ನವದೆಹಲಿ: ಹರಿಯಾಣ ಚುನಾವಣಾ ಸೋಲಿನ ಬಗ್ಗೆ ಕಾಂಗ್ರೆಸ್ ತನ್ನ ಪರಿಶೀಲನಾ ಸಭೆ ನಡೆಸಿದೆ. ಈ ಕುರಿತು ಮಾತನಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಕಂಡುಹಿಡಿಯುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆಲ್ಲುವುದನ್ನು ದೇಶ ಮತ್ತು ಜಗತ್ತು ನೋಡುತ್ತಿದೆ. ಎಕ್ಸಿಟ್ ಪೋಲ್‌ಗಳಾಗಲಿ ಅಥವಾ ಮಾಧ್ಯಮಗಳಾಗಲಿ ಎಲ್ಲಿಯೂ ಸೋಲಿನ ಸುದ್ದಿ ಇರಲಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
“ಈ ಫಲಿತಾಂಶಗಳು ಆಘಾತಕಾರಿಯಾಗಿವೆ. ಈ ಫಲಿತಾಂಶದ ಕಾರಣ ತಿಳಿಯುವುದು ಮುಖ್ಯವಾಗಿದೆ. ನಾವು ಇವಿಎಂ ಯಂತ್ರದ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ. ಚುನಾವಣೆಯಲ್ಲಿ ಮೊದಲ ಬಾರಿಗೆ ಇಂತಹ ಪರಿಸ್ಥಿತಿಗಳು ಉದ್ಭವಿಸಿ ಫಲಿತಾಂಶಗಳು ವ್ಯತಿರಿಕ್ತವಾಗಿರುವುದನ್ನು ನಾವು ನೋಡುತ್ತಿದ್ದೇವೆ. ವಾಸ್ತವವಾಗಿ, ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಗೆಲ್ಲುತ್ತಿದೆ ಎಂದು ಹೇಳುತ್ತಿದ್ದರು. ಆದರೆ, ಅಂತಿಮವಾಗಿ ಫಲಿತಾಂಶವೇ ಬೇರೆಯಾಗಿತ್ತು. ಈಗಾಗಲೇ ಫಲಿತಾಂಶದ ಪೋಸ್ಟ್ ಮಾರ್ಟಂ ಮಾಡಿ ಆಗಿದೆ. ಅದರಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್ ಸೋಲು; ರಾಹುಲ್ ಗಾಂಧಿ ಮನೆಗೆ 1 ಕೆಜಿ ಜಿಲೇಬಿ ಕಳುಹಿಸಿದ ಬಿಜೆಪಿ
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮುಂಬರುವ ಚುನಾವಣೆಗಳ ಮೇಲೆ ಹರಿಯಾಣ ಚುನಾವಣಾ ಫಲಿತಾಂಶಗಳ ಯಾವುದೇ ಸಂಭವನೀಯ ಪರಿಣಾಮ ಇರುವುದಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಹರಿಯಾಣದಲ್ಲಿನ ಪರಿಸ್ಥಿತಿಯೇ ಬೇರೆ, ಆ ರಾಜ್ಯಗಳಲ್ಲಿನ ಆಡಳಿತ ಹೇಗಿದೆ, ಸಾರ್ವಜನಿಕರ ಭಾವನೆಗಳೇನು ಎಂಬುದೇ ಬೇರೆ. ಆದ್ದರಿಂದ, ಈ ಫಲಿತಾಂಶಗಳು ಅಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಹರಿಯಾಣ ಚುನಾವಣಾ ಫಲಿತಾಂಶಗಳ ಕುರಿತು ಕಾಂಗ್ರೆಸ್ ಪಕ್ಷದ ಪರಿಶೀಲನಾ ಸಭೆಯಲ್ಲಿ ಈ ಪೋಸ್ಟ್‌ಮಾರ್ಟಮ್ ಮಾಡಲಾಗಿದೆ ಎಂದು ಗೆಹ್ಲೋಟ್ ಹೇಳಿದರು. “ನಿನ್ನೆ ನಡೆದ ಸಭೆಯೊಂದರಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳು ಸೋಲು-ಗೆಲುವು ಮತ್ತು ರಾಜ್ಯದ ನಾಯಕರು ಆಳವಾಗಿ ಅಧ್ಯಯನ ಮಾಡಲು ಮತ್ತು ನಿಜವಾಗಿ ಏನಾಯಿತು ಎಂಬುದನ್ನು ನಿರ್ಣಯಿಸಲು ವೇದಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ನಿರ್ಧರಿಸಿದ್ದಾರೆ. ಇಡೀ ದೇಶವು ಕಾಂಗ್ರೆಸ್ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಕಾಂಗ್ರೆಸ್ ಗೆಲ್ಲುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಆದರೆ ದಿಢೀರ್ ಆಗಿ ಏನಾಯಿತು ಎಂಬುದಕ್ಕೆ ಮೂಲವನ್ನು ಹುಡುಕುವುದು ಅತ್ಯಗತ್ಯ. ಹರಿಯಾಣದಲ್ಲಿ ಈ ರೀತಿ ಏಕಾಯಿತು ಎಂದು ನಾವು ಮೂಲವನ್ನು ಹುಡುಕುತ್ತಿದ್ದೇವೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್ನಲ್ಲೂ ಹರಿಯಾಣದ ಫಲಿತಾಂಶ ಮರುಕಳಿಸಲಿದೆ; ಚಂದ್ರಬಾಬು ನಾಯ್ಡು ಭವಿಷ್ಯ
ಗುರುವಾರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆಘಾತಕಾರಿ ಸೋಲಿನ ಕುರಿತು ಗುರುವಾರ ಕಾಂಗ್ರೆಸ್ ವರಿಷ್ಠರು ಪರಿಶೀಲನಾ ಸಭೆ ನಡೆಸಿದರು. ಸೋಲಿನ ಕಾರಣಗಳನ್ನು ಕಂಡುಹಿಡಿಯಲು ಅದರ ಎಲ್ಲಾ ಅಭ್ಯರ್ಥಿಗಳೊಂದಿಗೆ ಮಾತನಾಡುವ ಸತ್ಯಶೋಧನಾ ತಂಡವನ್ನು ರಚಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಎಐಸಿಸಿ ಹಿರಿಯ ಚುನಾವಣಾ ವೀಕ್ಷಕರಾದ ಅಶೋಕ್ ಗೆಹ್ಲೋಟ್ ಮತ್ತು ಅಜಯ್ ಮಾಕನ್, ರಾಜ್ಯದ ಎಐಸಿಸಿ ಕಾರ್ಯದರ್ಶಿಗಳು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ