ಬಚ್ಚಲು ಮನೆಯಲ್ಲಿ ಸುರಂಗ ಕೊರೆದು ಆಪಲ್ ಸ್ಟೋರ್‌ಗೆ ನುಗ್ಗಿದ ಕಳ್ಳರು 4.10 ಕೋಟಿ ರೂ ಮೌಲ್ಯದ 436 ಐಫೋನ್‌ಗಳನ್ನು ಕದ್ದರು!
ಬಹುತೇಕ Apple ಸ್ಟೋರ್‌ಗಳು ತಮ್ಮದೇ ಆದ ಭದ್ರತಾ ಸಿಬ್ಬಂದಿಯನ್ನು ಹೊಂದಿರುವುದಿಲ್ಲ. ಅವರು ತಮ್ಮ ಶಾಪ್ ಅನ್ನು ಹಾಕಿರುವ ಮಾಲ್ ನವರು ಒದಗಿಸುವ ಭದ್ರತೆಯಷ್ಟೇ ಸಾಕು ಎಂದು ಅದನ್ನೇ ಅವಲಂಬಿಸುತ್ತಾರೆ.
ಅಮೆರಿಕದ ಸಿಯಾಟಲ್‌ನಲ್ಲಿ ಆಪಲ್ ಐಫೋನ್ (Apple iPhones) ಗಳ ಭರ್ಜರಿ ದರೋಡೆ ನಡೆದಿದೆ. ಅಂಗಡಿಗೆ (Apple store) ಹಾಕಲಾಗಿದ್ದ ಅತ್ಯಂತ ಖಡಕ್ ಭದ್ರತಾ ವ್ಯವಸ್ಥೆಯನ್ನು ತಪ್ಪಿಸಲು, ಜಾಣಗಳ್ಳರು ಮೊದಲು ನೆರೆಯ ಕಾಫಿ ಕೆಫೆಗೆ ನುಗ್ಗಿದ್ದಾರೆ. ಇದೀಗ ಕಳ್ಳತನ ಪ್ರಕರಣದ ನಂತರ ಅಂಗಡಿಯ ಬೀಗಗಳನ್ನು ಬದಲಾಯಿಸಲು ಕಾಫಿ ಅಂಗಡಿ ಮಾಲೀಕರು ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮನಿ ಹೀಸ್ಟ್ ಸಿನಿಮಾ ಕಥಾವಸ್ತುವನ್ನು ಹೀಗೆ ಸೃಜನಾತ್ಮಕಗೊಳಿಸಲು ಸಾಧ್ಯವಾ, ವಾಸ್ತವದಲ್ಲಿ ಅದೇ ರೀತಿಯ ಕಳ್ಳತನಗಳು ಸಂಭವಿಸುತ್ತವಾ ಎಂದು ನೀವು ಯೋಚಿಸುತ್ತಿರುವಾಗ, ಆ ಹಾಲಿವುಡ್ ಸಿನಿಮಾ ಮಾದರಿಯಾಗಿಟ್ಟುಕೊಂಡು ಅಮೆರಿಕದಲ್ಲಿರುವ ಆಪಲ್ ಸ್ಟೋರ್‌ನಲ್ಲಿ ಇಂತಹುದೇ ದರೋಡೆ ನಡೆದಿದೆ. ‘ಓಶಿಯನ್ಸ್ ಇಲೆವೆನ್’ ಸಿನಿಮಾದಿಂದ ಎತ್ತಬಹುದಾದ ದೃಶ್ಯದಲ್ಲಿ, ಕಳ್ಳರು ನೆರೆಯ ಸ್ನಾನಗೃಹದ ಮೂಲಕ ಅಂಗಡಿಯೊಳಗೆ ಸುರಂಗ ಮಾರ್ಗದಲ್ಲಿ (Tunnel) ಪ್ರವೇಶಿಸಿ, 4.10 ಕೋಟಿ ರೂಪಾಯಿ ಮೌಲ್ಯದ 436 ಐಫೋನ್‌ಗಳನ್ನು ದೋಚಿದ್ದಾರೆ.
ಸಿಯಾಟಲ್‌ನ ಸ್ಥಳೀಯ ಸುದ್ದಿವಾಹಿನಿ, ಕಿಂಗ್ 5 ನ್ಯೂಸ್ ಪ್ರಕಾರ ಕಳ್ಳರು ಸಿಯಾಟಲ್ ಕಾಫಿ ಬಾರ್‌ಗೆ ಮೊದಲು ನುಗ್ಗಿದ್ದಾರೆ. ಅಲ್ಲಿಂದ ಮುಂದಕ್ಕೆ ಆಪಲ್ ಸ್ಟೋರ್‌ನ ಬ್ಯಾಕ್ ರೂಮ್‌ಗೆ (Bathroom) ಪ್ರವೇಶ ಪಡೆಯಲು ಸ್ನಾನ ಗೃಹದ ಗೋಡೆಯಲ್ಲಿ ರಂಧ್ರವನ್ನು ಕೊರೆದಿದ್ದಾರೆ ಎಂದು ವರದಿ ಮಾಡಿದೆ. ಕಳ್ಳರು ಆಪಲ್ ಸ್ಟೋರ್‌ನ ಭದ್ರತಾ ವ್ಯವಸ್ಥೆಯನ್ನು ಬೈಪಾಸ್ ಮಾಡಲು, ಪಕ್ಕದ ಕಾಫಿ ಶಾಪ್ ಬಳಸಿದ್ದಾರೆ ಮತ್ತು ಸುಮಾರು 500,000 ಡಾಲರ್ ಅಂದರೆ ಸುಮಾರು 4.10 ಕೋಟಿ ರೂ. ಮೌಲ್ಯದ 436 ಐಫೋನ್‌ಗಳನ್ನು ಕದ್ದಿದ್ದಾರೆ.
Good morning Twitter fans! Yesterday was a weird day…
1. Two men broke into one of our retail locations. Why? To cut a hole in our bathroom wall to access the Apple Store next door and steal $500k worth of Iphones?
2. Later that night on the way to the grocery store my wife… pic.twitter.com/DcUld6ULEd
— Mike Atkinson (@coffeemikeatkin) April 4, 2023
ಎರಿಕ್ ಮಾರ್ಕ್ಸ್, ಅಂಗಡಿಯ ಪ್ರಾದೇಶಿಕ ಚಿಲ್ಲರೆ ವ್ಯವಸ್ಥಾಪಕ ಅವರು ಘಟನೆಯ ನಂತರ ಬೆಳಿಗ್ಗೆ ಕರೆ ಸ್ವೀಕರಿಸಿದರು. ಅನಿರೀಕ್ಷಿತವಾದ ಪೊಲೀಸ್ ಕರೆ ಅದಾಗಿತ್ತು. ನಿಮ್ಮ ಅಂಗಡಿಯನ್ನು ಬಳಸಿಕೊಂಡು, ಪಕ್ಕದ ಆಪಲ್ ಸ್ಟೋರ್‌ಗೆ ಪ್ರವೇಶಿಸಿದ ಕಳ್ಳರು, ಆಪಲ್ ಫೋನ್ಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಆಪಲ್ ಸ್ಟೋರ್‌ನ ಬಾತ್ ರೂಮ್‌ನಲ್ಲಿ ಕಳ್ಳರು ಸೃಷ್ಟಿಸಿದ ಸುರಂಗದ ಚಿತ್ರದೊಂದಿಗೆ ಕಾಫಿ ಶಾಪ್‌ನ ಸಿಇಒ -ಮೈಕ್ ಅಟ್ಕಿನ್ಸನ್ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ “ಇಬ್ಬರು ಕಳ್ಳರು ನಮ್ಮ ಅಂಗಡಿಗೆ ಕನ್ನ ಹಾಕಿ ನುಗ್ಗಿದ್ದಾರೆ. ಏಕೆ ಅಂದರೆ ನಮ್ಮಲ್ಲಿ ರಂಧ್ರವನ್ನು ಕೊರೆದು ಪಕ್ಕದ ಆಪಲ್ ಶಾಪ್‌ನ ಬಾತ್ ರೂಮ್ ಗೋಡೆ ಕೊರೆದು ಆಪಲ್ ಸ್ಟೋರ್ ಅನ್ನು ಪ್ರವೇಶಿಸಿದ್ದಾರೆ. ಮತ್ತು ನಾಲ್ಕಾರು ಕೋಟಿ ರೂಪಾಯಿ ಮೌಲ್ಯದ ಐಫೋನ್‌ಗಳನ್ನು ಕದ್ದಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅದಾದ ಮೇಲೆ ಸಿಯಾಟಲ್ ಕಾಫಿ ಬಾರ್ ತಮ್ಮ ಬೀಗಗಳನ್ನು ಬದಲಿಸಲು ಸುಮಾರು 900 ಡಾಲರ್ ಖರ್ಚು ಮಾಡಬೇಕಾಯಿತು. ಇನ್ನು ಮತ್ತು ಬಾತ್ ರೂಮ್ ರಿಪೇರಿಗಾಗಿಯೂ ಅಷ್ಟೇ ಮೊತ್ತದ ಹಣ ಖರ್ಚು ಆಗುವ ನಿರೀಕ್ಷೆಯಿದೆ. ಪೊಲೀಸರು ಅಪರಾಧದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಕಳ್ಳತನದಲ್ಲಿ ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಸಾಮಾನ್ಯವಾಗಿ ಕಳ್ಳರು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಕದಿಯಲು ಬ್ಯಾಂಕ್‌ಗಳು, ಆಭರಣ ಅಂಗಡಿಗಳು ಮತ್ತು ಇತರ ಸ್ಥಳಗಳನ್ನು ಲೂಟಿ ಮಾಡುತ್ತಾರೆ. ಆದರೆ, Apple ಉತ್ಪನ್ನಗಳನ್ನೂ ಕದಿಯಲು ಸಹ ಕಳ್ಳರು ಸಿದ್ಧವಾಗಿದ್ದಾರೆ. ವಿಶೇಷವಾಗಿ $ 699 ರಿಂದ ಪ್ರಾರಂಭವಾಗುವ iPhone 14, ಈ ಗ್ಯಾಜೆಟ್‌ಗಳು ಚಿನ್ನದ ಬೆಲೆಯಲ್ಲಿ ಮಾರಾಟ ಆಗುವಂತಹುದು. ಮತ್ತು ಬ್ಲ್ಯಾಕ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.
ಕಳ್ಳರು ಸಾಮಾನ್ಯವಾಗಿ ಆಪಲ್ ಸ್ಟೋರ್‌ಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ. ಏಕೆಂದರೆ ಮಾಲ್ಗಳಲ್ಲಿರುವ ಪ್ರದರ್ಶನದ ಮಳಿಗೆಯಲ್ಲಿ ಅನೇಕ ಉತ್ಪನ್ನಗಳು ಲಭ್ಯವಿದ್ದು, ಸುಲಭವಾಗಿ ಪ್ರವೇಶ ಪಡೆಯಬಹುದು ಎಂಬ ಲೆಕ್ಕಾಚಾರವಿದೆ. ಅಲ್ಲದೆ, ಬಹುತೇಕ Apple ಸ್ಟೋರ್‌ಗಳು ತಮ್ಮದೇ ಆದ ಭದ್ರತಾ ಸಿಬ್ಬಂದಿಯನ್ನು ಹೊಂದಿರುವುದಿಲ್ಲ. ಅವರು ತಮ್ಮ ಶಾಪ್ ಅನ್ನು ಹಾಕಿರುವ ಮಾಲ್ ನವರು ಒದಗಿಸುವ ಭದ್ರತೆಯಷ್ಟೇ ಸಾಕು ಎಂದು ಅದನ್ನೇ ಅವಲಂಬಿಸುತ್ತಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ