Video Viral: ಸಮಾಜದಲ್ಲಿ ಹೆಣ್ಣು ಅಡುಗೆಮನೆಗೆ ಸೀಮಿತ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ, ಖ್ಯಾತ ಚಾಯ್​ವಾಲಿ ಕಣ್ಣೀರು!

ಬಿಹಾರದ ಅರ್ಥಶಾಸ್ತ್ರ ಪದವೀಧರರಾಗಿರುವ ಅವರು, ಕೆಲಸ ಸಿಗದ ಕಾರಣ ಒಂದು ಟೀ ಸ್ಟಾಲ್ ಸ್ಥಾಪಿಸಲು ಬಯಸಿದ್ದಾರೆ, ಆದರೆ ಈ ಸ್ಟಾಲ್ ಮಾಡಲು ಅನುಮತಿಯವಿದ್ದರು, ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಪದೇ ಪದೇ ತನ್ನ ಗಾಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Video Viral: ಸಮಾಜದಲ್ಲಿ ಹೆಣ್ಣು ಅಡುಗೆಮನೆಗೆ ಸೀಮಿತ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ, ಖ್ಯಾತ ಚಾಯ್​ವಾಲಿ ಕಣ್ಣೀರು!
famous Graduate Chaiwali, Priyanka Gupta

Updated on: Nov 16, 2022 | 11:37 AM

ಇದು ಬಿಹಾರ ಇಲ್ಲಿ ಹೆಣ್ಮಕ್ಕಳು ಅಡುಗೆ ಮಾಡಲು ಮಾತ್ರ ಸಿಮೀತ, ಸ್ವಂತ ದುಡಿಮೆ ಮಾಡಲು ಬಿಡುವುದಿಲ್ಲ ಎಂದು ಒಬ್ಬ ಪದವೀಧರ ಯುವತಿ ತನ್ನ ಮನಸ್ಸಿನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹೌದು ಬಿಹಾರದ ಪ್ರಸಿದ್ಧ ಚಾಯ್​​ವಾಲಿ ಪ್ರಿಯಾಂಕಾ ಗುಪ್ತಾ ಅವರ ತಮಗೆ ಆಗಿರುವ ಅನ್ಯಾಯದ ಬಗ್ಗೆ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.  ಈ ವಿಡಿಯೋದಲ್ಲಿ ಆಕೆ ಅಳುತ್ತಾ ತಮ್ಮ ಟೀ ಸ್ಟಾಲ್​ನ್ನು ಸರ್ಕಾರವು ಹೇಗೆ ವಶಪಡಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ.

ಬಿಹಾರದ ಅರ್ಥಶಾಸ್ತ್ರ ಪದವೀಧರರಾಗಿರುವ ಅವರು, ಕೆಲಸ ಸಿಗದ ಕಾರಣ ಒಂದು ಟೀ ಸ್ಟಾಲ್ ಸ್ಥಾಪಿಸಲು ಬಯಸಿದ್ದಾರೆ, ಆದರೆ ಈ ಸ್ಟಾಲ್ ಮಾಡಲು ಅನುಮತಿಯವಿದ್ದರು, ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಪದೇ ಪದೇ ತನ್ನ ಗಾಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರದಲ್ಲಿ ನಾನು ವಿಭಿನ್ನವಾಗಿ ಏನಾದರೂ ಮಾಡಬಹುದು ಎಂದು ಕನಸು ಕಂಡಿದೆ. ಆದರೆ ಇದು ಬಿಹಾರ. ಇಲ್ಲಿ ಹುಡುಗಿಯರ ಸ್ಥಾನಮಾನವು ಅಡುಗೆಮನೆಗೆ ಸೀಮಿತವಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ವೈರಲ್ ಆದ ನಂತರ, ಅಧಿಕಾರಿಗಳು ಅವರ ಟೀ ಸ್ಟಾಲ್​ನ್ನು ನಿಲ್ಲಿಸಲು ಸ್ಥಳವನ್ನು ನೀಡಿದರು ಎಂದು ವರದಿಗಳು ಹೇಳಿದೆ.

ಪಾಟ್ನಾ ಮುನ್ಸಿಪಲ್ ಕಾರ್ಪೊರೇಶನ್‌ನ ಕಮಿಷನರ್‌ನಿಂದ ಅನುಮತಿ ಪಡೆದ ನಂತರ ಕೆಲವು ದಿನಗಳವರೆಗೆ ಈ ಸ್ಥಳದಲ್ಲಿ ತನ್ನ ಸ್ಟಾಲ್​ನ್ನು ಇಟ್ಟಿದೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಆದರೆ ನಂತರ ಅಧಿಕಾರಿಗಳು ತನ್ನ ಟೀ ಸ್ಟಾಲ್​ನ್ನು ಈ ಸ್ಥಳದಿಂದ ತೆಗೆದಿದ್ದಾರೆ ಎಂದು ಹೇಳಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಮುಚ್ಚಿದ ನಂತರ ನಾವು ಮನೆಯಲ್ಲಿಯೇ ಇರಬೇಕಿತ್ತು. ಜೀವನಕ್ಕೆ ಒಂದು ಆಧಾರ ಬೇಕು ಎಂದು ಟೀ ಸ್ಟಾಲ್ ಮಾಡಿದೆ.  ಹುಡುಗಿ ಎಂದು ನನ್ನ ಸ್ಥಾನಮಾನವನ್ನು ತೋರಿಸಿದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಬಿಹಾರದ ವ್ಯವಸ್ಥೆಗೆ ಧನ್ಯವಾದಗಳು, ಮನೆಯಲ್ಲಿಯೇ ಇರಿ. ತನ್ನ ಗಾಡಿಯನ್ನು ಹಲವಾರು ಬಾರಿ ಟಾರ್ಗೆಟ್ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ.

Published On - 11:33 am, Wed, 16 November 22