ ಸರ್ಕಾರಕ್ಕೆ ಸಾವಿರ ಕೋಟಿಗಳಷ್ಟು ಹೊರೆ ಬೀಳಲಿದೆ. ಸಬ್ಸಿಡಿ ನೇರವಾಗಿ ಹಣ ಫಲಾನುಭವಿಗಳ ಖಾತೆಗಳಿಗೆ ಕ್ರೆಡಿಟ್ ಆಗುತ್ತದೆ.
Cabinet approves targeted subsidy to Pradhan Mantri Ujjwala Yojana Consumers
A subsidy of Rs.200 per 14.2 kg cylinder for up to 12 refills per year to be provided to the beneficiaries
Read more: https://t.co/O5Gn3hpt5K #CabinetDecisions pic.twitter.com/CqpycsRpVp
— PIB India (@PIB_India) March 24, 2023
ಎಲ್ಲಾ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 22 ಮೇ 2022 ರಿಂದ ಈ ಸಬ್ಸಿಡಿಯನ್ನು ನೀಡುತ್ತಿವೆ. ಹಲವು ಕಾರಣಗಳಿಂದ ಎಲ್‌ಪಿಜಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳನ್ನು ಇದರಿಂದ ರಕ್ಷಿಸುವ ಅಗತ್ಯವಿದೆ. ಈ ಕಾರಣಕ್ಕಾಗಿ ಸಹಾಯಧನ ಮಂಜೂರಾಗಿದ್ದು, ಇದರಿಂದ ಬಡ ಕುಟುಂಬಗಳಿಗೆ ದೊಡ್ಡ ಪರಿಹಾರ ಸಿಗಲಿದೆ.
ವಿವಿಧ ದೇಶಗಳಲ್ಲಿ ರಾಜಕೀಯ ಕಾರಣದಿಂದ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಇದರಿಂದ ಇತ್ತೀಚಿಗೆ ಭಾರತದಲ್ಲೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು. ಆದರೆ PMUY ಯೋಜನೆಯಿಂದ ಫಲಾನುಭವಿಗಳಿಗೆ 200ರೂ. ಮರಳಿ ಬರುವುದರಿಂದ ಬೆಲೆ ಏರಿಕೆ ಹೊರೆ ಎನಿಸಲಾರದು.
ಎಲ್ಲಾ PMUY ಫಲಾನುಭವಿಗಳು ಈ ಉದ್ದೇಶಿತ ಸಬ್ಸಿಡಿಗೆ ಅರ್ಹರಾಗಿದ್ದಾರೆ. ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG), ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಮತ್ತು ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ-ಮುಕ್ತ LPG ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ