ಸಾಲಕ್ಕೆ ಸಂಚಕಾರ: GST ಹೊಸ ನಿಯಮ ಹಿಂಪಡೆಯಲು ಹಣಕಾಸು ಸಚಿವೆ ನಿರ್ಮಲಾಗೆ ವ್ಯಾಪಾರಿಗಳಿಂದ ಒತ್ತಾಯ

ಸರಕು ಮತ್ತು ಸೇವಾ ತೆರಿಗೆ (GST)ಯ ಹೊಸ ಸೂಚನೆಗಳನ್ನು ಹಿಂಪಡೆಯುವಂತೆ ವ್ಯಾಪಾರಿಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಜಿಎಸ್​ಟಿ ಕೌನ್ಸಿಲ್​ನ್ನು ಕೇಳಿಕೊಂಡಿದ್ದಾರೆ.

ಸಾಲಕ್ಕೆ ಸಂಚಕಾರ: GST ಹೊಸ ನಿಯಮ ಹಿಂಪಡೆಯಲು ಹಣಕಾಸು ಸಚಿವೆ ನಿರ್ಮಲಾಗೆ ವ್ಯಾಪಾರಿಗಳಿಂದ ಒತ್ತಾಯ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2021 ಮಂಡನೆ
Follow us
TV9 Web
| Updated By: ganapathi bhat

Updated on:Apr 06, 2022 | 11:13 PM

ದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಹೊಸ ನಿಯಮಗಳನ್ನು ಹಿಂಪಡೆಯುವಂತೆ ವ್ಯಾಪಾರಿಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಜಿಎಸ್​ಟಿ ಕೌನ್ಸಿಲ್​ ಮನವಿ ಮಾಡಿಕೊಂಡಿದ್ದಾರೆ. ಹೊಸ ಜಿಎಸ್​ಟಿ ನಿಯಮಗಳನ್ನು ಕೆಲ ದಿನಗಳ ಹಿಂದಷ್ಟೇ ಹೊರಡಿಸಲಾಗಿತ್ತು. ಇದೀಗ ಅವುಗಳನ್ನು ಹಿಂಪಡೆದು, ಬದಲಾವಣೆ ತರುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸ್ಕ್ರಾಪ್ ರೂಲ್ಸ್ 86B ಮತ್ತು 36(4), ಜನವರಿ 1, 2021ರಿಂದ ಜಾರಿಯಾಗಲಿದೆ. ಆದರೆ ಈ ಹೊಸ ನಿಯಮಗಳು ಜಿಎಸ್​ಟಿಯ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ITC)ಗೆ ತೊಡಕನ್ನು ಉಂಟುಮಾಡಲಿವೆ. ಆ ಮೂಲಕ, ಜಿಎಸ್​ಟಿಯ ಮೂಲಭೂತ ವಿಚಾರಕ್ಕೆ ವಿರುದ್ಧವಾಗಲಿದೆ ಎಂದು ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಕೆ. ಬನ್ಸಾಲ್ ತಿಳಿಸಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಹಾಗೂ ಕಸ್ಟಮ್ಸ್ (CBIC) ನಿಯಮ 86B ಯನ್ನು ಜಿಎಸ್​ಟಿಯೊಂದಿಗೆ ಪರಿಚಯಿಸಿದೆ. ಈ ಮೂಲಕ, ತಿಂಗಳಿಗೆ ರೂ. 50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಇರುವ ವಾಣಿಜ್ಯ ವ್ಯವಹಾರಗಳು, ಖಡ್ಡಾಯವಾಗಿ ಕನಿಷ್ಠ ಶೇ. 1ರಷ್ಟು ಜಿಎಸ್​ಟಿಯನ್ನು ನಗದು ರೂಪದಲ್ಲಿ ನೀಡಬೇಕಾಗುತ್ತದೆ.

ನೂತನ ನಿಯಮ 36(4) ಅನುಸಾರ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ನ್ನು (Input Tax Credit -ITC) ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರುತ್ತದೆ. ವಹಿವಾಟುದಾರರು ಇನ್​ವಾಯ್ಸ್​/ ಸಾಲದ ಕರಾರು ಸಲ್ಲಿಸದಿದ್ದಲ್ಲಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ ಸೌಲಭ್ಯ ಪಡೆಯುವ ವಿಚಾರದಲ್ಲಿ ನಿಯಂತ್ರಣ ವಿಧಿಸಿದೆ. GSTR 2B ಬಾಬತ್ತಿನಲ್ಲಿ ಪಡೆಯುವ ಸಾಲದ ಮೊತ್ತವನ್ನು ಶೇ. 10 ರಿಂದ ಶೇ. 5ಕ್ಕೆ ಕುಗ್ಗಿಸಿದೆ. ಇದರಿಂದ ವಹಿವಾಟುದಾರರಿಗೆ ಆ  ಎಕ್ಸ್​ಟ್ರಾ ಶೆ. 5ರಷ್ಟು ಮೊತ್ತದ ಖೋತಾ ಆಗಲಿದ್ದು, ಅದಕ್ಕೆ ವಹಿವಾಟುದಾರರು ಅಸಮಾಧಾನಗೊಂಡಿದ್ದಾರೆ.  ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ನ್ನು ಯಥಾಸ್ಥಿತಿಗೆ ತರುವಂತೆ ಮನವಿ ಮಾಡಿದ್ದಾರೆ.

Published On - 1:06 pm, Mon, 28 December 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ