ಕೊವಾಕ್ಸಿನ್ ಲಸಿಕೆ ಪಡೆದವರು ಒಮಾನ್​​ಗೆ ಪ್ರಯಾಣಿಸಬಹುದು, ಕ್ವಾರಂಟೈನ್​​ನಲ್ಲಿರುವ ಅಗತ್ಯವಿಲ್ಲ

| Updated By: ರಶ್ಮಿ ಕಲ್ಲಕಟ್ಟ

Updated on: Oct 29, 2021 | 10:30 AM

Covaxin ಭಾರತೀಯ ರಾಯಭಾರ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, "ಅಂದಾಜು ಆಗಮನದ ದಿನಾಂಕಕ್ಕಿಂತ ಕನಿಷ್ಠ 14 ದಿನಗಳ ಮೊದಲು ಎರಡು ಡೋಸ್ ಕೋವಾಕ್ಸಿನ್ ಅನ್ನು ಸ್ವೀಕರಿಸಿದ ಭಾರತದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್ ಅಗತ್ಯವಿಲ್ಲದೇ ಒಮಾನ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಕೊವಾಕ್ಸಿನ್ ಲಸಿಕೆ ಪಡೆದವರು ಒಮಾನ್​​ಗೆ ಪ್ರಯಾಣಿಸಬಹುದು, ಕ್ವಾರಂಟೈನ್​​ನಲ್ಲಿರುವ ಅಗತ್ಯವಿಲ್ಲ
ಕೋವಾಕ್ಸಿನ್ ಲಸಿಕೆ
Follow us on

ದೆಹಲಿ: ಒಮಾನ್ ಸರ್ಕಾರವು ಬುಧವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್  ಲಸಿಕೆ ಪಡೆದ ಪ್ರಯಾಣಿಕರು ದೇಶಕ್ಕೆ ಪ್ರಯಾಣಿಸಲು ಅನುಮತಿಸಿದೆ. ಅಂದಾಜು ಆಗಮನದ ದಿನಾಂಕಕ್ಕಿಂತ ಕನಿಷ್ಠ 14 ದಿನಗಳ ಮೊದಲು ಕೊವಾಕ್ಸಿನ್‌ನ ಎರಡು ಡೋಸ್‌ಗಳನ್ನು ಪಡೆದ ಭಾರತದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್‌ನ ಅಗತ್ಯವಿಲ್ಲದೆ ಒಮಾನ್‌ಗೆ ಪ್ರಯಾಣಿಸಬಹುದಾಗಿದೆ. ಆದಾಗ್ಯೂ, ಆಗಮನದ ಮುನ್ನ RT-PCR ಪರೀಕ್ಷೆಯಂತಹ ಎಲ್ಲಾ ಇತರ ಕೊವಿಡ್ ಸಂಬಂಧಿತ ಅವಶ್ಯಕತೆಗಳು/ಷರತ್ತುಗಳು ಅಂತಹ ಪ್ರಯಾಣಿಕರಿಗೆ ಅನ್ವಯಿಸುತ್ತವೆ. ಕೊವಾಕ್ಸಿನ್ ತೆಗೆದುಕೊಂಡ ಭಾರತೀಯರಿಗೆ ಈ ಅನುಮೋದನೆಯು ಒಮಾನ್‌ಗೆ ಪ್ರಯಾಣವನ್ನು ಸರಾಗಗೊಳಿಸುತ್ತದೆ. ಆಸ್ಟ್ರೆಜೆನೆಕಾ /ಕೋವಿಶೀಲ್ಡ್ (AstraZeneca/Covishield) ತೆಗೆದುಕೊಂಡ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲದೆ ಒಮಾನ್‌ಗೆ ಪ್ರಯಾಣಿಸಲು ಈಗಾಗಲೇ ಅನುಮತಿ ನೀಡಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, “ಅಂದಾಜು ಆಗಮನದ ದಿನಾಂಕಕ್ಕಿಂತ ಕನಿಷ್ಠ 14 ದಿನಗಳ ಮೊದಲು ಎರಡು ಡೋಸ್ ಕೋವಾಕ್ಸಿನ್ ಅನ್ನು ಸ್ವೀಕರಿಸಿದ ಭಾರತದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್ ಅಗತ್ಯವಿಲ್ಲದೇ ಒಮಾನ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಆಗಮನಕ್ಕೆ ಮುನ್ನ RT-PCR ಪರೀಕ್ಷೆಯಂತಹ ಅವಶ್ಯಕತೆಗಳು/ಷರತ್ತುಗಳು ಅಂತಹ ಪ್ರಯಾಣಿಕರಿಗೆ ಅನ್ವಯಿಸುತ್ತವೆ.”


ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಭಾರತದ ಮೊದಲ ಸ್ಥಳೀಯ ಕೊರೊನಾವೈರಸ್ ಲಸಿಕೆಯಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಧಿಕೃತವಾಗಿ ಅನುಮೋದಿಸಲು ಲಸಿಕೆ ಇನ್ನೂ ಕಾಯುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಕೋವಾಕ್ಸಿನ್‌ಗಾಗಿ ತುರ್ತು ಬಳಕೆಯ ಪಟ್ಟಿಯನ್ನು (EUL) ಪರಿಗಣಿಸಲು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್ 26 ರಂದು ಸಭೆಯನ್ನು ಆಯೋಜಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ