Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಲ್ಲ ಪೆರಿಯಾರ್​ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ; ಇಡುಕ್ಕಿಯಲ್ಲಿ ಹೈ ಅಲರ್ಟ್​​, 3000 ಜನರ ಸ್ಥಳಾಂತರ

ಇಂದು ಬೆಳಗ್ಗೆ 7ಗಂಟೆಗೆ ಅಣೆಕಟ್ಟಿನ ಗೇಟ್​​ಗಳನ್ನು ತೆರೆಯಲಾಗಿದ್ದು, ಆಗಿನಿಂದಲೂ ಹಲವು ಮನೆಗಳು ಮುಳುಗಡೆಗೊಂಡಿವೆ. ಆದರೆ ಯಾವುದೇ ಅಹಿತಕರ ಘಟನೆ ನಡೆದಿದ್ದು ಇದುವರೆಗೆ ವರದಿಯಾಗಿಲ್ಲ.

ಮುಲ್ಲ ಪೆರಿಯಾರ್​ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ; ಇಡುಕ್ಕಿಯಲ್ಲಿ ಹೈ ಅಲರ್ಟ್​​, 3000 ಜನರ ಸ್ಥಳಾಂತರ
ಮುಲ್ಲಾ ಪೆರಿಯಾರ್​ ಅಣೆಕಟ್ಟು
Follow us
TV9 Web
| Updated By: Lakshmi Hegde

Updated on:Oct 29, 2021 | 10:38 AM

ಮುಲ್ಲ ಪೆರಿಯಾರ್​ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡ್ಯಾಂನ ಗೇಟ್​​ನ್ನು ತಮಿಳುನಾಡು ಸರ್ಕಾರ (Tamil Nadu Government) ತೆಗೆದಿದೆ. ಕೇರಳದ ಪೆರಿಯಾರ್​ ನದಿಗೆ ಈ ಅಣೆಕಟ್ಟು ಕಟ್ಟಲಾಗಿದ್ದು, ಇದೀಗ ಡ್ಯಾಂನಿಂದ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ಅಣೆಕಟ್ಟಿನ ಕೆಳ ಪ್ರದೇಶದಲ್ಲಿರುವ ಸುಮಾರು 3000 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ. ಕೇರಳದ ಇಡುಕ್ಕಿ ಜಲಾಶಯ(Idukki  Reservoir)ಕ್ಕೆ ಈ ನೀರು ಹೋಗಲಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಕೂಡ ಹೈ ಅಲರ್ಟ್​ ಘೋಷಿಸಲಾಗಿದೆ.

ಇಂದು ಬೆಳಗ್ಗೆ 7ಗಂಟೆಗೆ ಅಣೆಕಟ್ಟಿನ ಗೇಟ್​​ಗಳನ್ನು ತೆರೆಯಲಾಗಿದ್ದು, ಆಗಿನಿಂದಲೂ ಹಲವು ಮನೆಗಳು ಮುಳುಗಡೆಗೊಂಡಿವೆ. ಆದರೆ ಯಾವುದೇ ಅಹಿತಕರ ಘಟನೆ ನಡೆದಿದ್ದು ಇದುವರೆಗೆ ವರದಿಯಾಗಿಲ್ಲ. ಮುಲ್ಲ ಪೆರಿಯಾರ್ ಜಲಾಶಯದ ಸಾಮರ್ಥ್ಯವಾದ 138 ಅಡಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗೆ ಹೆಚ್ಚುವರಿ ನೀರು ಬಿಟ್ಟಾಗ ಅದು ಸುಮಾರು ಎರಡು ತಾಸುಗಳ ನಂತರ ಇಡುಕ್ಕಿ ಜಲಾಶಯ ತಲುಪುತ್ತದೆ. ಅಲ್ಲಿ ಕೂಡ ನೀರಿನ ಮಟ್ಟ ಮಿತಿಮೀರಿದರೆ, ಅಗತ್ಯ ಬಿದ್ದರೆ ಇಡುಕ್ಕಿ ಅಣೆಕಟ್ಟಿನ ಗೇಟ್​​ನ್ನು ಕೂಡ ತೆಗೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ನಿನ್ನೆಯೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇರಳ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್, ಅಣೆಕಟ್ಟುಗಳಿಂದ ನೀರು ಬಿಡುತ್ತಿರುವ ವಿಚಾರ ಕೇಳಿ ರಾಜ್ಯದ ಜನರು ಗಾಬರಿಗೊಳ್ಳುವುದು ಬೇಡ. ಮುಲ್ಲ ಪೆರಿಯಾರ್​ ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯ 12.758 ಟಿಎಂಸಿಗಳಷ್ಟೇ ಆಗಿದೆ. ಆದರೆ ಇಡುಕ್ಕಿ ಜಲಾಶಯ 70.5 ಸಾವಿರ ಮಿಲಿಯನ್​ ಕ್ಯೂಬಿಕ್​ ಫೀಟ್​ (ಟಿಎಂಸಿ) ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಾಗಾಗಿ ಮುಲ್ಲ ಪೆರಿಯಾರ್​ ಡ್ಯಾಂನ ಗೇಟ್​ ತೆಗೆದಾಕ್ಷಣ ಇಲ್ಲಿಯೂ ಗೇಟ್​ ತೆಗೆಯಬೇಕಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ನೀರನ್ನು ಇಲ್ಲಿ ಸಂಗ್ರಹಿಸಲು ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲ್ಲಿರುವ ಗಡ್ಡಣ್ಣನವರ್ ಮತ್ತು ಮೀಸೆಯಪ್ಪನವರ್ ಪೈಕಿ ಯಾರೊಬ್ಬರೂ ವೀರಪ್ಪನ್ ಸಂಬಂಧಿಕರಲ್ಲ!

ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಅಧಿಕಾರ ಅವಧಿ ವಿಸ್ತರಣೆ; ಮುಂದಿನ 3ವರ್ಷಕ್ಕೆ ಅವರೇ ಮತ್ತೆ ಗವರ್ನರ್​

Published On - 10:32 am, Fri, 29 October 21

ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ