AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ರೈಲಿನಲ್ಲಿ ಭಯವಾಗ್ತಿದೆ ಎಂದು ಪೋಷಕರಿಗೆ ಕರೆ ಮಾಡಿದ್ದ ವಿದ್ಯಾರ್ಥಿನಿ ಬಳಿಕ ಶವವಾಗಿ ಪತ್ತೆ

ಅಸ್ಸಾಂ ವಿದ್ಯಾರ್ಥಿನಿ ರೈಲಿನಲ್ಲಿ ಅಸುರಕ್ಷಿತೆ ಎಂದ ಕರೆ ಮಾಡಿದ ಬಳಿಕ ಮೃತದೇಹವಾಗಿ ಪತ್ತೆಯಾಗಿದೆ. ವಿಶಾಖಪಟ್ಟಣದಿಂದ ಮರಳುತ್ತಿದ್ದ ಆಕೆ, ಕುಡುಕರಿಂದ ಭಯಗೊಂಡಿದ್ದಾಗಿ ಕುಟುಂಬಕ್ಕೆ ತಿಳಿಸಿದ್ದರು. ಕುಟುಂಬ ಆರ್‌ಪಿಎಫ್ ನಿರ್ಲಕ್ಷ್ಯ ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದೆ. ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಪ್ರಯಾಣಿಕರ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆ ರೈಲು ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನನಗೆ ರೈಲಿನಲ್ಲಿ ಭಯವಾಗ್ತಿದೆ ಎಂದು ಪೋಷಕರಿಗೆ ಕರೆ ಮಾಡಿದ್ದ ವಿದ್ಯಾರ್ಥಿನಿ ಬಳಿಕ ಶವವಾಗಿ ಪತ್ತೆ
ರೈಲು-ಸಾಂದರ್ಭಿಕ ಚಿತ್ರ Image Credit source: The Railway Technology
ನಯನಾ ರಾಜೀವ್
|

Updated on:Oct 09, 2026 | 8:48 AM

Share

ಗುವಾಹಟಿ, ಅಕ್ಟೋಬರ್ 09: ರೈಲಿನಲ್ಲಿ ಪ್ರಯಾಣಿಸುವಾಗ ಅಸುರಕ್ಷಿತ ಭಾವನೆ ವ್ಯಕ್ತಪಡಿಸಿ ಕುಟುಂಬಕ್ಕೆ ಕರೆ ಮಾಡಿದ್ದ ಅಸ್ಸಾಂನ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿದೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಕುಟುಂಬವು ರೈಲ್ವೆ ಭದ್ರತಾ ಪಡೆ (RPF) ನಿರ್ಲಕ್ಷ್ಯದ ಆರೋಪ ಮಾಡಿದೆ. ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೃತ್ಯ ಸ್ಪರ್ಧೆಯಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿ

ಅಸ್ಸಾಂನ ಕಾಮರೂಪ ಮಹಾನಗರ ಜಿಲ್ಲೆಯ ಬೋಂಡಾ ಪ್ರದೇಶದ ನಿವಾಸಿಯಾಗಿದ್ದ  ವಿದ್ಯಾರ್ಥಿನಿ, ಗುವಾಹಟಿಯ ಬಿ. ಬರೂವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದರು. ಪರೀಕ್ಷೆ ಇದ್ದ ಕಾರಣ ತಂಡದ ಇತರ ಸದಸ್ಯರಿಗಿಂತ ಮೊದಲೇ ಒಬ್ಬರೇ ಮನೆಗೆ ಮರಳುತ್ತಿದ್ದರು. ಅಕ್ಟೋಬರ್ 6ರ ಮಧ್ಯರಾತ್ರಿ ಸುಮಾರಿಗೆ ಅವರು ವಿಶಾಖಪಟ್ಟಣ ರೈಲು ನಿಲ್ದಾಣದಿಂದ ಕನ್ಯಾಕುಮಾರಿ–ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದರು.

ರೈಲಿನಲ್ಲಿ ನನಗೆ ಸುರಕ್ಷಿತವೆನಿಸುತ್ತಿಲ್ಲ

ಕುಟುಂಬದ ಪ್ರಕಾರ, ರೈಲು ಹತ್ತಿದ ಬಳಿಕ ವಿದ್ಯಾರ್ಥಿನಿ ತಮ್ಮ ಅತ್ತಿಗೆ ಮತ್ತು ಸ್ನೇಹಿತೆಗೆ ಕರೆ ಮಾಡಿ, ಬೋಗಿಯಲ್ಲಿದ್ದ ಕೆಲವು ಪುರುಷರು ಕುಡಿದ ಮತ್ತಿನಲ್ಲಿದ್ದು, ಅಲ್ಲಿನ ವಾತಾವರಣದಿಂದ ತಮಗೆ ಅಸುರಕ್ಷಿತವೆನಿಸುತ್ತಿದೆ ಎಂದು ತಿಳಿಸಿದ್ದರು. ಅವರು ರೈಲಿನ ಬೋಗಿಯ ವಿಡಿಯೊವೊಂದನ್ನೂ ಸ್ನೇಹಿತೆಗೆ ಕಳುಹಿಸಿದ್ದರು. ಅಕ್ಟೋಬರ್ 6ರ ಮುಂಜಾನೆ ಸುಮಾರು 2.30ರಿಂದ 3 ಗಂಟೆಯ ನಡುವೆ ಕುಟುಂಬದವರೊಂದಿಗೆ ಸಂಪರ್ಕ ಕಡಿತಗೊಂಡಿತು. ಬಳಿಕ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.

ರೈಲ್ವೆ ಸಹಾಯವಾಣಿಗೆ ದೂರು ನೀಡಿದ್ದ ಕುಟುಂಬ

ಹಿಮಶ್ರೀ ಸಂಪರ್ಕಕ್ಕೆ ಸಿಗದಿದ್ದರಿಂದ ಕುಟುಂಬದವರು ರೈಲ್ವೆ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ರೈಲ್ವೆ ಮದದ್ ಪೋರ್ಟಲ್‌ನಲ್ಲಿಯೂ ಮಹಿಳಾ ಪ್ರಯಾಣಿಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕುರಿತು ದೂರು ದಾಖಲಾಗಿತ್ತು ಎಂದು ಈಶಾನ್ಯ ಗಡಿನಾಡು ರೈಲ್ವೆ ತಿಳಿಸಿದೆ. ದೂರಿನ ಹಿನ್ನೆಲೆಯಲ್ಲಿ ಶ್ರೀಕಾಕುಳಂ ರಸ್ತೆ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ರೈಲಿನ ಸಾಮಾನ್ಯ ಮತ್ತು ಸ್ಲೀಪರ್ ಬೋಗಿಗಳನ್ನು ಪರಿಶೀಲಿಸಿದರು. ಆದರೆ,  ಆಕೆ ಪತ್ತೆಯಾಗಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ,  ಮಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕುಟುಂಬಕ್ಕೆ ಸಿಗಲಿಲ್ಲ. ಬಳಿಕ ಅವರ ಮೃತದೇಹ ರೈಲ್ವೆ ಹಳಿಗಳ ಬಳಿ ಪತ್ತೆಯಾಯಿತು. ಅವರ ಎರಡು ಚೀಲಗಳು ರೈಲಿನ ಬೋಗಿಯಲ್ಲೇ ಇದ್ದವು ಎಂದು ಕುಟುಂಬದವರು ಹೇಳಿದ್ದಾರೆ.

ಸಾವಿನ ಬಗ್ಗೆ ಎರಡು ವಿಭಿನ್ನ ವಾದಗಳು

ವಿದ್ಯಾರ್ಥಿನಿಯ ಕುಟುಂಬವು ಸಾವಿನ ಹಿಂದೆ ಅನುಮಾನಾಸ್ಪದ ಸಂಗತಿಗಳಿವೆ ಎಂದು ಆರೋಪಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದೆ. ರೈಲ್ವೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಇನ್ನೊಂದೆಡೆ, ಪಲಾಸಾ ಸರ್ಕಾರಿ ರೈಲ್ವೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಕೆ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಅವರು ಹೇಗೆ ರೈಲಿನಿಂದ ಹೊರಬಂದರು ಮತ್ತು ಸಾವಿಗೆ ನಿಖರವಾಗಿ ಏನು ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ.

ಮತ್ತಷ್ಟು ಓದಿ: ದೆಹಲಿ ಸೀಮಾಪುರಿ ಕಟ್ಟಡ ಕುಸಿತ; ಇಬ್ಬರು ಮಕ್ಕಳು, ಗರ್ಭಿಣಿ ಸೇರಿದಂತೆ ಮೂವರು ಸಾವು

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ

ಶ್ರೀಕಾಕುಳಂ ಜಿಲ್ಲೆಯ ಪೊಂಡೂರು ಮತ್ತು ದುಸಿ ರೈಲ್ವೆ ವಿಭಾಗಗಳ ನಡುವಿನ ಹಳಿಗಳ ಬಳಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನು ಶ್ರೀಕಾಕುಳಂನ ಸರ್ಕಾರಿ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ, ಕಾನೂನು ಪ್ರಕ್ರಿಯೆ ಹಾಗೂ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದಾರೆ. ವಿಶಾಖಪಟ್ಟಣ, ವಿಜಯನಗರಂ ಮತ್ತು ಶ್ರೀಕಾಕುಳಂ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಿಮಶ್ರೀ ಪ್ರಯಾಣಿಸಿದ ಬೋಗಿಯಲ್ಲಿದ್ದ ಪ್ರಯಾಣಿಕರು ಮತ್ತು ಅವರನ್ನು ರೈಲು ನಿಲ್ದಾಣಕ್ಕೆ ಕರೆತಂದ ವ್ಯಕ್ತಿಯ ಹೇಳಿಕೆಗಳನ್ನೂ ದಾಖಲಿಸಲಾಗುತ್ತಿದೆ. ಆರ್‌ಪಿಎಫ್ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಅಸ್ಸಾಂ ಹಾಗೂ ಆಂಧ್ರಪ್ರದೇಶದ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ತನಿಖೆ ಮುಂದುವರಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಂದ ನ್ಯಾಯಕ್ಕೆ ಆಗ್ರಹ

ಹಿಮಶ್ರೀ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ, ಘಟನೆಗೆ ಕಾರಣರಾದವರಿದ್ದರೆ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುವಾಹಟಿಯ ಅವರ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ಪರಿಶೀಲನೆ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಸಾವಿನ ಕಾರಣವನ್ನು ನಿರ್ಧರಿಸಬೇಕಿದೆ. ಆಕೆಯ ಸಾವು ಅಪಘಾತವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:44 am, Fri, 9 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’