ದೆಹಲಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ತಡೆಯಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿತ್ತು ಎಂದಿದ್ದಾರೆ. ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋ (San Francisco) ತಲುಪಿದ ರಾಹುಲ್, ಅಮೆರಿಕದ ಮೂರು ನಗರಗಳ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಅವರು ಭಾರತೀಯ ವಲಸಿಗರು ಮತ್ತು ಅಮೆರಿಕದ ಶಾಸಕರನ್ನು ಭೇಟಿಯಾಗಲಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಸರ್ಕಾರ ಎಲ್ಲ ಶಕ್ತಿಯನ್ನು ಬಳಸಿತು. ಬಿಜೆಪಿ ಜನರಿಗೆ ಬೆದರಿಕೆ ಹಾಕುತ್ತಿದೆ.ಅದು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾತ್ರೆಯ ಪ್ರಭಾವ ಮತ್ತೂ ಹೆಚ್ಚಾಯಿತು. ಭಾರತವನ್ನು ಒಗ್ಗೂಡಿಸೋಣ ಎಂಬ ಆಶಯ ಪ್ರತಿಯೊಬ್ಬರ ಹೃದಯದಲ್ಲಿರುವುದರಿಂದ ಇದು ಸಾಧ್ಯವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ನಾವು ಜನರೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ಎಲ್ಲಾ ಸಾಧನಗಳನ್ನು ಬಿಜೆಪಿ-ಆರ್‌ಎಸ್‌ಎಸ್ ನಿಯಂತ್ರಿಸಿದ್ದರಿಂದ ನಾವು ಭಾರತ್ ಜೋಡೋ ಯಾತ್ರೆ ಆರಂಭಿಸಿದೆವು ಎಂದಿದ್ದಾರೆ ರಾಹುಲ್.
2022 ರ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಂಡಿತ್ತು. ಶ್ರೀನಗರದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ರಾಹುಲ್ ಯಾತ್ರೆ ಕೊನೆಗೊಳಿಸಿದ್ದರು. ವಿವಿಧ ನಗರ, ಗ್ರಾಮಗಳನ್ನು ಹಾದು ಹೋಗಿರುವ ಈ ಯಾತ್ರೆ 3000 ಕಿಮೀಗಳನ್ನು ಕ್ರಮಿಸಿತ್ತು.
ಭಾರತ ಜೋಡೋ ಯಾತ್ರೆಯು ವಾತ್ಸಲ್ಯ, ಗೌರವ ಮತ್ತು ನಮ್ರತೆಯ ಮನೋಭಾವವನ್ನು ಹೊಂದಿದೆ. ಇತಿಹಾಸದ ಪುಟಗಳನ್ನು ನೋಡಿದರೆ ಗುರುನಾನಕ್ ದೇವ್ ಜಿ, ಗುರು ಬಸವಣ್ಣ ಜಿ, ನಾರಾಯಣ ಗುರು ಜಿ ಸೇರಿದಂತೆ ಎಲ್ಲಾ ಆಧ್ಯಾತ್ಮಿಕ ನಾಯಕರು ಇದೇ ರೀತಿಯಲ್ಲಿ ರಾಷ್ಟ್ರವನ್ನು ಒಂದುಗೂಡಿಸಿದ್ದಾರೆ ಎಂದು ಕಾಣಬಹುದು ಎಂದು ರಾಹುಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಕೆಲವೇ ವಾರಗಳ ಮೊದಲು ರಾಹುಲ್ ಗಾಂಧಿಯವರ ಹೇಳಿಕೆಗಳು ಬಂದಿವೆ. ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ಅಮೆರಿಕಕ್ಕೆ ಹೋಗಲಿದ್ದಾರೆ. ಯುಎಸ್ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಜೂನ್ 22 ರಂದು ಪ್ರಧಾನ ಮಂತ್ರಿಗಾಗಿ ರಾಜ್ಯ ಭೋಜನವನ್ನು ಸಹ ಆಯೋಜಿಸಲಿದ್ದಾರೆ.
भारत जोड़ो यात्रा का संदेश – साथ चलो और खोलते जाओ, ‘नफ़रत के बाज़ार में मोहब्बत की दुकानें’। pic.twitter.com/gVLD8ERUkX
— Rahul Gandhi (@RahulGandhi) May 31, 2023
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬುಧವಾರ ನಡೆದ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಜಾತಿ ಗಣತಿಗಾಗಿ ತಮ್ಮ ಪಕ್ಷದ ಕರೆಯನ್ನು ಪುನರುಚ್ಚರಿಸಿದರು. ಇದು ಸಮಾಜದ ಎಕ್ಸ್ ರೇಯಂತಿದ್ದು, ಜಾತಿ ತಾರತಮ್ಯ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ ಎಂದರು. ನ್ಯಾಯ್ ಮತ್ತು ಎಂಜಿಎನ್‌ಆರ್‌ಇಜಿಎಯಂತಹ ಯೋಜನೆಗಳು ಬಡವರಿಗೆ ಆರ್ಥಿಕ ನ್ಯಾಯ ಒದಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಗಾಂಧಿ, ಇವರು ದೇಶವನ್ನು ಜಾತಿ ಮತ್ತು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ: ರಾಹುಲ್ ಗಾಂಧಿ
ಆರು ದಿನಗಳ ಯುಎಸ್ ಪ್ರವಾಸದಲ್ಲಿ ರಾಹುಲ್, ಭಾರತೀಯ ಅಮೆರಿಕನ್ನರೊಂದಿಗೆ ಮಾತನಾಡುತ್ತಾರೆ. ವಾಲ್ ಸ್ಟ್ರೀಟ್ ಕಾರ್ಯನಿರ್ವಾಹಕರನ್ನು ಭೇಟಿ ಮಾಡುತ್ತಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ಅವರು ಜೂನ್ 4 ರಂದು ಜಾವಿಟ್ಸ್ ಸೆಂಟರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಸಾರ್ವಜನಿಕ ಸಭೆಯೊಂದಿಗೆ ತಮ್ಮ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ: ಮೂರು ನಗರಗಳ ಅಮೆರಿಕ ಪ್ರವಾಸಕ್ಕಾಗಿ ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಐಒಸಿಯ ಇತರ ಸದಸ್ಯರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ವಲಸೆ ಕ್ಲಿಯರೆನ್ಸ್‌ಗಾಗಿ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅವರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಅದೇ ವಿಮಾನದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಹಲವರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.ಸರತಿ ಸಾಲಿನಲ್ಲಿ ಏಕೆ ನಿಂತಿದ್ದೀರಿ ಎಂದು ಜನರು ಕೇಳಿದಾಗ, ನಾನು ಸಾಮಾನ್ಯ ಮನುಷ್ಯ. ಹಾಗೆ ಇರುವುದು ನನಗೆ ಇಷ್ಟ, ನಾನು ಇನ್ನು ಮುಂದೆ ಸಂಸದನಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ