ಚಂಡೀಗಢದ ಮನೆಯೊಂದರ ಮೇಲೆ ಗ್ರೆನೇಡ್ ದಾಳಿ ನಡೆಸಿ ಶಂಕಿತ ಆರೋಪಿಗಳು ಆಟೋದಲ್ಲಿ ಪರಾರಿಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಚಂಡೀಗಢದಲ್ಲಿ ದುಷ್ಕರ್ಮಿಗಳು ಆಟೋದಲ್ಲಿ ಬಂದು ಗ್ರೆನೇಡ್ ದಾಳಿ ನಡೆಸಿದ್ದ ಮನೆ ನಿವೃತ್ತ ಪ್ರಾಂಶುಪಾಲರಿಗೆ ಸೇರಿದ್ದಾಗಿದೆ. ಇದೀಗ ಚಂಡೀಗಢ ಪೊಲೀಸ್, ಎನ್ಐಎ ಮತ್ತು ಪಂಜಾಬ್ ಪೊಲೀಸರ ತಂಡಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮನೆಯ ಕಿಟಕಿಗಳು ಹಾಗೂ ಸ್ಥಳದಲ್ಲಿ ಇಟ್ಟಿದ್ದ ಕೆಲವು ವಸ್ತುಗಳಿಗೆ ಮಾತ್ರ ಹಾನಿಯಾಗಿದೆ.
ಸಂಜೆ 6 ಗಂಟೆ ಸುಮಾರಿಗೆ ಆಟೋದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮನೆ ಮೇಲೆ ಗ್ರೆನೇಡ್ ಎಸೆದಿದ್ದರು. ಈ ಹಿಂದೆ ಪಂಜಾಬ್ ಪೊಲೀಸ್ ಎಸ್ಪಿಯೊಬ್ಬರು ಈ ಮನೆಯಲ್ಲಿ ವಾಸವಿದ್ದರು, ಅವರು ಈಗ ನಿವೃತ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ ಅವರನ್ನೇ ಗುರಿಯಾಗಿಸಿ ದಾಳಿ ನಡೆದಿದೆಯೇ ಎಂಬುದರ ಕುರಿತು ಪ್ರಶ್ನೆ ಏಳುತ್ತಿದೆ.
ಆರೋಪಿಗಳನ್ನು ಆಟೋದಲ್ಲಿ ಕರೆತಂದ ಚಾಲಕನನ್ನೂ ಪೊಲೀಸರು ಬಂಧಿಸಿದ್ದಾರೆ. ಖಲಿಸ್ತಾನಿಗಳ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಚಂಡೀಗಢ ಪೊಲೀಸರು ಯಾರಿಗಾದರೂ ಆರೋಪಿಯ ಬಗ್ಗೆ ತಿಳಿದುಬಂದಲ್ಲಿ 112ಕ್ಕೆ ಕರೆ ಮಾಡಿ ಎಂದು ಕೇಳಿದ್ದಾರೆ. ಇದಲ್ಲದೇ 9465121000 ವಾಟ್ಸಾಪ್ ಸಂಖ್ಯೆಗೂ ಮಾಹಿತಿ ನೀಡಬಹುದು.
ಮತ್ತಷ್ಟು ಓದಿ: Manipur Violence: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್ನಲ್ಲಿ ಹಿಂಸಾಚಾರ, 4 ಸಾವು
ಪಂಜಾಬ್ ಪೊಲೀಸ್‌ನ ನಿವೃತ್ತ ಅಧಿಕಾರಿಯೊಬ್ಬರು ಈ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೆಲವರು ಆ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆ ಪ್ರಕರಣದಲ್ಲಿ 2023 ರಲ್ಲಿ ವಿಶೇಷ ಸೆಲ್‌ನಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.
CCTV visuals of the Sector-10 Chandigarh where an objectionable object thrown into a house led to blast. The auto-Rickshaw is seen in the video used by the suspects who throw the objectionable object in the house of Chd, Sec-10. The blast voice is too heard in the video pic.twitter.com/82Ba5tCwRX
— Akashdeep Thind (@thind_akashdeep) September 11, 2024
ಇಂದು ಈ ಕೃತ್ಯ ಎಸಗಿದ ವ್ಯಕ್ತಿಗಳು ಈ ಮನೆ ಇದೇ ಅಧಿಕಾರಿಗೆ ಸೇರಿದ್ದು ಎಂದು ಭಾವಿಸಿದ್ದು, ಬಹುಶಃ ಆರೋಪಿಗಳು ಇದೇ ಅಧಿಕಾರಿಯನ್ನೇ ಗುರಿಯಾಗಿಸಿಕೊಂಡು ಬಂದಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.
ಹಿಮಾಚಲ ಪ್ರದೇಶದ ಶಿಮ್ಲಾದ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ ಭೂಪೇಶ್ ಮಲ್ಹೋತ್ರಾ ಮನೆಯ ಮಾಲೀಕರು.
ಮನೆಯ ಮಾಲೀಕರಿಗೆ 100 ವರ್ಷ ವಯಸ್ಸಾಗಿದ್ದು, ವಿದೇಶದಲ್ಲಿ ಇಬ್ಬರು ಗಂಡು ಮಕ್ಕಳು ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಗಂಡುಮಕ್ಕಳೂ ಒಬ್ಬೊಬ್ಬರಾಗಿ ಇಲ್ಲಿಗೆ ಬಂದು ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ