Hajj Pilgrimage: ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಹೆಚ್ಚುವರಿ ಶುಲ್ಕವಿಲ್ಲದೆ 50 ಸಾವಿರ ರೂ.ಗೆ ಯಾತ್ರೆ

| Updated By: ಆಯೇಷಾ ಬಾನು

Updated on: Feb 07, 2023 | 8:36 AM

ಈ ವರ್ಷ ಭಾರತದಿಂದ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ವರ್ಷ ಹಜ್ ಯಾತ್ರೆ ವೆಚ್ಚ ಕಡಿಮೆಯಾಗಲಿದೆ.

Hajj Pilgrimage: ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಹೆಚ್ಚುವರಿ ಶುಲ್ಕವಿಲ್ಲದೆ 50 ಸಾವಿರ ರೂ.ಗೆ ಯಾತ್ರೆ
ಕಾಬಾ
Follow us on

ದೆಹಲಿ: ಇಸ್ಲಾಂ (Islam) ಧರ್ಮದಲ್ಲಿ ಹಜ್​ (Hajj) ಯಾತ್ರೆ ಮಾಡುವುದಕ್ಕೇ ಅದರದೇ ಆದ ಮಹತ್ವವಿದೆ. ಹಿಂದೂಗಳು ಕಾಶಿ ಯಾತ್ರೆ(Kashi Yatre)ಯನ್ನು ಯಾವ ರೀತಿ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೋ ಅದೇ ರೀತಿ ಅನೇಕ ನಿಯಮಗಳನ್ನನುಸರಿಸಿ ಮುಸ್ಲಿಮರು ಹಜ್ ಯಾತ್ರೆ ಮಾಡುತ್ತಾರೆ. ಸದ್ಯ ಈ ವರ್ಷ ಭಾರತದಿಂದ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ವರ್ಷ ಹಜ್ ಯಾತ್ರೆ ವೆಚ್ಚ ಕಡಿಮೆಯಾಗಲಿದೆ.

ಹಜ್ ಯಾತ್ರೆ ಮಾಡಲು ಸಾಮಾನ್ಯವಾಗಿ3 ಲಕ್ಷದಿಂದ 3.5 ಲಕ್ಷದವರೆಗೆ ಖರ್ಚಾಗುತ್ತದೆ. ಆದ್ರೆ ಈ ಬಾರಿ ಹಜ್‌ ಯಾತ್ರೆಯ ದರವನ್ನು ಪ್ರತಿವ್ಯಕ್ತಿಗೆ 50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ಹಜ್‌ ಯಾತ್ರೆಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಕಳೆದ ವರ್ಷ 400 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸೋಮವಾರ ಹೊಸ ಹಜ್ ನೀತಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: Hajj: ಹಜ್ ಯಾತ್ರೆಗೆ ತೆರಳುವ ಮಹಿಳೆಯರಿಗೆ ಇನ್ನು ಪುರುಷರ ರಕ್ಷಣೆ ಬೇಕಾಗಿಲ್ಲ; ಸೌದಿ ಸರ್ಕಾರ ಮಹತ್ವದ ಆದೇಶ

ಈ ವರ್ಷ ಹಜ್‌ಗಾಗಿ ಭಾರತಕ್ಕೆ ಸುಮಾರು 1. 75 ಲಕ್ಷ ಕೋಟಾವನ್ನು ನೀಡಲಾಗಿದೆ ಮತ್ತು ಹೊಸ ಹಜ್ ನೀತಿಯ ಅಡಿಯಲ್ಲಿ, ಒಟ್ಟು ಕೋಟಾದ 90% ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ ಮತ್ತು ಉಳಿದವು ಖಾಸಗಿ ನಿರ್ವಾಹಕರಿಗೆ ಹಂಚಲಾಗುತ್ತದೆ. ಈ ವರ್ಷ ಹಜ್‌ಗಾಗಿ ಸರ್ಕಾರ ಇನ್ನೂ ಅರ್ಜಿಗಳನ್ನು ತೆರೆದಿಲ್ಲ.

“ಈ ಬಾರಿ ಹಜ್‌ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲಾ ಹಜ್‌ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಬ್ಯಾಗ್‌, ಸೂಟ್‌ಕೇಸ್‌, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಆದ್ರೆ ಹಜ್‌ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ತಮ್ಮದೇ ಖರ್ಚಿನಲ್ಲೇ ಭರಿಸಬೇಕು. ಹೊಸ ನೀತಿಯ ಅಡಿಯಲ್ಲಿ, ಹಜ್‌ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?

ಈ ಬಾರಿ ಸುಮಾರು 1.75 ಲಕ್ಷ ಜನರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಅವರಲ್ಲಿ ಶೇಕಡ 80ರಷ್ಟು ಜನರು ಹಜ್ ಕಮಿಟಿ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ. ಸುಮಾರು ಶೇಕಡ 20ರಷ್ಟು ಜನರು ಖಾಸಗಿ ಪ್ರವಾಸಿ ಆಪರೇಟರ್‌ಗಳ ನೆರವಿನಿಂದ ಯಾತ್ರೆ ಕೈಗೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. “ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಿದ ತಪಾಸಣೆಯನ್ನು ಪರಿಗಣಿಸಲಾಗಿದೆ. ಈ ಕುರಿತು ಅಲ್ಪಸಂಖ್ಯಾತರ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದೆ. ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್ ಕಮಿಟಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಇನ್ನು ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್‌ ಕೋಟಾದಲ್ಲಿ 1,75,025 ಜನರಿಗೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ