ಬಸ್ಸೊಂದು ರಸ್ತೆಯಿಂದ ಆಯತಪ್ಪಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 4 ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ದ್ವಾರಕಾ ಬಳಿ ನಡೆದಿದೆ. 14 ಮಂದಿ ಗಾಯಗೊಂಡಿದ್ದಾರೆ, ಬಸ್ಸು ದ್ವಾರಕಾದಿಂದ ಅಹಮದಾಬಾದ್‌ಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 51 ರಲ್ಲಿ ರಾತ್ರಿ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ರಸ್ತೆಯಲ್ಲಿ ಜಾನುವಾರುಗಳಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿವ್ಯಾನ್, ಕಾರು ಮತ್ತು ಮೋಟಾರ್ ಸೈಕಲ್ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ.
ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದ್ವಾರಕಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು 6 ಬರೋಡಾ ಎನ್‌ಡಿಆರ್‌ಎಫ್ ತಂಡದ ಎಎಸ್‌ಐ ರವಿಕಾಂತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮೃತರಲ್ಲಿ ಆರು ಮಂದಿ ಮಿನಿವ್ಯಾನ್‌ನಲ್ಲಿದ್ದರೆ, ಒಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಿನಿವ್ಯಾನ್ ಗಾಂಧಿನಗರದಿಂದ ದ್ವಾರಕಾಗೆ ತೆರಳುತ್ತಿತ್ತು ಮತ್ತು ಅಪಘಾತ ಸಂಭವಿಸಿದಾಗ ಅದರ ಗಮ್ಯಸ್ಥಾನದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ.
ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಲಿಯಾದವರನ್ನು ಹೆತಲ್‌ಬೆನ್ ಠಾಕೋರ್ (25), ತಾನ್ಯಾ (2), ರಿಯಾನ್ಸ್ (3), ವಿಷನ್ (7), ಪ್ರಿಯಾಂಶಿ (13), ಭಾವನಾಬೆನ್ ಠಾಕೋರ್ (35), ಮತ್ತು ಚಿರಾಗ್ ರಾಣಾಭಾಯ್ (25) ಎಂದು ಗುರುತಿಸಲಾಗಿದೆ. ಅವರಲ್ಲಿ ಆರು ಮಂದಿ ಗಾಂಧಿನಗರದ ಕಲೋಲ್‌ನವರಾಗಿದ್ದರೆ, ಒಬ್ಬರು ದ್ವಾರಕಾದವರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ