ಹಸಿರು ಪಟಾಕಿ ನಿಷೇಧ: ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲ, ಉತ್ಪಾದನೆ, ಮಾರಾಟಕ್ಕಿಲ್ಲ ಅನುಮತಿ ಎಂದ ಸುಪ್ರೀಂ

|

Updated on: Sep 22, 2023 | 11:21 AM

ಹಸಿರು ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲ ನೀಡಿರುವ ಸುಪ್ರೀಂಕೋರ್ಟ್​ ಉತ್ಪಾದನೆ, ಮಾರಾಟಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಬೇರಿಯಂ ಬಳಸಿ ಪಟಾಕಿಗಳ ತಯಾರಿಕೆ ಮತ್ತು ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ತಿರಸ್ಕರಿಸಿತು.

ಹಸಿರು ಪಟಾಕಿ ನಿಷೇಧ: ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲ, ಉತ್ಪಾದನೆ, ಮಾರಾಟಕ್ಕಿಲ್ಲ ಅನುಮತಿ ಎಂದ ಸುಪ್ರೀಂ
ಹಸಿರು ಪಟಾಕಿಗಳು
Image Credit source: Outlook
Follow us on

ಹಸಿರು ಪಟಾಕಿ(Green Firecrackers) ನಿಷೇಧಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲ ನೀಡಿರುವ ಸುಪ್ರೀಂಕೋರ್ಟ್​ ಉತ್ಪಾದನೆ, ಮಾರಾಟಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಬೇರಿಯಂ ಬಳಸಿ ಪಟಾಕಿಗಳ ತಯಾರಿಕೆ ಮತ್ತು ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ತಿರಸ್ಕರಿಸಿತು.

ದೀಪಾವಳಿ ಹಾಗೂ ಇತರೆ ಹಬ್ಬಗಳಲ್ಲಿ ಪಟಾಕಿ ಹಚ್ಚಲು ಅವಕಾಶ ನೀಡಬೇಕೆ ಎಂಬುದರ ಕುರಿತು ಇಂದು ಸುಪ್ರೀಂಕೋರ್ಟ್​ ತೀರ್ಪು ಹೊರಬಿದ್ದಿದೆ.
ಕಳೆದ ವಾರ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್​ ಸ್ಪಷ್ಟನೆ ನೀಡಿದ್ದು, ದೆಹಲಿಯಂತಹ ರಾಜ್ಯಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧವಿರುವ ರಾಜ್ಯಗಳಲ್ಲಿ ಹಸಿರು ಪಟಾಕಿ ಸುಡುವುದಕ್ಕೂ ಅವಕಾಶವಿಲ್ಲ, ನ್ಯಾಯಾಲಯ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿತ್ತು.

ಇದಕ್ಕೂ ಮುನ್ನ ದೆಹಲಿಯಲ್ಲಿ ಪಟಾಕಿ ತಯಾರಿಕೆ, ಸಂಗ್ರಹ, ಮಾರಾಟ ಹಾಗೂ ಸಿಡಿಸುವಿಕೆಯ ಮೇಲೆ ಸಮಗ್ರ ನಿಷೇಧ ಹೇರಿರುವ ದೆಹಲಿ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್​ ನಿರಾಕರಿಸಿತ್ತು.

ಮತ್ತಷ್ಟು ಓದಿ: ಹಾವೇರಿ ಪಟಾಕಿ ಅವಘಡ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಹಸಿರು ಪಟಾಕಿ ಎಂದರೇನು?
ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ ಶೇ30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಹಸಿರು ಪಟಾಕಿಗಳು ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರ ಸೂಸುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್​ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ. ​