Hathras stampede: ಹಾಥರಸ್ ಕಾಲ್ತುಳಿತ; ಸತ್ಸಂಗ ‘ಸಂಘಟಕ’ ಮಧುಕರ್​​ಗೆ 14 ದಿನಗಳ ನ್ಯಾಯಾಂಗ ಬಂಧನ

ಮಧುಕರ್ ಜುಲೈ 2 ರಿಂದ ಪರಾರಿಯಾಗಿದ್ದರು. ಶುಕ್ರವಾರ ತಡರಾತ್ರಿ ಅವರನ್ನು ಬಂಧಿಸಲಾಗಿದೆ". ಬಾಬಾ ಅವರೊಂದಿಗಿನ ಅವರ ಸಂಪರ್ಕಗಳ ಬಗ್ಗೆ ಅವರನ್ನು ವಿವರವಾಗಿ ಪ್ರಶ್ನಿಸಲಾಗುವುದು ಮತ್ತು ಸಂಘಟನಾ ಸಮಿತಿಯ ಇತರ ಪ್ರಮುಖ ಸದಸ್ಯರ ಬಗ್ಗೆ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತದೆ ಎಂದು ಎಂದು ಹಾಥರಸ್​​ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

Hathras stampede: ಹಾಥರಸ್ ಕಾಲ್ತುಳಿತ; ಸತ್ಸಂಗ ‘ಸಂಘಟಕ’ ಮಧುಕರ್​​ಗೆ 14 ದಿನಗಳ ನ್ಯಾಯಾಂಗ ಬಂಧನ
ದೇವ್ ಪ್ರಕಾಶ್ ಮಧುಕರ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 06, 2024 | 7:15 PM

ದೆಹಲಿ ಜುಲೈ 06: 121 ಜನರ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ (Hathras stampede) ಪ್ರಕರಣದ ಆರೋಪಿ ದೇವಪ್ರಕಾಶ್ ಮಧುಕರ್​​ಗೆ (Dev Prakash Madhukar) ಉತ್ತರ ಪ್ರದೇಶದ (Uttar Pradesh)  ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಾಲ್ತುಳಿತದ ನಂತರ ದಾಖಲಾದ ಎಫ್‌ಐಆರ್‌ನಲ್ಲಿ ಪ್ರಮುಖ ಶಂಕಿತ ಎಂದು ಹೆಸರಿಸಲಾದ ಮಧುಕರ್‌ನನ್ನು ಬಂಧಿಸಲಾಗಿದೆ ಎಂದು ಹಾಥರಸ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಧುಕರ್ ಅವರು ಸ್ಥಳೀಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ನಿಂದ ಸತ್ಸಂಗಕ್ಕೆ ಅನುಮತಿ ಪಡೆದಿದ್ದರು.

“ಮಧುಕರ್ ಜುಲೈ 2 ರಿಂದ ಪರಾರಿಯಾಗಿದ್ದರು. ಶುಕ್ರವಾರ ತಡರಾತ್ರಿ ಅವರನ್ನು ಬಂಧಿಸಲಾಗಿದೆ”. ಬಾಬಾ ಅವರೊಂದಿಗಿನ ಅವರ ಸಂಪರ್ಕಗಳ ಬಗ್ಗೆ ಅವರನ್ನು ವಿವರವಾಗಿ ಪ್ರಶ್ನಿಸಲಾಗುವುದು ಮತ್ತು ಸಂಘಟನಾ ಸಮಿತಿಯ ಇತರ ಪ್ರಮುಖ ಸದಸ್ಯರ ಬಗ್ಗೆ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತದೆ ಎಂದು ಎಂದು ಹಾಥರಸ್​​ನ ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಹೇಳಿದ್ದಾರೆ. ಮಧುಕರ್ ಬಂಧನಕ್ಕೆ ಪೊಲೀಸರು ₹1 ಲಕ್ಷ ಬಹುಮಾನ ಘೋಷಿಸಿದ್ದರು.

ಆರೋಪಿಯನ್ನು ಕರೆದೊಯ್ಯುತ್ತಿರುವ ಪೊಲೀಸರು

ನಾರಾಯಣ ಸರ್ಕಾರ್ ಹರಿ ಅಥವಾ ಸೂರಜ್ ಪಾಲ್ ಸಿಂಗ್ ಎಂದೂ ಕರೆಯಲ್ಪಡುವ ಭೋಲೆ ಬಾಬಾನ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಮಧುಕರ್ ಮತ್ತು ಇತರ ನಿಕಟ ಸಹಾಯಕರು ಹಾಥರಸ್ ನಲ್ಲಿ ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ಮಧುಕರ್ ಅವರನ್ನು ಇತ್ತೀಚೆಗೆ ರಾಜಕೀಯ ಪಕ್ಷಗಳು ಸಂಪರ್ಕಿಸಿದ್ದವು: ಪೊಲೀಸರು

ಮಧುಕರ್ ಅವರನ್ನು ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ಸಂಪರ್ಕಿಸಿದ್ದವು ಎಂದು ಅಗರ್ವಾಲ್ ಹೇಳಿದ್ದಾರೆ. “ಅವರ ಹಣಕಾಸಿನ ವಹಿವಾಟುಗಳು, ಹಣ ಬರುವ ಮೂಲಗಳನ್ನು ಪರಿಶೀಲಿಸಲಾಗುತ್ತಿದೆ. ಕರೆ ವಿವರಗಳ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ” ಎಂದು ಅಗರ್ವಾಲ್ ಹೇಳಿದ್ದಾರೆ.

ಕಾಲ್ತುಳಿತ ಸಂಭವಿಸಿದ ‘ಸತ್ಸಂಗ’ದ ‘ಮುಖ್ಯ ಸೇವಾದಾರ’ ಮಧುಕರ್. ಘಟನೆಗೆ ಸಂಬಂಧಿಸಿದಂತೆ ಹಾಥರಸ್ ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಏಕೈಕ ಆರೋಪಿ.

ಇದನ್ನೂ ಓದಿ: ಹಾಥರಸ್ ಕಾಲ್ತುಳಿತ ದುರಂತಕ್ಕೆ ರಷ್ಯಾದ ವ್ಲಾಡಿಮಿರ್ ಪುಟಿನ್ ಸಂತಾಪ

ಭಾಗಿಯಾದವರನ್ನು ವಿಚಾರಣೆಗೊಳಪಡಿಸುತ್ತೇವೆ: ಎಸ್‌ಐಟಿ

ಜುಲೈ 2 ರಂದು 121 ಜನರು ಸಾವಿಗೀಡಾದ ಹಾಥರಸ್ ಕಾಲ್ತುಳಿತದ ಸ್ಥಳವನ್ನು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ನ್ಯಾಯಾಂಗ ತನಿಖಾ ಆಯೋಗ ಶನಿವಾರ ಪರಿಶೀಲಿಸಿತು. ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದ ಆಯೋಗದಲ್ಲಿ ಮಾಜಿ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಸಿಂಗ್ ಇದ್ದಾರೆ.

ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಆಯೋಗ ಪ್ರಶ್ನಿಸಲಿದೆ ಎಂದು ನ್ಯಾಯಮೂರ್ತಿ ಶ್ರೀವಾಸ್ತವ ಹೇಳಿದ್ದಾರೆ. “ನಾವು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಒಳಗೊಂಡಂತೆ ಸಂಪೂರ್ಣ ಸೈಟ್ ಅನ್ನು ಪರಿಶೀಲಿಸಿದ್ದೇವೆ. ನಾವು ಪ್ರಶ್ನಿಸಬೇಕಾದ ಎಲ್ಲರನ್ನು ನಾವು ಪ್ರಶ್ನಿಸುತ್ತೇವೆ. ಹೌದು, ನಾವು ಆದೇಶ ನೀಡಿರುವುದರಿಂದ ನಾವು 2 ತಿಂಗಳೊಳಗೆ ನಮ್ಮ ವರದಿಯನ್ನು ಸಲ್ಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ