AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಮದ್ಯ ಸೇವಿಸಿ ಯುವಕರ ಡ್ಯಾನ್ಸ್; ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೊ ವೈರಲ್

ಪೊಲೀಸರು ಕಾರಿನ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಚಾಲಕನನ್ನು ಚಿರಂಜೀವ್ ವಿಹಾರ್ ನಿವಾಸಿ ರಾಜಾ ಚೌಧರಿ ಎಂದು ಗುರುತಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಮದ್ಯ ಸೇವಿಸಿ ಯುವಕರ ಡ್ಯಾನ್ಸ್; ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೊ ವೈರಲ್
ಗಾಜಿಯಾಬಾದ್ ವೈರಲ್ ವಿಡಿಯೊ
ರಶ್ಮಿ ಕಲ್ಲಕಟ್ಟ
|

Updated on: Feb 05, 2023 | 9:24 PM

Share

ದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನ (Uttar Pradesh) ಎಲಿವೇಟೆಡ್ ರಸ್ತೆಯಲ್ಲಿ ಯುವಕರ ಗುಂಪೊಂದು ಐಷಾರಾಮಿ ಕಾರುಗಳಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ನಡುರಸ್ತೆಯಲ್ಲೇ ಮದ್ಯಪಾನ ಮಾಡುತ್ತಿರುವ ವಿಡಿಯೊ ವೈರಲ್ (Viral) ಆಗಿದೆ. ಪೊಲೀಸರು ಕಾರಿನ ಮಾಲೀಕರನ್ನು ಗುರುತಿಸಿದ್ದಾರೆ. ಇಂದಿರಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಚಿತ್ರೀಕರಿಸಲಾದ ವಿಡಿಯೊ ಬಗ್ಗೆ ಶನಿವಾರ ರಾತ್ರಿ ವರದಿ ಆಗಿತ್ತು. ಈ ವಿಡಿಯೊದಲ್ಲಿ ಪುರುಷರ ಗುಂಪು ಮದ್ಯಪಾನ ಮಾಡುವಾಗ ರೈಫಲ್‌ಗಳನ್ನು ಝಳಪಿಸುವುದನ್ನು ಕಾಣಬಹುದು. ಕಾರಿನಿಂದ ಜೋರಾಗಿ ಸಂಗೀತ ಕೇಳಿಬರುತ್ತದೆ. ಮತ್ತೊಂದು ವಿಡಿಯೊದಲ್ಲಿ ವ್ಯಕ್ತಿಯೊಬ್ಬ ರೈಫಲ್‌ನಲ್ಲಿ ಬುಲೆಟ್‌ಗಳನ್ನು ತುಂಬಿಕೊಂಡು ವಾಹನದಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ತೋರಿಸುತ್ತದೆ.

ವ್ಯಕ್ತಿ ಕುಡಿದ ಮತ್ತಿನಲ್ಲಿ ಬಂದೂಕಿನಿಂದ ಗುಂಡು ಹಾರಿಸುತ್ತಿದ್ದು, ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದ ಎನ್ನಲಾಗಿದೆ.

ಪೊಲೀಸರು ಕಾರಿನ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಚಾಲಕನನ್ನು ಚಿರಂಜೀವ್ ವಿಹಾರ್ ನಿವಾಸಿ ರಾಜಾ ಚೌಧರಿ ಎಂದು ಗುರುತಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ರಸ್ತೆ ತಡೆ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ವೈರಲ್ ಆದ ಈ ವಿಡಿಯೊದಲ್ಲಿ, ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿದ ನಂತರ ಪುರುಷ ಮತ್ತು ಇಬ್ಬರು ಮಹಿಳೆಯರು ಡ್ಯಾನ್ಸ್ ಮಾಡಿದ್ದು ಇದು ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.

ಸೆಪ್ಟೆಂಬರ್‌ನಲ್ಲಿ, ಎಲಿವೇಟೆಡ್ ರಸ್ತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಎಂಟು ಐಷಾರಾಮಿ ಕಾರುಗಳೊಂದಿಗೆ 21 ಜನರನ್ನು ಬಂಧಿಸಲಾಗಿತ್ತು. ಕಾರಿನ ಬಾನೆಟ್ ಮೇಲೆ ಕೇಕ್ ಕತ್ತರಿಸಿ ಜೋರಾಗಿ ಸಂಗೀತ ನುಡಿಸುತ್ತಿದ್ದದ್ದು ವಿಡಿಯೊದಲ್ಲಿದೆ.ಮಾರ್ಚ್ 2018 ರಲ್ಲಿ ಉದ್ಘಾಟನೆಗೊಂಡ ಗಾಜಿಯಾಬಾದ್ ಎಲಿವೇಟೆಡ್ ರಸ್ತೆ, ದೆಹಲಿ-ಗಾಜಿಯಾಬಾದ್ ಗಡಿಯಲ್ಲಿರುವ ಯುಪಿ ಗೇಟ್ ಅನ್ನು ಉತ್ತರ ಪ್ರದೇಶ ನಗರದ ರಾಜ್ ನಗರ ವಿಸ್ತರಣೆಯೊಂದಿಗೆ ಸಂಪರ್ಕಿಸುತ್ತದೆ. ಈ ರಸ್ತೆ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ಮಾತ್ರವಲ್ಲದೆ ಪ್ರಯಾಣದ ಸೌಕರ್ಯವನ್ನು ಹೆಚ್ಚಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ