ಎಚ್‌ಡಿಎಫ್‌ಸಿ ನೆಟ್, ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ; ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ ಗ್ರಾಹಕರು
ಇಂದು ಕೂಡ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ತುಂಬ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇದು ಹಣಕಾಸು ವರ್ಷದ ಅಂತ್ಯ. ಈಗಲೇ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕೈಕೊಟ್ಟಿವೆ. ವ್ಯವಹಾರಕ್ಕೆ ತುಂಬ ತೊಡಕಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.
ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ಮಂಗಳವಾರ ವ್ಯತ್ಯಯವಾಗಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಟ್ವೀಟ್ ಮಾಡಿ, ನಮ್ಮ ಹಲವು ಗ್ರಾಹಕರಿಗೆ ಇಂದು ನೆಟ್ ಬ್ಯಾಂಕ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಆ್ಯಪ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ನಮಗೆ ರಿಪೋರ್ಟ್ ಮಾಡಿದ್ದು, ನಾವು ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಅನನುಕೂಲತೆಗಾಗಿ ಕ್ಷಮೆ ಕೇಳುತ್ತೇವೆ ಎಂದೂ ಹೇಳಿಕೊಂಡಿದೆ.
ಎಚ್‌ಡಿಎಫ್‌ಸಿ ಹಲವು ಗ್ರಾಹಕರಿಗೆ ಇಂದು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ಸಮಸ್ಯೆಯಾಗಿದ್ದು, ಟ್ವಿಟರ್, ಸೋಷಿಯಲ್ ಮೀಡಿಯಾಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಎಚ್‌ಡಿಎಫ್‌ಸಿ ಆ್ಯಪ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ ಕೂಡ ಪದೇಪದೆ ಹೀಗೆ ಆಗುತ್ತಿತ್ತು. ಆಗ ಎಲ್ಲ ಡಿಜಿಟಲ್ ಲಾಂಚ್ಗಳನ್ನೂ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್ಬಿಐ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೇಳಿತ್ತು.
ಇಂದು ಕೂಡ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ತುಂಬ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇದು ಹಣಕಾಸು ವರ್ಷದ ಅಂತ್ಯ. ಈಗಲೇ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕೈಕೊಟ್ಟಿವೆ. ವ್ಯವಹಾರಕ್ಕೆ ತುಂಬ ತೊಡಕಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ನ ಡಿಜಿಟಲ್ ಸೇವೆಗಳು ಸಂಪೂರ್ಣವಾಗಿ ಸರಿ ಹೋಗುವುದಾದರೂ ಯಾವಾಗ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: PM Modi in Tamil Nadu: ವಿಧಾನಸಭೆಯಲ್ಲಿ ಡಿಎಂಕೆ ನಾಯಕರು ಜಯಲಲಿತಾ ಜತೆ ವರ್ತಿಸಿದ್ದನ್ನು ಮರೆಯಬಾರದು: ನರೇಂದ್ರ ಮೋದಿ
ಬೆಳಗಾವಿಯಲ್ಲೇ ವಾಸ್ತವ್ಯ ಹೂಡಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸದಲ್ಲಿ ದಿಢೀರ್ ಬದಲಾವಣೆ