ಸೂರತ್: ಗುಜರಾತ್‌ನ ಸೂರತ್‌ನಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಮಯೂರ್ ತಾರಾಪರಾ ಎಂಬ 32 ವರ್ಷದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಡೈಮಂಡ್ ಫರ್ಮ್ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಇಷ್ಟವಿಲ್ಲದೆ ಹರಿತವಾದ ಚಾಕುವಿನಿಂದ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ. ಇದರಿಂದಾಗಿ ಅವರು ತನ್ನನ್ನು ಕೆಲಸದಲ್ಲಿರುವಂತೆ ಒತ್ತಾಯಿಸುವುದಿಲ್ಲ ಎಂಬ ಅಭಿಪ್ರಾಯ ಅವರದಾಗಿತ್ತು.
ವರಚಾ ಮಿನಿ ಬಜಾರ್‌ನಲ್ಲಿರುವ ಅನಭ್ ಜೆಮ್ಸ್ ಎಂಬ ಡೈಮಂಡ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತಾರಾಪರಾ ಅವರು ರಸ್ತೆಯ ಬದಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದು ತನ್ನ ಬೆರಳುಗಳನ್ನು ಕಳೆದುಕೊಂಡಿರುವುದಾಗಿ ಆರಂಭದಲ್ಲಿ ಹೇಳಿಕೊಂಡಿದ್ದರು. ಆದರೆ, ಸಂಪೂರ್ಣ ತನಿಖೆಯ ನಂತರ, ಸೂರತ್ ಕ್ರೈಂ ಬ್ರಾಂಚ್ ಈ ಗಾಯವು ಸ್ವಯಂ ಪ್ರೇರಿತವಾಗಿದೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ: ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿಲ್ಲವೆಂದು ಶುರುವಾದ ಮನೆ ಬಾಡಿಗೆದಾರರ ಜಗಳ ಕೊಲೆಯಲ್ಲಿ ಅಂತ್ಯ!
ಪೊಲೀಸರ ಪ್ರಕಾರ, ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ತಾರಾಪರಾ ಅವರಿಗೆ ಅಲ್ಲಿ ಕೆಲಸ ಮುಂದುವರಿಸಲು ಇಷ್ಟವಿರಲಿಲ್ಲ. ಈ ಬಗ್ಗೆ ಸಂಬಂಧಿಕರಾದ ತಮ್ಮ ಬಾಸ್ಗೆ ತಿಳಿಸಲು ಹೆಣಗಾಡುತ್ತಿದ್ದರು. ಅದರಿಂದ ತಪ್ಪಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ಅವರು ಕೆಲಸಕ್ಕೆ ಅನರ್ಹನಾಗಲು ತನ್ನ ಬೆರಳುಗಳನ್ನು ಕತ್ತರಿಸಿಕೊಳ್ಳಲು ನಿರ್ಧರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ