10 ಐಫೋನ್ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ಗೆ ನೀಡಲಾಗಿತ್ತು. ಐಫೋನ್(iPhone) ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು. ಅಸಲಿ ಐಫೋನ್ ಬದಲಿಗೆ ನಕಲಿ ಐಫೋನ್ಗಳನ್ನು ಡೆಲಿವರಿ ಮಾಡಿದ್ದ. ಇತ್ತ ಕಂಪನಿಯ ಬಳಿ ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಐಫೋನ್ ಬಾಕ್ಸ್ಗಳನ್ನು ಕಂಪನಿಗೆ ಹಿಂದಿರುಗಿಸಿದ್ದ, ಬಳಿಕ ಅದರಲ್ಲಿರುವುದು ಕೂಡ ನಕಲಿ ಐಫೋನ್ಗಳು ಎಂಬುದು ಗೊತ್ತಾಗಿದೆ.
ಅಸಲಿಗೆ ನಡೆದದ್ದೇನು?
ಡೆಲಿವರಿ ಬಾಯ್ ಓರ್ವನ ಮೇಲೆ 10 ಐಫೋನ್ಗಳನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ಮಾರ್ಚ್ 27 ರಂದು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ 10 ಐಫೋನ್ಗಳು ಮತ್ತು ಏರ್ಪಾಡ್ಗಳನ್ನು ಒಳಗೊಂಡಿರುವ ಪಾರ್ಸೆಲ್ ಒಂದನ್ನು ಡೆಲಿವರಿ ಮಾಡಲು ತೆರಳಿದ್ದರು.
ರಾತ್ರಿ ಹತ್ತು ಗಂಟೆಗೆ ಲಲಿತ್ ಸಹೋದರ ಮನೋಜ್ ತನ್ವಾರ್ ಅವರು ಮೊಬೈಲ್ಗಳನ್ನು ವಾಪಸ್ ನೀಡಿ ಗ್ರಾಹಕರ ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗಾಗಿ ಫೋನ್ಗಳು ವಾಪಸ್ ಬಂದಿವೆ ಎಂದು ಸುಳ್ಳು ಹೇಳಿದ್ದ. ಅಸಲಿಗೆ ಗ್ರಾಹಕರಿಗೆ ಕೊಟ್ಟಿದ್ದು ಹಾಗೂ ಕಂಪನಿಗೆ ಮರಳಿಸಿದ್ದು ಎರಡೂ ಕೂಡ ನಕಲಿಯಾಗಿತ್ತು ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ ಮೇಲೆ ಇಡಿ ದಾಳಿ
ಅತ್ತ ಪಾರ್ಸೆಲ್ ಸ್ವೀಕರಿಸಿದ್ದ ಗ್ರಾಹಕರು ಕೂಡ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ್ದರು. ಲಲಿತ್ ವಿರುದ್ಧ ಸೆಕ್ಷನ್ 420 , 408 ಅಡಿಯಲ್ಲಿ ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ