New Election Commissioners: ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ನೇಮಕ

|

Updated on: Mar 14, 2024 | 2:35 PM

ಚುನಾವಣಾ ಆಯೋಗವು ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ಅವರನ್ನು ಚುನಾವಣಾ ಆಯೋಗದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ.

New Election Commissioners: ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ನೇಮಕ
ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು
Follow us on

ದೆಹಲಿ, ಮಾ.14: ಚುನಾವಣಾ ಆಯೋಗವು ಜ್ಞಾನೇಶ್ ಕುಮಾರ್ (Gyanesh Kumar) ಮತ್ತು ಸುಖಬೀರ್ ಸಂಧು (Sukhbir Sandhu) ಅವರನ್ನು ಚುನಾವಣಾ ಆಯೋಗದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.ಸಮಿತಿಯಲ್ಲಿ ವಿರೋಧ ಪಕ್ಷದ ಸದಸ್ಯರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಚೌಧರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 212 ಅಧಿಕಾರಿಗಳ ಹೆಸರನ್ನು ಈ ಸಮಿತಿ ತಿಳಿಸಿತ್ತು. ಅದರಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗಿದೆ, ಒಬ್ಬರು ಕೇರಳದ ನಿವೃತ್ತ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್, ಇನ್ನೊಬ್ಬರು ಪಂಜಾಬ್​​ ಸುಖಬೀರ್ ಸಿಂಗ್ ಸಂಧು ಎಂದು ಹೇಳಿದ್ದಾರೆ.

ಇನ್ನು ಸಮಿತಿಯ ಬಗ್ಗೆ ವಿರೋಧ ಪಕ್ಷದ ಸದಸ್ಯರಾಗಿರುವ ಅಧೀರ್ ರಂಜನ್ ಚೌಧರಿ ಅವರು ಅಸಮಾಧನ ಹೊರಹಾಕಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದರು, ಶಾರ್ಟ್-ಲಿಸ್ಟ್ ಮಾಡಲಾದ ಅಧಿಕಾರಿಗಳ ಹೆಸರುಗಳು ತನಗೆ ಮುಂಚಿತವಾಗಿ ಲಭ್ಯವಾಗಲಿಲ್ಲ ಎಂದು ಆರೋಪಿಸಿದ್ದಾರೆ. ಈ ಸಮಿತಿಯಲ್ಲಿ ಸರ್ಕಾರದ ಸದಸ್ಯರೇ ಹೆಚ್ಚಾಗಿದ್ದಾರೆ. ಈ ಹಿಂದೆ, ಸರ್ಕಾರ ನನಗೆ 212 ಹೆಸರುಗಳನ್ನು ನೀಡಿತ್ತು. ಆದರೆ ನೇಮಕಾತಿಗೆ 10 ನಿಮಿಷಗಳ ಮೊದಲು ಕೇವಲ ಆರು ಹೆಸರುಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು ತಕ್ಕ ಸಮಯದಲ್ಲಿ ಬಹಿರಂಗಪಡಿಸುತ್ತೇವೆ: ಮುಖ್ಯ ಚುನಾವಣಾ ಆಯುಕ್ತ

ಇನ್ನು ಈ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಇಲ್ಲ. ಸಿಜೆಐ ಮಧ್ಯಪ್ರವೇಶಿಸದಂತೆ ಸರ್ಕಾರವು ಅಂತಹ ಕಾನೂನನ್ನು ಮಾಡಿದೆ. ಕೇಂದ್ರ ಸರ್ಕಾರವು ಅವರಿಗೆ ಯಾರು ಬೇಕು ಅವರ ಹೆಸರನ್ನು ಆಯ್ಕೆ ಮಾಡಬಹುದು. ಇದು ನಿಯಂತ್ರಕ ಎಂದು ನಾನು ಹೇಳುತ್ತಿಲ್ಲ, ಆದರೆ ಅನುಸರಿಸುತ್ತಿರುವ ಕಾರ್ಯವಿಧಾನದಲ್ಲಿ ಲೋಪ ಇದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Thu, 14 March 24