ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ

Maharashtra Helicopter Crash: ಮಹಾರಾಷ್ಟ್ರದ ಜಲಗಾವ್​ ಪಟ್ಟಣದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ
ಮಹಾರಾಷ್ಟ್ರದ ಜಲಗಾವ್​ ಸಮೀಪ ಪತನಗೊಂಡಿರುವ ಹೆಲಿಕಾಪ್ಟರ್​
Edited By:

Updated on: Jul 16, 2021 | 6:48 PM

ಮುಂಬೈ: ಮಹಾರಾಷ್ಟ್ರದ ಜಲಗಾವ್​ ಪಟ್ಟಣದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ಜಲಗಾವ್ ಜಿಲ್ಲೆಯ ಚೊಪ್ರಾ ತಾಲ್ಲೂಕಿನ ವರ್ಡಿ ಶಿವಾರಾ ಸಮೀಪ ಸಂಜೆ 4.30ಕ್ಕೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಮತ್ತೋರ್ವ ಮಹಿಳಾ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಪೈಲಟ್​ ಹೆಸರು ಅಂಶಿಕಾ ಗುರ್ಜರ್​ ಎಂದು ತಿಳಿದುಬಂದಿದೆ.

ತಹಶೀಲ್ದಾರ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹೆಲಿಕಾಪ್ಟರ್​ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಹೆಲಿಕಾಪ್ಟರ್​ ಪತನಗೊಳ್ಳಲು ಏನು ಕಾರಣ ಎಂಬುದು ನಿಖರವಾಗಿ ಪತ್ತೆಯಾಗಿಲ್ಲ. ಸ್ಥಳೀಯ ಬುಡಕಟ್ಟು ಜನರು ಗಾಯಾಳು ಮಹಿಳಾ ಪೈಲಟ್​ ಅವರಿಗೆ ಆರೈಕೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

(Helicopter crashes in Maharashtra’s Jalgaon 1 pilot dead another injured)

ಇದನ್ನೂ ಓದಿ: ಸ್ವೀಡನ್‌ನ ಒರೆಬ್ರೊ ಬಳಿ ವಿಮಾನ ಪತನ; 8 ಸ್ಕೈಡೈವರ್ಸ್, ಓರ್ವ ಪೈಲಟ್ ದುರ್ಮರಣ

ಇದನ್ನೂ ಓದಿ: 13 ಪ್ರಯಾಣಿಕರಿದ್ದ ರಷ್ಯಾದ ವಿಮಾನ ಸೈಬೀರಿಯಾ ಸಮೀಪ ನಾಪತ್ತೆ

Published On - 6:15 pm, Fri, 16 July 21