SBI Alert: ಎಸ್‌ಬಿಐ ಗ್ರಾಹಕರೇ ಗಮನಿಸಿ; ಎಟಿಎಂನಿಂದ ಹಣ ಡ್ರಾ ಮಾಡಲು ಹೊಸ ನಿಯಮ ಜಾರಿ
SBI ATM Rules: ಗ್ರಾಹಕರಿಗೆ ಆಗುವ ಆನ್ಲೈನ್ ವಂಚನೆಯನ್ನು ತಡೆಯಲು ಒಟಿಪಿ ಆಧಾರಿತ ಎಟಿಎಂ ಹಣ ಡ್ರಾ ಮಾಡುವ ಸೇವೆಯನ್ನು ಎಸ್‌ಬಿಐ ಜಾರಿಗೆ ತಂದಿದೆ. ಇದರಿಂದ ಆನ್ಲೈನ್ ವಂಚನೆಯನ್ನು ತಡೆಯಲು ಸಾಧ್ಯವಾಗಲಿದೆ.
ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚು ಅನುಕೂಲಗೊಳಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ಸುಲಭ ಹಾಗೂ ಸರಳಗೊಳಿಸಲು ATMನಿಂದ ಹಣ ಡ್ರಾ ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಆಗುವ ಆನ್ಲೈನ್ ವಂಚನೆಯನ್ನು (Online Fraud) ತಡೆಯಲು ಒಟಿಪಿ (OTP) ಆಧಾರಿತ ಎಟಿಎಂ ಹಣ ಡ್ರಾ ಮಾಡುವ ಸೇವೆಯನ್ನು ಎಸ್‌ಬಿಐ ಜಾರಿಗೆ ತಂದಿದೆ. ಇದರಿಂದ ಆನ್ಲೈನ್ ವಂಚನೆಯನ್ನು ತಡೆಯಲು ಸಾಧ್ಯವಾಗಲಿದೆ.
ಈ ಹೊಸ ನಿಯಮದಿಂದಾಗಿ ಅನಧಿಕೃತವಾಗಿ ಬೇರೆಯವರು ಒಬ್ಬರ ಎಟಿಎಂ ಕಾರ್ಡ್ನಿಂದ ಹಣ ವಿತ್ಡ್ರಾ ಮಾಡುವುದನ್ನು ತಡೆಯಲು ಸಾಧ್ಯವಿದೆ. ಎಸ್‌ಬಿಐ ಗ್ರಾಹಕರು ಎಸ್‌ಬಿಐ ಎಟಿಎಂಗಳಲ್ಲಿ ವಹಿವಾಟುಗಳಿಗಾಗಿ ನಮ್ಮ OTP ಆಧಾರಿತ ಹಣ ಡ್ರಾ ಮಾಡುವ ಸೇವೆಯನ್ನು ಪಡೆಯಬಹುದು. ಇದು ಆನ್ಲೈನ್ ವಂಚನೆಯನ್ನು ತಡೆಯಲು ಬಹಳ ಮುಖ್ಯವಾದ ನಿರ್ಧಾರವಾಗಿದೆ. ಎಸ್‌ಬಿಐ ಎಟಿಎಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಎಸ್‌ಬಿಐ ಮೊದಲ ಬಾರಿಗೆ ಒಟಿಪಿ-ಮೌಲ್ಯಮಾಪಕ ಎಟಿಎಂ ವಹಿವಾಟನ್ನು 2020ರಲ್ಲಿ ಪರಿಚಯಿಸಿತು. ಇದು ಆನ್ಲೈನ್ ವಂಚನೆಯ ವಹಿವಾಟುಗಳನ್ನು ತಡೆಯುವ ಉದ್ದೇಶದಿಂದ ಬಹಳ ಪ್ರಮುಖ ನಿರ್ಧಾರವಾಗಿತ್ತು. ಇದೀಗ ಪರಿಚಯಿಸಲಾಗಿರುವ ಹೊಸ ಪ್ರಕ್ರಿಯೆಯಲ್ಲಿ ಗ್ರಾಹಕರು ಬ್ಯಾಂಕ್‌ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಆ ಒಟಿಪಿಯನ್ನು ಹಾಕಿದರೆ ಮಾತ್ರ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ. ಗ್ರಾಹಕರು ವಹಿವಾಟನ್ನು ದೃಢೀಕರಿಸಲು ಅಗತ್ಯವಿರುವ ಸರಿಯಾದ OTP ಅನ್ನು ನಮೂದಿಸಿದರೆ ಮಾತ್ರ ATMನಿಂದ ಹಣ ಡ್ರಾ ಮಾಡಬಹುದು.
Our OTP based cash withdrawal system for transactions at SBI ATMs is vaccination against fraudsters. Protecting you from frauds will always be our topmost priority.#SBI #StateBankOfIndia #ATM #OTP #SafeWithSBI #TransactSafely #SBIATM #Withdrawal pic.twitter.com/uCbkltrP8T
— State Bank of India (@TheOfficialSBI) October 24, 2021
ಆನ್ಲೈನ್ ಶಾಪಿಂಗ್ ವೇಳೆ ಗ್ರಾಹಕರು ವಹಿವಾಟನ್ನು ಮಾಡುವಾಗ ಹೇಗೆ ಬ್ಯಾಂಕ್ನ OTPಗಳನ್ನು ನಮೂದಿಸಬೇಕೋ ಅದೇ ರೀತಿ ಎಟಿಎಂನಲ್ಲಿಯೂ ಇನ್ನು ಮುಂದೆ ಓಟಿಪಿ ಆಧಾರಿತ ವಹಿವಾಟು ಇರಲಿದೆ. ಸ್ಟೇಟ್ ಬ್ಯಾಂಕ್ ಟ್ವೀಟ್ನಲ್ಲಿ ಈ ಮಾಹಿತಿಯನ್ನು ನೀಡಿದೆ. ಎಸ್‌ಬಿಐ ಗ್ರಾಹಕರು www.onlinesbi.com ನಲ್ಲಿ 15 ಭಾಷೆಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಬಹುದು. ಕನ್ನಡ, ಹಿಂದಿ, ಇಂಗ್ಲಿಷ್, ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಎಸ್‌ಬಿಐ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಗ್ರಾಹಕರು ತಮಗೆ ಅನುಕೂಲವಾಗುವ ಭಾಷೆಯ ಮೇಲೆ ಕ್ಲಿಕ್ ಮಾಡಿದ ನಂತರ, ಗ್ರಾಹಕರು ಅದಕ್ಕೆ ಅನುಗುಣವಾಗಿ ಸಂಪೂರ್ಣ ವಿವರಗಳನ್ನು ಪಡೆಯಲು ಮತ್ತು ಆ ಭಾಷೆಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: SBI Internet Banking: ಕನ್ನಡ, ತಮಿಳು, ತೆಲುಗು ಸೇರಿ 15 ಭಾಷೆಗಳಲ್ಲಿ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ