ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ

ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ
ರೋಮ್​​ಗೆ ಹೊರಟ ಪ್ರಧಾನಿ ಮೋದಿ

ಜಿ20 ಶೃಂಗಸಭೆಗಾಗಿ ಇಟಲಿಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ 31ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ವ್ಯಾಟಿಕನ್​ ನಗರಕ್ಕೂ ಭೇಟಿ ನೀಡುವರು.

Lakshmi Hegde

|

Oct 29, 2021 | 9:16 AM

ಪ್ರಧಾನಿ ನರೇಂದ್ರ ಮೋದಿಯವರು ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ್ದಾರೆ. ಅವರು ರೋಮ್​ಗಾಗಿ ಪ್ರಯಾಣ ಬೆಳೆಸಿದ್ದು, ಇನ್ನೂ ಕೆಲವೇ ತಾಸುಗಳಲ್ಲಿ ಅಲ್ಲಿಗೆ ತಲುಪಲಿದ್ದಾರೆ. ಅಂದಹಾಗೆ ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ರೋಮ್​​ಗೆ ಭೇಟಿ ನೀಡುತ್ತಿರುವುದು ವಿಶೇಷವೂ ಹೌದು. ನರೇಂದ್ರ ಮೋದಿಯವರು ರೋಮ್​​ಗೆ ಭೇಟಿ ನೀಡುವ ಬಗ್ಗೆ ಇಟಲಿಯಲ್ಲಿರುವ ಭಾರತದ ರಾಯಭಾರಿ ನೀನಾ ಮಲ್ಹೋತ್ರಾ ಕೂಡ ಖಚಿತ ಪಡಿಸಿದ್ದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ರೋಮ್​ಗೆ ಭೇಟಿಕೊಡುತ್ತಿದ್ದಾರೆ ಎಂದೂ ತಿಳಿಸಿದ್ದರು. 

ಬೆಳಗ್ಗೆ 9.30ರ ಹೊತ್ತಿಗೆ ರೋಮ್​ ತಲುಪಲಿರುವ ಪ್ರಧಾನಿ ಮೋದಿ, ಇಂದು ಮಧ್ಯಾಹ್ನ 3.30ಕ್ಕೆ ಅಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಲಿದ್ದಾರೆ. ಅದಾದ ನಂತರ ಸಂಜೆ 5.30ಕ್ಕೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಜಿ20 ಶೃಂಗಸಭೆಗಾಗಿ ಇಟಲಿಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ 31ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ವ್ಯಾಟಿಕನ್​ ನಗರಕ್ಕೂ ಭೇಟಿ ನೀಡುವರು. ನಂತರ ಅಲ್ಲಿಂದ ಯುಕೆ (ಇಂಗ್ಲೆಂಡ್​)ಗೆ ತೆರಳುವರು. ಇನ್ನು ರೋಮ್​​ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅವರು, ಕೊರೊನಾ ಸಾಂಕ್ರಾಮಿಕದಿಂದ ಆರೋಗ್ಯ ಚೇತರಿಕೆ ಮತ್ತು ಜಾಗತಿಕ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಬಗ್ಗೆ ಮಾತನಾಡಲಿದ್ದಾರೆ.  ನಂತರ ಯುಕೆಯ ಗ್ಲಾಸ್ಗೋದಲ್ಲಿ, ಹವಾಮಾನ ವೈಪರಿತ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯತೆಯ ಬಗ್ಗೆ ಸಮಗ್ರವಾಗಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಕಡಿಮೆ ನೀರು ಕುಡಿಯುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ಬಗ್ಗೆ ಇರಲಿ ಎಚ್ಚರ

ಲೋಕ ಕಲ್ಯಾಣ, ಕೊರೊನಾ ನಿರ್ಮೂಲನೆಗಾಗಿ ರಾಚೋಟೇಶ್ವರ ಶ್ರೀಗಳಿಂದ ಸಮಾಧಿಯೋಗ; ಗಾಳಿ, ಅನ್ನ, ನೀರು ಇಲ್ಲದೆ 11 ದಿನಗಳ ಕಠಿಣ ಅನುಷ್ಠಾನ ಅಂತ್ಯ

Follow us on

Related Stories

Most Read Stories

Click on your DTH Provider to Add TV9 Kannada