ತಮಿಳುನಾಡಿನಲ್ಲಿ ಮುಂದುವರೆದ ಭಾರೀ ಮಳೆ: ನ.16ರ ವರೆಗೂ ಮಳೆ ಸಾಧ್ಯತೆ, ಮೈಲಾಡುತುರೈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

| Updated By: ಆಯೇಷಾ ಬಾನು

Updated on: Nov 14, 2022 | 8:08 AM

ಮುಂದಿನ ದಿನಗಳಲ್ಲಿ ಚೆನ್ನೈ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು ನವೆಂಬರ್ 16ರ ವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಮುಂದುವರೆದ ಭಾರೀ ಮಳೆ: ನ.16ರ ವರೆಗೂ ಮಳೆ ಸಾಧ್ಯತೆ, ಮೈಲಾಡುತುರೈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಮಳೆ
Follow us on

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದ ತಮಿಳುನಾಡಿನಾದ್ಯಂತ(Tamil Nadu ) ಭಾರೀ ಮಳೆ ಮುಂದುವರೆದಿದೆ. ಭಾರತೀಯ ಹವಾಮಾನ ಇಲಾಖೆ(IMD) ತಮಿಳುನಾಡಿನ ತಿರುವಳ್ಳೂರು, ರಾಣಿಪೇಟ್ ಮತ್ತು ಕಾಂಚೀಪುರಂ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್(Red Alert) ಘೋಷಿಸಿದೆ ಮತ್ತು ಮುಂದಿನ ದಿನಗಳಲ್ಲಿ ಚೆನ್ನೈ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹಾಗೂ ನವೆಂಬರ್ 16ರ ವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದೆ. ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮುನೆಚ್ಚರಿಕಾ ಕ್ರಮವಾಗಿ ಮೈಲಾಡುತುರೈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದೆ. ಶುಕ್ರವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತವಾಗಿವೆ. ಮಧುರೈ, ಕಾಂಚೀಪುರಂ ಮತ್ತು ತ್ರಿವಲ್ಲೂರಿನಲ್ಲಿ ನಿರಂತರ ಮಳೆಯ ಕಾರಣ ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಇದಲ್ಲದೆ, ಶಿವಗಂಗಾ, ದಿಂಡಿಗಲ್, ಥೇಣಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ IMD ಪ್ರವಾಹ ಎಚ್ಚರಿಕೆ ನೀಡಿದೆ. 4,230 ಕ್ಯೂಬಿಕ್ ಅಡಿ ಹೆಚ್ಚುವರಿ ನೀರನ್ನು ಒಂದು ಅಳತೆಯಾಗಿ ಹೊರಹಾಕಲಾಗಿದೆ ಎಂದು ಥೇನಿಯ ವೈಗಂ ಅಣೆಕಟ್ಟು ಸೈಟ್‌ನ ಅಧಿಕಾರಿಯೊಬ್ಬರು ಖಾಸಗಿ ನ್ಯೂಸ್ ಎಜೆನ್ಸಿಗೆ ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವು ಮಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 8:08 am, Mon, 14 November 22