Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?

ಈದ್-ಉಲ್-ಅಧಾ ಅಥವಾ ಬಕ್ರಿದ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಇಸ್ಲಾಮಿಕ್ ತಿಂಗಳ ಜುಲ್ ಹಿಜ್ಜಾದ ಹತ್ತನೇ ದಿನದಂದು, ಅರಾಫಾ ದಿನ ಅಂದರೆ ಧು ಅಲ್-ಹಿಜ್ಜಾದ ಒಂಬತ್ತನೇ ದಿನವನ್ನು ಪರಿಗಣಿಸಲಾಗುತ್ತದೆ. ಇದು ಪಶ್ಚಾತ್ತಾಪದ ದಿನವಾಗಿರುವುದರಿಂದ ಪ್ರಮುಖ ದಿನ.

Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?
ಹಜ್
Follow us
| Updated By: ಆಯೇಷಾ ಬಾನು

Updated on: Jul 08, 2022 | 7:10 AM

ಇಸ್ಲಾಂ (Islam) ಧರ್ಮದಲ್ಲಿ ಹಜ್​ (Hajj) ಯಾತ್ರೆ ಮಾಡುವುದಕ್ಕೇ ಅದರದೇ ಆದ ಮಹತ್ವವಿದೆ. ಹಜ್ ಯಾತ್ರೆ ಮಾಡಿದವರನ್ನು ಪುಣ್ಯವಂತರು ಮತ್ತು ಮಹಾ ಪುರುಷರಂತೆ ಕಾಣಲಾಗುತ್ತೆ. ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮೆಕ್ಕಾ-ಮದೀನಾಗೆ(Makka Madina) ಹೋಗಿ ಬರಬೇಕೆಂದುಕೊಳ್ಳುತ್ತಾನೆ. ಹಜ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಆದ್ರೆ ಹಜ್ ಯಾತ್ರೆಗೆ ಹೋಗುವುದು ಅಷ್ಟು ಸುಲಭದ ಮಾತಲ್ಲ. ಕೇವಲ ಹಣವೊಂದಿದ್ದರೆ ಹಜ್​ ಯಾತ್ರೆ ಮುಗಿಸಬಹುದು ಎಂದುಕೊಂಡರೆ ಅದು ತಪ್ಪು ಕಲ್ಪನೆ. ಇದಕ್ಕೆ ಕೆಲವು ನಿರ್ಬಂಧನೆಗಳು, ನಿಯಮಗಳಿವೆ. ಬನ್ನಿ ಇಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ಹೋಗಲು ಮುಸ್ಲಿಮರು ಪಾಲಿಸಬೇಕಾದ ಹಾಗೂ ಈ ತೀರ್ಥಯಾತ್ರೆಯ ದಿನಾಂಕ, ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಸಲಾಗಿದೆ.

ವಿದೇಶದಿಂದ 850,000 ಯಾತ್ರಿಕರು ಸೇರಿದಂತೆ ಒಂದು ಮಿಲಿಯನ್ ಜನರು ಈ ವರ್ಷ ಹಜ್​ ಯಾತ್ರೆಯಲ್ಲಿ ಭಾಗವಹಿಸಲು ಅನುಮತಿ ಸಿಕ್ಕಿದೆ. ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಹಜ್ ಯಾತ್ರೆ ಮೊಟಕುಗೊಳಿಸಲಾಗಿತ್ತು. ಸದ್ಯ ಈ ವರ್ಷ ಹಜ್​ ಯಾತ್ರೆಗೆ ಅನುಮತಿ ಸಿಕ್ಕಿದೆ. ಸೌದಿ ಅರೇಬಿಯಾ ಸರ್ಕಾರ ಈ ಬಾರಿ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಿದ್ದು 1 ಮಿಲಿಯನ್ ಯಾತ್ರಾರ್ಥಿಗಳಿಗೆ ಅವಕಾಶ ನೀಡಿದೆ. ಪವಿತ್ರ ನಗರವಾದ ಮೆಕ್ಕಾದಲ್ಲಿರುವ ದೇವರ ಮನೆ ಎಂದೇ ಪರಿಗಣಿಸಲಾದ ಕಾಬಾಗೆ ಮುಸ್ಲಿಂ ತೀರ್ಥಯಾತ್ರೆಗಳು ಭೇಟಿ ನೀಡಿ ತಮ್ಮ ಪಾಪವನ್ನು ಕಳೆದುಕೊಳ್ಳುತ್ತಾರೆ. ಇಸ್ಲಾಂ ಧರ್ಮದ ಐದು ಮೂಲ ಸ್ತಂಭಗಳಲ್ಲಿ ಇದು ಒಂದಾಗಿದೆ, ಹಾಗೆಯೇ ಧಾರ್ಮಿಕ ಕರ್ತವ್ಯವಾಗಿದೆ, ಪುರುಷ ಅಥವಾ ಮಹಿಳೆಯಾಗಿರಲಿ, ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅದನ್ನು ನಿಭಾಯಿಸಬೇಕು. ಇದು ಆರೋಗ್ಯವಂತರಿಗೆ ಮಾತ್ರ ಕಡ್ಡಾಯವಾಗಿದೆ. ಆರ್ಥಿಕವಾಗಿ ಮತ್ತು ದೈಹಿಕವಾಗಿ ಯಾತ್ರೆಯನ್ನು ಮಾಡಬಲ್ಲವರು ಮಾತ್ರ ಯಾತ್ರೆಯನ್ನು ಮಾಡಬೇಕು.

ಇಲ್ಲಿ ಯಾತ್ರಿಗಳು ಸರಳವಾದ ಬಿಳಿ ಬಟ್ಟೆಗಳನ್ನು ಧರಿಸಿ ಆಚರಣೆಗಳನ್ನು ಪೂರ್ಣಗೊಳಿಸುತ್ತಾರೆ. ಯಾರು ಎಷ್ಟೇ ಶ್ರೀಮಂತರಾದರೂ, ರಾಜಕಾರಣಿ, ಸಿನಿಮಾ ನಟರು, ಬಡವರಾದ್ರೂ ಇಲ್ಲಿ ಎಲ್ಲರೂ ಒಂದೇ ರೀತಿಯ ಸರಳ ಬಿಳಿ ಬಣ್ಣದ ಬಟ್ಟೆ ಧರಿಸಿ ದೇವರ ಸಮ್ಮುಖದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆಯಲ್ಲಿ ದೇವರರಿಗೆ ಶಿರ ಭಾಗುತ್ತಾರೆ. ಅರಾಫಾ ದಿನವು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪವಿತ್ರ ದಿನವಾಗಿದೆ ಮತ್ತು ಇದನ್ನು ಹಜ್ ತೀರ್ಥಯಾತ್ರೆಯ ಎರಡನೇ ದಿನದಂದು ಆಚರಿಸಲಾಗುತ್ತದೆ.

ಈದ್-ಉಲ್-ಅಧಾ ಅಥವಾ ಬಕ್ರಿದ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಇಸ್ಲಾಮಿಕ್ ತಿಂಗಳ ಜುಲ್ ಹಿಜ್ಜಾದ ಹತ್ತನೇ ದಿನದಂದು, ಅರಾಫಾ ದಿನ ಅಂದರೆ ಧು ಅಲ್-ಹಿಜ್ಜಾದ ಒಂಬತ್ತನೇ ದಿನವನ್ನು ಪರಿಗಣಿಸಲಾಗುತ್ತದೆ. ಇದು ಪಶ್ಚಾತ್ತಾಪದ ದಿನವಾಗಿರುವುದರಿಂದ ಪ್ರಮುಖ ದಿನ.

ದಿನಾಂಕ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 12ನೇ ತಿಂಗಳಾದ ಅಲ್-ಹಿಜ್ಜಾದ 8ನೇ ದಿನದಂದು ಹಜ್ ಪ್ರಾರಂಭವಾಗುತ್ತದೆ ಮತ್ತು 12 ನೇ ದಿನದಂದು ಕೊನೆಗೊಳ್ಳುತ್ತದೆ. ಈ ವರ್ಷ, ಹಜ್ ಗುರುವಾರ, 7 ಜುಲೈ, 2022 ರ ಸಂಜೆ ಪ್ರಾರಂಭವಾಗುತ್ತದೆ ಮತ್ತು ಮಂಗಳವಾರ, 12 ಜುಲೈ, 2022 ರ ಸಂಜೆ ಕೊನೆಗೊಳ್ಳುತ್ತದೆ.

ಹಜ್ ಆಚರಣೆ ಹೇಗೆ? ಹಜ್ ಯಾತ್ರೆಯು ಪ್ರವಾದಿ ಮೊಹಮ್ಮದರ ಜೀವನಕ್ಕೆ ಸಂಬಂಧಿಸಿದೆ. ಮೆಕ್ಕಾ ಯಾತ್ರೆಯ ಆಚರಣೆ ಕ್ರೈಸ್ತಪೂರ್ವ 2000ರ ಅಬ್ರಹಾಂ ಕಾಲದಲ್ಲಿತ್ತೆಂದು ಅನೇಕ ಮುಸ್ಲಿಮರ ನಂಬಿಕೆ. ಈ ಯಾತ್ರೆಗಾಗಿ ಮೆಕ್ಕಾದಲ್ಲಿ ಸೇರುವ ಸಾವಿರಾರು ಮುಸ್ಲಿಮರು ಅನೇಕ ತರದ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿಯೊಬ್ಬ ಯಾತ್ರಿಯು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಕಾಬಾದ ಸುತ್ತ ಸುತ್ತುತ್ತಾರೆ. ಮೂಲೆಯಲ್ಲಿರುವ ಕಪ್ಪು ಕಲ್ಲಿಗೆ ಮುತ್ತಿಕ್ಕಿ ಅಲ್ ಸಾಫಾ ಮತ್ತು ಅಲ್ ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ, ಮುಂದಕ್ಕೆ ಚಲಿಸುತ್ತಾರೆ. ಝಾಮ್‌ಜಾಮ್ ಕೊಳದ ಪವಿತ್ರ ನೀರನ್ನು ಕುಡಿದು ಮೌಂಟ್ ಅರಾಫತ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮುಜ್ಡಾಲಿಫಾಗೆ ಕಲ್ಲುಗಳನ್ನು ಸಂಗ್ರಹಿಸುತ್ತಾರೆ. ಬಳಿಕ ಅದೇ ಕಲ್ಲಿನಿಮದ ಸೈತಾನನಿಗೆ ಕಲ್ಲು ತೂರುವ ಆಚರಣೆ ನಡೆಯುತ್ತದೆ. ಬಳಿಕ ಯಾತ್ರಿಗಳು ಕೇಶಮುಂಡನ ಮಾಡಿ, ಪ್ರಾಣಿ ಬಲಿ ನೀಡಿ ಈದ್ ಉಲ್ ಅದಾ ಹಬ್ಬವನ್ನು ಆಚರಿಸುವರು.

ತಾಜಾ ಸುದ್ದಿ