
ಚಂಡೀಗಢ: ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಸಚಿವರು ಕಳೆದ ವಾರ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಪಡೆದಿದ್ದರು.
67 ವರ್ಷದ ಸಚಿವ ಅನಿಲ್ ವಿಜ್ಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿತ್ತು. ಎರಡನೇ ಡೋಸ್ ಅನ್ನು 28 ದಿನದ ಬಳಿಕ ನೀಡಲಾಗುತ್ತೆ. ಆದರೆ ಇದೀಗ, ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಸಚಿವರಿಗೆ ಸೋಂಕು ದೃಢವಾಗಿದೆ.
ಅಗತ್ಯ ಸೇವಕರು, ವಯಸ್ಸಾದವರಿಗೆ ಮೊದಲು ಕೊರೊನಾ ವೈರಸ್ ಲಸಿಕೆ- ಪ್ರಧಾನಿ ಮೋದಿ
Published On - 12:28 pm, Sat, 5 December 20