Farmer’s Protest | ಟಿಕ್ರಿ ಗಡಿಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹರ್ಯಾಣದ ರೈತನ ಶವ ಪತ್ತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 6:47 PM

Farmers' Protest ಮೃತ ರೈತ ಹರ್ಯಾಣದ ಜಿಂದ್ ಗ್ರಾಮದವರು ಎಂದು ಪೊಲೀಸರು ಹೇಳಿದ್ದು, ಶವದ ಬಳಿ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿದೆ.

Farmers Protest | ಟಿಕ್ರಿ ಗಡಿಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹರ್ಯಾಣದ ರೈತನ ಶವ ಪತ್ತೆ
ರೈತರ ಪ್ರತಿಭಟನೆ
Follow us on

ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಟಿಕ್ರಿಗಡಿಭಾಗದಲ್ಲಿ ರೈತರ ಪ್ರತಿಭಟನೆ ನಿರತರಾಗಿದ್ದು, ಪ್ರತಿಭಟನಾ ಸ್ಥಳದಿಂದ 2 ಕಿಮೀ ದೂರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರೈತನ ಶವ ಪತ್ತೆಯಾಗಿದೆ.

ಮೃತ ರೈತ ಹರ್ಯಾಣದ ಜಿಂದ್ ಗ್ರಾಮದವರು ಎಂದು ಪೊಲೀಸರು ಹೇಳಿದ್ದು, ಶವದ ಬಳಿ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿದೆ. ಜಿಂದ್ ಗ್ರಾಮದ 52ರ ಹರೆಯದ ರೈತ ಕರಮ್ ವೀರ್ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು ಎಂದು ಬಹದ್ದೂರ್ ಗಡ್ ಸಿಟಿ ಪೊಲೀಸ್ ಠಾಣೆಯ ಅಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.

ಪೊಲೀಸರ ಪ್ರಕಾರ ಮೃತದೇಹದ ಪಕ್ಕದಲ್ಲಿ ಕೈಬರಹದಲ್ಲಿ ಬರೆದ ಆತ್ಮಹತ್ಯಾ ಟಿಪ್ಪಣಿ ಪತ್ತೆಯಾಗಿದೆ. ಅದರಲ್ಲಿ ಪ್ರೀತಿಯ ರೈತ ಬಂಧುಗಳೇ ಮೋದಿ ಸರ್ಕಾರ ಪದೇಪದೆ ಗಡುವು ನೀಡುತ್ತಿದೆ. ಈ ಕೃಷಿ ಕಾಯ್ದೆಗಳನ್ನು ಸರ್ಕಾರ ಯಾವಾಗ ಹಿಂಪಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ಒಕ್ಕಣೆಯಿದೆ.

15 ದಿನಗಳ ಹಿಂದೆ ಟಿಕ್ರಿ ಗಡಿಭಾಗದಲ್ಲಿ ಹರ್ಯಾಣದ ರೈತರೊಬ್ಬರು ವಿಷ ಸೇವಿಸಿದ್ದರು. ಅವರನ್ನು ತಕ್ಷಣವೇ ದೆಹಲಿ ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಪಂಜಾಬ್ ನ ವಕೀಲರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕಿಂತ ಮುನ್ನ ಸಿಖ್ ಧರ್ಮಗುರು ಸಂತ ರಾಮ್ ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

Mia Khalifa: ಜಾಮೂನು, ಸಮೋಸಾ ತಿಂದು ರೈತರ ಪರವಾಗಿ ಮತ್ತೆ ಟ್ವೀಟ್​ ಮಾಡಿದ ಮಿಯಾ ಖಲೀಫಾ