ಹಿಮಾಚಲ ಪ್ರದೇಶ: ರೋಪ್​ ವೇಯಲ್ಲಿ ತಾಂತ್ರಿಕ ದೋಷ, ಅತಂತ್ರ ಸ್ಥಿತಿಯಲ್ಲಿ ಸಹಾಯ ಬೇಡುತ್ತಿರುವ ಪ್ರವಾಸಿಗರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 20, 2022 | 3:30 PM

ಆಗಸದಲ್ಲಿ ತೂಗಾಡುತ್ತಿರುವ ಕೇಬಲ್​ ಕಾರ್​ನ ಒಳಗಿರುವ ಜನರು ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೊಗಳು ವೈರಲ್ ಆಗಿವೆ.

ಹಿಮಾಚಲ ಪ್ರದೇಶ: ರೋಪ್​ ವೇಯಲ್ಲಿ ತಾಂತ್ರಿಕ ದೋಷ, ಅತಂತ್ರ ಸ್ಥಿತಿಯಲ್ಲಿ ಸಹಾಯ ಬೇಡುತ್ತಿರುವ ಪ್ರವಾಸಿಗರು
ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿರುವ ಕೇಬಲ್ ಕಾರ್
Follow us on

ಶಿಮ್ಲಾ: ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ಪಾರ್​ವನೂ ಟಿಂಬರ್ ಮಾರ್ಗದ ರೋಪ್​ ವೇ (Ropeway) ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕೇಬಲ್ ಕಾರ್ (Cable Car) ಒಂದು ಆಗಸದಲ್ಲಿಯೇ ತೇಲಾಡುತ್ತಿದೆ. ಈ ಕೇಬಲ್ ಕಾರ್​ನಲ್ಲಿ ಸುಮಾರು 7 ಪ್ರವಾಸಿಗರು ಇರಬಹುದು ಎಂದು ಅಂದಾಜಿಸಲಾಗಿದೆ. ತಂತ್ರಜ್ಞರೊಂದಿಗೆ ಮತ್ತೊಂದು ಕೇಬಲ್ ಕಾರ್ ಅನ್ನು ಸ್ಥಳಕ್ಕೆ ಕಳಿಸಲಾಗಿದ್ದು, ವಸ್ತುಸ್ಥಿತಿ ಪರಿಶೀಲನೆ ಮತ್ತು ರಿಪೇರಿ ಪ್ರಯತ್ನಗಳು ಆರಂಭವಾಗಿವೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೊಲನ್ ಜಿಲ್ಲೆಯ ಎಸ್​ಪಿ, ‘ಟಿಂಬರ್ ಟ್ರೈಲ್ ಸಂಸ್ಥೆಯು ತಾಂತ್ರಿಕ ತಂಡವನ್ನು ಕಳಿಸಿದೆ. ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಹೇಳಿದ್ದಾರೆ.

ರೋಪ್​ ವೇಯಲ್ಲಿ ಕೇಬಲ್ ಕಾರ್ ಸಿಲುಕಿರುವ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪ್ರವಾಸಿಗರು ಹಂಚಿಕೊಂಡಿರುವ ಇಂಥದ್ದೊಂದು ವಿಡಿಯೊದಲ್ಲಿ ಕೇಬಲ್ ಕಾರ್ ತೂಗಾಡುತ್ತಿರುವ ಮತ್ತು ಅದರೊಳಗಿರುವ ಜನರು ಸಹಾಯಕ್ಕಾಗಿ ಕೂಗುತ್ತಿರುವ ದೃಶ್ಯವಿದೆ. ಸುಮಾರು ಒಂದು ತಾಸಿನಿಂದ ಈ ಕೇಬಲ್ ಕಾರ್​ನಲ್ಲಿ ಸಿಲುಕಿದ್ದೇವೆ. ನಮ್ಮ ರಕ್ಷಣೆಗೆ ಯಾರೂ ಬಂದಿಲ್ಲ ಎಂದು ಪ್ರವಾಸಿಗರೊಬ್ಬರು ಹೇಳಿಕೊಂಡಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Mon, 20 June 22