ದೆಹಲಿ: ಇಂದಿನಿಂದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ. ಹಲವು ಮಾರ್ಗಸೂಚಿ ಜೊತೆಗೆ ಸ್ಮಾರಕ ತಾಣಗಳು ಮತ್ತೆ ಓಪನ್ ಆಗುತ್ತವೆ. ಆದರೆ ಬೇಸರದ ಸಂಗತಿ ಎಂದರೆ ಪ್ರೇಮ ಸೌಧ, ಪ್ರೀತಿಯ ಸಂಕೇತವಾಗಿರುವ ತಾಜ್‌ಮಹಲ್ ವೀಕ್ಷಣೆಗೆ ಮಾತ್ರ ಅವಕಾಶವಿಲ್ಲ.
ಆಗ್ರಾದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ತಾಜ್ ಮಹಲ್ ಆಗ್ರಾದ ಬಫರ್ ಜೋನ್ನಲ್ಲಿದೆ. ಹೀಗಾಗಿ ತಾಜ್‌ಮಹಲ್ ಓಪನ್ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮುಂದಿನ ಆದೇಶದವರೆಗೆ ತಾಜ್‌ಮಹಲ್ ಓಪನ್ ಆಗುವುದಿಲ್ಲ.
ಇನ್ನು ದೆಹಲಿಯ ಕೆಂಪುಕೋಟೆ, ಕುತೂಬ್ ಮಿನಾರ್, ಸಾಂಚಿ ಸ್ತೂಪ, ಸಫ್ದರ್ ಜಂಗ್ ಗೋರಿ, ಪುರಾನಾ ಕಿಲಾ ಸ್ಮಾರಕಗಳು ಓಪನ್ ಆಗುತ್ತವೆ. ವಿಶ್ವವಿಖ್ಯಾತ ತಾಜ್ ಮಹಲ್ ಬಾಗಿಲು ಮಾತ್ರ ಇಂದು ತೆರೆಯಲ್ಲ. ಉಳಿದ ಸ್ಮಾರಕ ತೆರೆಯಲು ಕೇಂದ್ರ ಸಂಸ್ಕೃತಿ ಇಲಾಖೆ ಅನುಮತಿ ನೀಡಿದೆ. ಎಂದಿನಂತೆ ಪ್ರವಾಸಿಗರು ತಮ್ಮ ನೆಚ್ಚಿನ ಸ್ಮಾರಕಗಳ ಸೌಂದರ್ಯವನ್ನು ಸವಿಯಬಹುದು. ಸ್ಮಾರಕಗಳ ಪ್ರವೇಶಕ್ಕೂ ಮುನ್ನ ಕೊರೊನಾ ಎಚ್ಚರಿಕೆಯ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತೆ.