ಚೀನಾ ಪ್ರಜೆಗಳನ್ನ ದೇಶದೊಳಕ್ಕೆ ಕರೆತರಬೇಡಿ: ಭಾರತೀಯ, ವಿದೇಶಿ ಏರ್‌ಲೈನ್ಸ್‌ಗಳಿಗೆ ಕೇಂದ್ರ ಖಡಕ್ ಸೂಚನೆ

|

Updated on: Dec 28, 2020 | 2:46 PM

ಭಾರತಕ್ಕೆ ಚೀನಾ ನಾಗರಿಕರ ಪ್ರಯಾಣಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ, ಭಾರತ ಮತ್ತು ವಿದೇಶಿ ಏರ್‌ಲೈನ್ಸ್‌ಗಳಿಗೆ ಅನೌಪಚಾರಿಕ ಸೂಚನೆ ನೀಡಿದೆ.

ಚೀನಾ ಪ್ರಜೆಗಳನ್ನ ದೇಶದೊಳಕ್ಕೆ ಕರೆತರಬೇಡಿ: ಭಾರತೀಯ, ವಿದೇಶಿ ಏರ್‌ಲೈನ್ಸ್‌ಗಳಿಗೆ ಕೇಂದ್ರ ಖಡಕ್ ಸೂಚನೆ
Follow us on

ದೆಹಲಿ: ಭಾರತಕ್ಕೆ ಚೀನಾ ನಾಗರಿಕರ ಪ್ರಯಾಣಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ, ಭಾರತ ಮತ್ತು ವಿದೇಶಿ ಏರ್‌ಲೈನ್ಸ್‌ಗಳಿಗೆ ಅನೌಪಚಾರಿಕ ಸೂಚನೆ ನೀಡಿದೆ. ಬೇರೆ ದೇಶದಿಂದಲೂ ಚೀನಿಯರು ಭಾರತಕ್ಕೆ ಬರದಂತೆ ನೋಡಿಕೊಳ್ಳಲು ಅನೌಪಚಾರಿಕವಾಗಿ ತಿಳಿಸಿದೆ.

ಈ‌ ಬಗ್ಗೆ ಲಿಖಿತ ಆದೇಶ ನೀಡಿದರೆ, ಚೀನಿಯರಿಗೆ ತಿಳಿಸಲು ಅನುಕೂಲವಾಗಲಿದೆ ಹೀಗಾಗಿ ಈ ಬಗ್ಗೆ ಲಿಖಿತ ಆದೇಶ ನೀಡುವಂತೆ ಏರ್‌ಲೈನ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಸದ್ಯ ಭಾರತ-ಚೀನಾ ನಡುವೆ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಚೀನಾದಿಂದ ಬೇರೆ ದೇಶಗಳಿಗೆ ಹೋಗಿ ಅಲ್ಲಿಂದ ಚೀನಿಯರು ಭಾರತಕ್ಕೆ ಬರ್ತಿದ್ದರು.

ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸುಮಾರು 1,500 ಜನ ಚೀನಿಯರು ಬಂದರುಗಳಲ್ಲಿ ಸಿಲುಕಿದ್ದಾರೆ. ಭಾರತೀಯರು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ವಾಪಸ್ ಬರಲು ಚೀನಾ ಒಪ್ಪಿಲ್ಲ. ಹೀಗಾಗಿ ಈಗ ಚೀನಾಗೆ ಪಾಠ ಕಲಿಸಲು ಭಾರತ ಮುಂದಾಗಿದೆ.

ಮುಸ್ಲಿಂ ವಿರೋಧಿ ಹೇಳಿಕೆ: ಅನಂತ್​ಕುಮಾರ್ ಹೆಗಡೆಗೆ ಬಿಗ್​ ರಿಲೀಫ್​; ಕ್ರಿಮಿನಲ್ ಕೇಸ್​ನಿಂದ ಮುಕ್ತ